ನಮ್ಮ ಸಂಸ್ಕೃತಿಯ ಮೂಲ ಜಾನಪದ

h16-janapada
Published on

ಹುಬ್ಬಳ್ಳಿ: ನಮ್ಮ ಹಿರಿಯರ ಕಾಲದಲ್ಲಿದ್ದ ಹಬ್ಬದ ಆಚರಣೆಗಳು, ಮಾಹಿತಿ ಕೊರತೆಯಿಂದ ಹೊಸ ರೂಪ ಪಡೆಯುತ್ತಿವೆ. ಆದರೆ, ನಮ್ಮ ಸಂಸ್ಕೃತಿಯ ಮೂಲ ಬೇರು ಜಾನಪದ ಎಂಬುದನ್ನು ಮರೆಯಬಾರದು ಎಂದು ಶ್ರೀರಘುವೀರಾನಂದ ಮಹಾರಾಜ ಹೇಳಿದರು.

ಇಲ್ಲಿನ ಕಲ್ಯಾಣನಗರದ ರಾಮಕೃಷ್ಣ ವಿವೇಕಾನಂದ ಆಶ್ರಮದಲ್ಲಿ ಶನಿವಾರ ಏರ್ಪಡಿಸಿದ್ದ ಜಾನಪದ ಶ್ರಾವಣ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ವೈಜ್ಞಾನಿಕ ತಳಹದಿಯ ಮೇಲೆ ನಿಂತಿರುವ ಜಾನಪದವನ್ನು ನಾವು ಉಳಿಸಿ ಬೆಳೆಸಬೇಕು. ನಮ್ಮ ಆಶ್ರಮವೂ ಇದಕ್ಕೆ ಪ್ರೋತ್ಸಾಹ ಕೊಡಲಿದೆ ಎಂದರು.

ರಂಗ ನಿರ್ದೇಶಕ ಗದಿಗಯ್ಯ ಹಿರೇಮಠ ಉದ್ಘಾಟಿಸಿ ಮಾತನಾಡಿ, ವಿವೇಕದಿಂದ ಆನಂದ ಪಡೆಯುವ ಒಂದು ಪವಿತ್ರ ಸ್ಥಳ ಈ ಆಶ್ರಮ. ಎಲ್ಲ ಸಮಾಜದ ಲೇಸು ಬಯಸುತ್ತಿದೆ. ಧರ್ಮ-ಸಂಸ್ಕೃತಿ ಬಗ್ಗೆ ಜಾಗೃತಿ ಮೂಡಿಸುತ್ತಿದೆ ಎಂದರು.

ಜಾನಪದ ತಜ್ಞ ಡಾ. ರಾಮು ಮೂಲಗಿ ಅವರು ಹಂತಿ ಪದ, ಕುಟ್ಟು ಪದ, ಬೀಸುವ ಪದ ಹೀಗೆ ಹಲವು ಜಾನಪದಗಳನ್ನು ಸುಶ್ರಾವ್ಯವಾಗಿ ಹಾಡಿದರು.

ಡಾ. ನಾಗಲಿಂಗ ಮುರಗಿ ತಬಲಾ, ಪ್ರೇಮಕೃಷ್ಣ ಮೇಟಿ ಹಾರ್ವೇನಿಯಂ ಸಾಥ್ ನೀಡಿದರು.

ಧರ್ಮದರ್ಶಿ ಸಂಭಾಜಿ ಕಲಾಲ, ಪಿ.ಸಿ. ಜಾಬಿನ ಮಹಾವಿದ್ಯಾಲಯದ ಪ್ರಾಚಾರ್ಯ ಪ್ರೊ. ಲಿಂಗರಾಜ ಹೊರಕೇರಿ, ಸುರೇಶ ಹೊರಕೇರಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net