ಭಾರತೀಯ ಪರಂಪರೆ ಸಾರುವ ಜಾನಪದ

16 NRD-3
Published on

ನರಗುಂದ: ಕರ್ನಾಟಕದ ಜನಪದವು ಜಗತ್ತಿನ ಶ್ರೀಮಂತ ಕಲೆಯಾಗಿದೆ. ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ಜನಪದ ಕಲೆಯನ್ನು ಪ್ರತಿಯೊಬ್ಬರೂ ಉಳಿಸಿ, ಬೆಳೆಸಬೇಕು ಎಂದು ಉಪನ್ಯಾಸಕ ಬಿ.ಎಫ್. ಕರಿಗಾರ ಹೇಳಿದರು.

ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಕೊಣ್ಣೂರಿನ ಕೆಇಎಸ್ ಸಂಯುಕ್ತ ಪದವಿಪೂರ್ವ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದಿಂದ ತಾಲೂಕಿನ ಬೂದಿಹಾಳ ಗ್ರಾಮದಲ್ಲಿ ಹಮ್ಮಿಕೊಂಡಿರುವ ಎನ್‌ಎಸ್‌ಎಸ್ ವಾರ್ಷಿಕ ವಿಶೇಷ ಶಿಬಿರದ ೨ನೇ ದಿನದ ಜಾನಪದ ಕಲಾ ಸಂಭ್ರಮ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಗ್ರಾಮೀಣರ ಜೀವನ, ನಂಬಿಕೆ, ಆಚಾರ, ವಿಚಾರ, ನಡವಳಿಕೆಗಳು, ರೈತಾಪಿ ವರ್ಗದವರ ಶ್ರಮಜೀವನ ಜನಪದದೊಂದಿಗೆ ಮಿಳಿತಗೊಂಡಿದೆ. ಪುರಾತನ ಸಂಸ್ಕೃತಿ ಹಾಗೂ ಸಂಪ್ರದಾಯದ ಮೇಲೆ ಹೆಚ್ಚು ಬೆಳಕು ಚೆಲ್ಲುವಲ್ಲಿ ಜಾನಪದ ಹಾಡು ಮತ್ತು ಕುಣಿತಗಳು ಯಶಸ್ವಿಯಾಗಿವೆ. ಈ ನಿಟ್ಟಿನಲ್ಲಿ ಭಾರತೀಯ ಭವ್ಯ ಪರಂಪರೆಯ ಇತಿಹಾಸವನ್ನು ಹೊಂದಿರುವ ಜನಪದ ಕಲೆಗಳ ಪ್ರದರ್ಶನ ನಗರ ಪ್ರದೇಶಕ್ಕಿಂತ ಹೆಚ್ಚಾಗಿ ಗ್ರಾಮೀಣ ಭಾಗದಲ್ಲಿ ಪ್ರದರ್ಶನಗೊಂಡರೆ ಜನರ ಪಾಲ್ಗೊಳ್ಳುವಿಕೆ ಹೆಚ್ಚಿರುತ್ತದೆ ಎಂದು ತಿಳಿಸಿದರು. ಕೊಣ್ಣೂರಿನ ಕೆಇಎಸ್ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಎಸ್.ಬಿ. ಯಲಿಗಾರ ಅಧ್ಯಕ್ಷತೆ ವಹಿಸಿದ್ದರು. ಕಾಲೇಜ್ ಪ್ರಾಚಾರ್ಯ ಎಸ್.ಕೆ. ಜೋಶಿ, ಹನುಮಂತಗೌಡ ಪಾಟೀಲ, ಬಿ.ಎಚ್. ಮಾನೆ, ಬಿ.ಆರ್. ಜಾಧವ, ಯಲ್ಲಪ್ಪ ಮಾನೆ, ಕೊಣ್ಣೂರ ಗ್ರಾಪಂ ಸದಸ್ಯ ಕೊಟ್ರೋಶ ಕೊಟ್ರಶೆಟ್ಟಿ, ಬಾಪೂಗೌಡ ವಾಸನ ಉಪಸ್ಥಿತರಿದ್ದರು. ಮಂಜುಳಾ ಹಾದಿಮನಿ, ಪೂಜಾ ಬನ್ನೂರ, ಅರುಣ ಅಸೂಟಿ ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net