ಅಂಬೇಡ್ಕರ್ ಆದರ್ಶಗಳನ್ನು ಅನುಯಾಯಿಗಳು ಪಾಲಿಸಿರಿ

16ark-1
ಅರಕಲಗೂಡು ತಾಲೂಕು ಕೇರಳಾಪುರದಲ್ಲಿ ಇತ್ತೀಚೆಗೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕಟ್ಟಡವನ್ನು ಶಾಸಕ ಎ.ಮಂಜು ಉದ್ಘಾಟಿಸಿದರು. ಜಿಲ್ಲಾ ಸಹಕಾರ ಸಂಘದ ನಿರ್ದೆಶಕ ಕೆ. ಸತೀಶ್, ಸಂಘದ ಅಧ್ಯಕ್ಷ ಮಂಜುನಾಥ್, ಉಪಾಧ್ಯಕ್ಷೆ ಕಲ್ಯಾಣಮ್ಮ, ಗ್ರಾಪಂ ಅಧ್ಯಕ್ಷೆ ಜ್ಯೋತಿ ಕುಮಾರ್, ಮಾಜಿ ಅಧ್ಯಕ್ಷ ಕರೀಗೌಡ, ರವಿ, ವಿನಯ್‌ಕುಮಾರ್ ಇತರರು ಇದ್ದರು.
Published on

ಅರಕಲಗೂಡು: ತಾಲೂಕು ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ಹಾಗೂ ದಲಿತ ನೌಕರರ ಒಕ್ಕೂಟದ ಸಹಯೋಗದಲ್ಲಿ ಇತ್ತೀಚೆಗೆ ದಮ್ಮ ಪರಿವರ್ತನಾ ದಿನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಪಟ್ಟಣದ ದೇವರಾಜು ಅರಸು ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಂಬೇಡ್ಕರ್ ಭಾವಚಿತ್ರಕ್ಕೆ ದೀಪ ಬೆಳಗಿಸಲಾಯಿತು. ಅಂಬೇಡ್ಕರ್ ಅವರು ತೆಗೆದುಕೊಂಡಿದ್ದ 22 ಪ್ರತಿಜ್ಞೆಗಳನ್ನು ಓದಿ ಸ್ವೀಕರಿಸಲಾಯಿತು.

ಅಧ್ಯಕ್ಷತೆ ವಹಿಸಿದ್ದ ಸಮಿತಿಯ ರಾಜ್ಯ ಸಂಘಟನಾ ಸಂಚಾಲಕ ಈರೇಶ್ ಹಿರೇಹಳ್ಳಿ ಮಾತನಾಡಿ, ಹಿಂದು ಧರ್ಮದಲ್ಲಿನ ಸಾಮಾಜಿಕ ಅಸಮಾನತೆಯಿಂದ ಬೇಸತ್ತು ಅಂಬೇಡ್ಕರ್ ಅವರು 1950ರಲ್ಲಿ ಮಾತೃಧರ್ಮವನ್ನು ತೊರೆದು ಬೌಧ್ಧ ಧರ್ಮ ಸ್ವೀಕರಿಸಿದರು. ಈ ದಿನದ ಪ್ರಯುಕ್ತ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಅಂಬೇಡ್ಕರ್ ಅನುಯಾಯಿಗಳು ಅವರ ಆದರ್ಶಗಳನ್ನು ಪಾಲಿಸುವ ಮೂಲಕ ಪರಿವರ್ತನೆ ಕಾಣಬೇಕಿದೆ ಎಂದರು.

ದಲಿತ ನೌಕರರ ಒಕ್ಕೂಟದ ಜಿಲ್ಲಾ ಸಂಚಾಲಕ ವೆಂಕಟೇಶಮೂರ್ತಿ, ಸಮಿತಿಯ ತಾಲೂಕು ಪ್ರಧಾನ ಸಂಚಾಲಕ ದುಮ್ಮಿ ಕೃಷ್ಣ, ಒಕ್ಕೂಟದ ಸಣ್ಣಪ್ಪ ಹಂಪಾಪುರ, ವಕೀಲರಾದ ಶಂಕರಣ್ಣ, ನಾಗರಾಜು, ಕುಮಾರ ಮುಸವತ್ತೂರು, ಮುಖಂಡರಾದ ಶಿವಣ್ಣ ಶಿರಧನಹಳ್ಳಿ, ಕುಪ್ಪೆ ಧರ್ಮೇಶ್, ಮುಂಡಗೋಡು ರಂಗಸ್ವಾಮಿ, ಕಬ್ಬಳಿಗ್ವರೆ ಕೇಶವ, ಮಲ್ಲಿನಾಥಪುರ ವೀರಭದ್ರ, ಹಿರೇಹಳ್ಳಿ ಮಹೇಶ್, ಮಾಚಗೌಡನಹಳ್ಳಿ ಕೃಷ್ಣ, ಕುಮಾರ, ಹಂಪಾಪುರ ಕೃಷ್ಣ, ಬಸವನಹಳ್ಳಿ ದೇವರಾಜು ಇತರರು ಇದ್ದರು.

ಬೆಂಗಳೂರಿನಲ್ಲಿ ದಸಂಸ ರಾಜ್ಯ ಸಂಘಟನಾ ಸಂಚಾಲಕರಾಗಿ ಅವಿರೋಧವಾಗಿ ಆಯ್ಕೆ ಮಾಡಿದ ಈರೇಶ್ ಹಿರೇಹಳ್ಳಿ ಅವರನ್ನು ಇದೇ ವೇಳೆ ಗೌರವಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net