

ಸರ್ಜಾಪುರ : ಬೆಸ್ಕಾಂ ಎಷ್ಟೇ ಕಟ್ಟು ನಿಟ್ಟಿನ ನಿಯಮ ಜಾರಿ ಮಾಡಿದರೂ ಸಾರ್ವಜನಿಕ ವಲಯದ ರ್ನಿಲಕ್ಷ$್ಯದಿಂದ ವಿದ್ಯುತ್ ಅವಡಗಳು ಸಂಭವಿಸಿ ಅಮಾಯಕರು ಬಲಿಯಾಗುತ್ತಿರುವುದು ನೋವಿನ ಸಂಗತಿ. ಆದ್ದರಿಂದ ಸಾರ್ವಜನಿಕರು ವಿದ್ಯುತ್ ಅವಡ ಸಂಭವಿಸದಂತೆ ಸುರತಾ ಕ್ರಮಗಳಿಗೆ ಆದ್ಯತೆ ನೀಡಬೇಕಿದೆ ಎಂದು ಬೆಸ್ಕಾಂ ಅತ್ತಿಬೆಲೆ ಉಪ ವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತ ರಾಜ್ ಕುಮಾರ್ ಸಲಹೆ ನೀಡಿದರು
ಪಟ್ಟಣದಲ್ಲಿ ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ ಅತ್ತಿಬೆಲೆ ಉಪ ವಿಭಾಗ ಮತ್ತು ಸರ್ಜಾಪುರ ಬೆಸ್ಕಾಂನಿಂದ ಬುಧವಾರ ಆಯೋಜಿಸಿದ್ದ ವಿದ್ಯುತ್ ಸುರತಾ ಸಪ್ತಾಹ ಜಾಗೃತಿ ಜಾಥಾದಲ್ಲಿ ಮಾತನಾಡಿದ ಅವರು, ಇಲಾಖೆ ರೂಪಿಸಿರುವ ನಿಯಮಗಳನ್ನು ತಪ್ಪದೇ ಪಾಲಿಸಬೇಕಾಗಿದೆ. ವಿದ್ಯುತ್ ಕಂಬಗಳಿಗೆ ಬ್ಯಾನರ್ ಆಥವಾ ಜಾಹೀರಾತು ನಾಮಫಲಕ ಕಟ್ಟುವುದನ್ನು ನಿಲ್ಲಿಸಬೇಕು. ಕಂಬಗಳಿಗೆ ತಂತಿ ಕಟ್ಟಿ ಬಟ್ಟೆ ಒಣಗಿಸುವುದು ಮತ್ತು ಜಾನುವಾರುಗಳನ್ನು ಕಟ್ಟುವುದು ಅಪಾಯಕಾರಿ. ಇದರಿಂದಾಗಿ ಹೆಚ್ಚಿನ ವೋಲ್ವೇಜ್ ಬಂದು ಅಪಘಾತ ಸಂಭವಿಸುತ್ತಿವೆ. ನೆರೆಹೊರೆಯಲ್ಲಿ ಇಂತಹ ಕೆಲಸಗಳು ಕಂಡುಬಂದರೆ ಸಾರ್ವಜನಿಕರು ಬೆಸ್ಕಾಂ ಅಧಿಕಾರಿಗಳ ಗಮನಕ್ಕೆ ತರಬೇಕು ಅಥವಾ 1912 ಸಂಖ್ಯೆಗೆ ಕರೆ ಮಾಡಿ ತಿಳಿಸಬೇಕು ಎಂದರು.
ಸರ್ಜಾಪುರ ಗ್ರಾಪಂ ಮಾಜಿ ಅಧ್ಯ ಎಸ್.ವೈ.ಶಂಭಯ್ಯ, ಎಸ್.ಎಂ.ಶ್ರೀನಿವಾಸ್, ಎಸ್.ವಿ.ಶ್ರೀನಿವಾಸ್, ಬುಡಗಪ್ಪ, ಸುನೀತಾ ಶಶಿಧರ್, ಅಧ್ಯೆ ಕಲಾವತಿ ಮೂರ್ತಿಕುಮಾರ್, ಉಪಾಧ್ಯ ಡಾ.ಎಸ್.ಮಂಜುನಾಥ್ ಸರ್ಜಾ, ಸದಸ್ಯರಾದ ಎ.ಸತೀಶ್ ಕುಮಾರ್, ರೇಣುಕಮ್ಮ, ವೀಣಾ, ಭರತ್, ಗಣೇಶ್, ಶಹಾಜನ್ ಉನ್ನೀಸಾ, ಗ್ರಾಪಂ ಮತ್ತು ಬೆಸ್ಕಾಂ ಸಿಬ್ಬಂದಿ ಇದ್ದರು.
ಜಾಗೃತಿ ಜಾಥಾ : ಸರ್ಜಾಪುರದ ಬೆಸ್ಕಾಂ ಕಚೇರಿಯಲ್ಲಿ ಕಾರ್ಯ ನಿರ್ವಹಿಸುವ ಸಿಬ್ಬಂದಿಗೆ ಅತ್ತಿಬೆಲೆ ಉಪ ವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರ ರಾಜ್ ಕುಮಾರ್ ವಿದ್ಯುತ್ ಸುರತೆ ಕುರಿತು ಪ್ರತಿಾವಿಧಿ ಬೋಧಿಸಿದರು. ಜಾಗೃತಿ ಜಾಥಾ ಸರ್ಜಾಪುರದ ಮುಖ್ಯ ಬೀದಿಗಳಲ್ಲಿ ಸಾಗಿ ಸಾರ್ವಜನರಿಗೆ ಕರ ಪತ್ರ ವಿತರಿಸಿ ಅರಿವು ಮೂಡಿಸಲಾಯಿತು.
ಜನರು ನೀರನ್ನು ಕಾಯಿಸಲು ತೆರೆದ ಈಟಿಂರ್ ಕಾಯಿಲ್ಗಳನ್ನು ಅಧಿಕ ಸಂಖೆಯಲ್ಲಿ ಬಳಸುತ್ತಿದ್ದು, ಇದರಿಂದ ವಿದ್ಯುತ್ ಅವಡಗಳು ಹೆಚ್ಚಾಗುತ್ತಿವೆ. ವಿದ್ಯುತ್ ಕಡಿತವಾದಾಗ ಸ್ಥಳಿಯರು ವಿದ್ಯುತ್ ಕಂಬ ಏರಿ ದುರಸ್ತಿ ಮಾಡುವುದು ಮತ್ತು ಲೈನ್ಗಳಿಗೆ ನೇರವಾಗಿ ವೈರ್ ಹಾಕಿ ವಿದ್ಯುತ್ ಕಳ್ಳತನ ಮಾಡುವುದು ಅಪರಾಧವಾಗಿದೆ. > ಮೊಹನ್ ಕುಮಾರ್ ಸರ್ಜಾಪುರ ಬೆಸ್ಕಾಂ ಸಹಾಯಕ ಅಭಿಯಂತ