ಜಗಜೀವನ್‌ರಾಮರ ತತ್ವ ಸಿದ್ಧಾಂತ ಪಾಲನೆ ಮಾಡಿ

Follow Jagjivan Ram's philosophy
ಹುನಗುಂದ ತಹಸೀಲ್ದಾರ್ ಸಭಾಭವನದಲ್ಲಿ ಬಾಬು ಜಗಜೀವನ್‌ರಾಮ್ ಭಾವಚಿತ್ರಕ್ಕೆ ತಹಸೀಲ್ದಾರ್ ನಿಂಗಪ್ಪ ಬಿರಾದಾರ ಪೂಜೆ ಸಲ್ಲಿಸಿದರು. ಚುನಾವಣಾಧಿಕಾರಿ ಶ್ರೀಧರ ಗೋಟೂರ, ಸಿಪಿಐ ಸುನೀಲ ಸವದಿ, ಬಿಇಒ ಜಾಸ್ಮೀನ್ ಕಿಲ್ಲೆದಾರ, ಸಮಾಜ ಕಲ್ಯಾಣಾಧಿಕಾರಿ ಎಂ.ಎಚ್. ಕಟ್ಟಿಮನಿ ಇತರರಿದ್ದರು.
Published on

ಹುನಗುಂದ: ಹಸಿರು ಕ್ರಾಂತಿಯ ಹರಿಕಾರ ಬಾಬು ಜಗಜೀವನ್‌ರಾಮ್ ನಡೆದು ಬಂದ ಹಾದಿಯಲ್ಲಿ ನಾವೆಲ್ಲರೂ ನಡೆಯಬೇಕು. ಅವರ ಆದರ್ಶ ತತ್ವ ಸಿದ್ಧಾಂತಗಳನ್ನು ಯುವಕರು ಮೈಗೂಡಿಸಿಕೊಳ್ಳಬೇಕೆಂದು ತಹಸೀಲ್ದಾರ್ ನಿಂಗಪ್ಪ ಬಿರಾದಾರ ತಿಳಿಸಿದರು.

ಪಟ್ಟಣದ ತಹಸೀಲ್ದಾರ್ ಸಭಾಭವನದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿಯಿಂದ ಶುಕ್ರವಾರ ಹಮ್ಮಿಕೊಳ್ಳಲಾಗಿದ್ದ ಬಾಬು ಜಗಜೀವನ್‌ರಾಮ್ ಅವರ 117ನೇ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚಣೆ ಮಾಡಿ ಮಾತನಾಡಿದರು.

ಚುನಾವಣಾಧಿಕಾರಿ ಶ್ರೀಧರ ಗೋಟೂರ, ಸಿಪಿಐ ಸುನೀಲ ಸವದಿ, ಬಿಇಒ ಜಾಸ್ಮೀನ್ ಕಿಲ್ಲೆದಾರ, ಸಮಾಜ ಕಲ್ಯಾಣಾಧಿಕಾರಿ ಎಂ.ಎಚ್. ಕಟ್ಟಿಮನಿ, ಉಪ ತಹಸೀಲ್ದಾರ್ ಈಶ್ವರ ಗಡ್ಡಿ, ಬಿಆರ್‌ಸಿ ಅಧಿಕಾರಿ ವಿನೋದ ಭೋವಿ, ಸಂಗಮೇಶ ಹೊದ್ಲೂರ, ದೈಹಿಕ ಪರಿವೀಕ್ಷಕ ನಾಗರಾಜ ಹೊಸೂರ, ರೇಷ್ಮೆ ಇಲಾಖೆ ಅಧಿಕಾರಿ ಎಸ್.ಎಚ್. ಮುಕ್ಕಣ್ಣವರ, ಯಮನೂರ ಮೇಟಿ, ಶಿರಸ್ತೆದಾರ ಶ್ರವಣ ಮುಂಡೇವಾಡಿ, ಮುಖಂಡರಾದ ವಿಜಯ ಭಾವಿಕಟ್ಟಿ, ಮಾರುತಿ ಭಾವಿಕಟ್ಟಿ, ರವಿ ಮಸ್ಕಿ, ಸಂಗಪ್ಪ ಚಲವಾದಿ, ಸಾಂತಪ್ಪ ಮಸ್ಕಿ, ಸಾಂತು ಮೂಕಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net