

ವಿಜಯಪುರ: ಸಂವಿಧಾನ ಬದಲಾಯಿಸಲು ಹಲವು ಜನರು ಹೇಳಿಕೆ ನೀಡುತ್ತಿರುವ ಸಮಯದಲ್ಲಿ ಸಂವಿಧಾನ ಉಳಿಸುವ ನಿಟ್ಟಿನಲ್ಲಿ ಪ್ರತಿಯೊಬ್ಬರು ಗಟ್ಟಿಯಾಗಿ ನಿಲ್ಲುವುದು ನಮ್ಮ ಪ್ರಥಮಾದ್ಯತೆ ಆಗಬೇಕು ಎಂದು ಸಚಿವ ಸತೀಶ ಜಾರಕಿಹೊಳಿ ಹೇಳಿದರು.
ನಗರದ ಕಂದಗಲ್ಲ ಹನುಮಂತರಾಯ ರಂಗಮಂದಿರದಲ್ಲಿ ಕರ್ನಾಟಕ ದಲಿತ ಸಂರ್ಷ ಸಮಿತಿ (ಪ್ರೊ. ಕೃಷ್ಣಪ್ಪ ಸ್ಥಾಪಿತ) ಜಿಲ್ಲಾ ಟಕದ ವತಿಯಿಂದ ಮಂಗಳವಾರ ಹಮ್ಮಿಕೊಂಡಿದ್ದ "ಸಂವಿಧಾನ ಮತ್ತು ಅಂಬೇಡ್ಕರ್ ಸಾಮಾಜಿಕ ಸಮಾನತೆಗಾಗಿ ಜನಾಂದೋಲನ ಸಮಾವೇಶ' ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಆಧುನಿಕ ಕಾಲದಲ್ಲೂ ಇನ್ನೂ ಸಮಾನತೆ ಬಂದಿಲ್ಲ. ಸ್ವಾತಂತ್ರ ಬಂದು 75 ವರ್ಷಗಳು ಕಳೆದರೂ ಇನ್ನೂ ಕೆಲವೆಡೆ ಶೋಷಿತರು ದೇವಾಲಯ ಪ್ರವೇಶಿಸಿದರೆ ದಂಡ ತೆರಬೇಕಾದ ಪರಿಸ್ಥಿತಿ ಇದೆ. ಇಂತಹ ವ್ಯವಸ್ಥೆ ಸಂಪೂರ್ಣ ದೂರವಾಗಲು ಸಂವಿಧಾನ ಉಳಿಯಬೇಕಿದೆ. ಪ್ರತಿ ಊರಲ್ಲಿ ಡಾ. ಅಂಬೇಡ್ಕರ್ ಅವರು ಜನ್ಮತಾಳಬೇಕು. ಅವರ ಚಿಂತನೆಗಳಾದ ಶಿಣ, ಹೋರಾಟ, ಸಂಟನೆಯ ತ್ರಿಸೂತ್ರಗಳನ್ನು ಎಲ್ಲರಿಗೂ ಕಲಿಸಬೇಕು ಎಂದು ಸಚಿವರು ಕರೆ ನೀಡಿದರು.
ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರನ್ನು ಕೇವಲ ಒಂದೇ ಜಾತಿಗೆ ಸಿಮೀತಗೊಳಿಸಲಾಗುತ್ತಿದೆ. ಅದು ಕೊನೆಯಾಗಬೇಕು. ದಿನ ಬೆಳಗಾದರೆ ಸಾಕು ವಾಟ್ಸಪ್ ಮೂಲಕ ಅಧಿಕವಾಗಿ ಸುಳ್ಳು ಹರಡಲಾಗುತ್ತಿದೆ. ಈ ಸುಳ್ಳು ಮಾಹಿತಿ ನಂಬಿ ದಿಕ್ಕು ತಪ್ಪಬೇಡಿ. ಸಮ ಸಮಾಜಕ್ಕಾಗಿ ಶ್ರಮಿಸಿದ ಮಹನೀಯರ ಇತಿಹಾಸವನ್ನು ನಾವೆಲ್ಲರೂ ಅರ್ಥ ಮಾಡಿಕೊಳ್ಳಬೇಕು. ಎಲ್ಲ ಮಹನೀಯರ ಜಯಂತಿಗಳಲ್ಲಿ ಸಕ್ರಿಯವಾಗಿ ಭಾಗವಹಿಸುವ ಜತೆಗೆ ಅವರು ನೀಡಿದ ತತ್ವಗಳನ್ನು ಪಾಲಿಸಬೇಕೇಂದು ಸಲಹೆ ನೀಡಿದರು.
ಮಾಜಿ ಶಾಸಕ ಪ್ರೊ. ರಾಜು ಆಲಗೂರ ಮಾತನಾಡಿ, ಸಂವಿಧಾನ ಸಭೆಗೆ ಡಾ. ಅಂಬೇಡ್ಕರ್ ಅವರು ನಾಮನಿರ್ದೇಶನ ಹೊಂದಿ ಆಯ್ಕೆಯಾದರು ಎಂಬ ತಪ್ಪು ಕಲ್ಪನೆ ಬಿತ್ತುವ ಕೆಲಸ ನಡೆದಿದೆ. ಮೊದಲು ಅವರು ಸೋಲು ಅನುಭವಿಸಿದ ನಂತರ ಮುಸ್ಲಿಂ ನಾಯಕರು ಬಂಗಾಳದಲ್ಲಿ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿ ಅಲ್ಲಿಂದ ಡಾ. ಅಂಬೇಡ್ಕರ್ ಅವರನ್ನು ಆಯ್ಕೆ ಮಾಡಿ ಸಭೆಗೆ ಕಳುಹಿಸಲಾಯಿತು.
ಚುನಾಯಿತರಾಗಿಯೇ ಅವರು ಸಭೆಗೆ ಪ್ರವೇಶಿಸಿದ್ದರು. ಸಂವಿಧಾನದ ರಚನೆಯಲ್ಲಿ ಬಿ.ಎನ್. ರಾವ್ ನಿರ್ಣಾಯಕ ಪಾತ್ರ ವಹಿಸಿರಲಿಲ್ಲ. ಕರಡು ಸಮಿತಿಯಲ್ಲೂ ಇರಲಿಲ್ಲ. ಬ್ರಿಟಿಷ್ ವೈಸರಾಯರು ಅವರನ್ನು ನಾಮನಿರ್ದೇಶನ ಮಾಡಿದ್ದರು. ಅದರೆ ಸಂವಿಧಾನ ರಚನೆಯಲ್ಲಿ ರಾಯ್ ಅವರ ಪಾತ್ರ ಪ್ರಮುಖವಾಗಿತ್ತು ಎಂಬ ಸತ್ಯಕ್ಕೆ ದೂರವಾದ ಮಾತು ಎಂದರು.
ಮಾಜಿ ಶಾಸಕ ಶರಣಪ್ಪ ಸುಣಗಾರ ಮಾತನಾಡಿ, ಡಾ. ಅಂಬೇಡ್ಕರ ಅವರನ್ನು ಕೇವಲ ದಲಿತ ಬಾಂಧವರಿಗೆ ಸೀಮಿತ ಬೇಡ. ಸಂಟನೆಗಳು ಹತ್ತು ಆಗಲಿ. ಆದರೆ, ಗುರಿ ಒಂದೇ ಆಗರಲಿ ಎಂದ ಅವರು, ಸತೀಶ ಜಾರಕಿಹೊಳಿ ಅವರಂತಹ ಸರಳತೆಯ ನಾಯಕರು ರಾಜ್ಯದ ಚುಕ್ಕಾಣಿ ಹಿಡಿಯಲಿ ಎಂದು ಆಶಯ ವ್ಯಕ್ತಪಡಿಸಿದರು.
ಕರ್ನಾಟಕ ಬಾಲ ವಿಕಾಸ ಅಕಾಡೆಮಿ ಅಧ್ಯ ಸಂಗಮೇಶ ಬಬಲೇಶ್ವರ, ಕೆಪಿಸಿಸಿ ಸದಸ್ಯ ಅಬ್ದುಲ್ ಹಮೀದ್ ಮುಶ್ರೀಫ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಡಾ. ಪ್ರಭುಗೌಡ ಪಾಟೀಲ, ಡಾ. ಮಹಾಂತೇಶ ಬಿರಾದಾರ, ಶ್ರೀದೇವಿ ಉತ್ಲಾಸರ, ವಿ.ಎಸ್. ಕೊಡಬಾಗಿ, ರಮೇಶ ಆಸಂಗಿ, ಅನಿಲ ಹೊಸಮನಿ, ಅಶೋಕ ಚಲವಾದಿ, ರಾಹುಲ್ ಕುಬಕಡ್ಡಿ, ಡಾ. ಸುಜಾತಾ ಚಲವಾದಿ, ಸೋಮನಾಥ ಕಳ್ಳಿಮನಿ ಮತ್ತಿತರರಿದ್ದರು.