ಜಾನಪದ ಭಾರತೀಯ ಸಂಸ್ಕೃತಿಯ ತಳಹದಿ

janapda
ನಾರಣಾಪುರದಲ್ಲಿ ಕರ್ನಾಟಕ ಜಾನಪದ ಪರಿಷತ್ ಆಯೋಜಿಸಿದ್ದ ವಿಶ್ವ ಜಾನಪದ ದಿನಾಚರಣೆಯನ್ನು ಶಾಸಕ ಜಿ.ಎಚ್.ಶ್ರೀನಿವಾಸ ಉದ್ಘಾಟಿಸಿದರು. ಜಿ.ಬಿ.ಸುರೇಶ್, ಎ.ಆರ್.ನಾಗೇಶ್, ಶಕುಂತಲಮ್ಮ, ಎ.ಸಿ.ಚಂದ್ರಪ್ಪ, ಡಾ. ಮಾಳೇನಹಳ್ಳಿ ಬಸಪ್ಪ ಇತರರಿದ್ದರು.
Published on

ಅಜ್ಜಂಪುರ: ಜಾನಪದ ಭಾರತೀಯ ಸಂಸ್ಕೃತಿಯ ತಳಹದಿ ಎಂದು ಶಾಸಕ ಜಿ.ಎಚ್.ಶ್ರೀನಿವಾಸ ಹೇಳಿದರು.

ನಾರಣಾಪುರದಲ್ಲಿ ಕರ್ನಾಟಕ ಜಾನಪದ ಪರಿಷತ್ ಮಂಗಳವಾರ ಆಯೋಜಿಸಿದ್ದ ವಿಶ್ವ ಜಾನಪದ ದಿನಾಚರಣೆಯಲ್ಲಿ ಮಾತನಾಡಿದರು.ಜಾನಪದ ಸಂಸ್ಕೃತಿ ಮರೆತರೆ ಸ್ವಾಸ್ಥೃಸಮಾಜ ಕಾಣಲು ಸಾಧ್ಯವಿಲ್ಲ. ಸರ್ಕಾರ ಜನಪದ ಕಲಾವಿದರ ಸಮಸ್ಯೆಗಳಿಗೆ ಸ್ಪಂದಿಸಿ, ಜನಪದ ಕಲೆ, ಸಾಹಿತ್ಯಕ್ಕೆ ಪ್ರೋತ್ಸಾಹ ನೀಡಬೇಕು ಎಂದರು.ಕರ್ನಾಟಕ ಜಾನಪದ ಪರಿಷತ್ತಿನ ಜಿಲ್ಲಾಧ್ಯಕ್ಷ ಜಿ.ಬಿ.ಸುರೇಶ್ ಮಾತನಾಡಿ, ಎಲ್ಲ ದೇಶಗಳಲ್ಲೂ ವಿಶ್ವ ಜಾನಪದ ದಿನ ಆಚರಿಸಲಾಗುತ್ತಿದೆ. ಇದರಿಂದ ಪ್ರತಿಯೊಬ್ಬರಲ್ಲೂ ಜಾನಪದ ಸಂಸ್ಕೃತಿ ಕುರಿತು ಜಾಗತಿ ಮೂಡಿಸಿದಂತಾಗುತ್ತದೆ. ಭಾರತೀಯ ಸಂಸ್ಕೃತಿ ಚಿರಕಾಲ ಉಳಿಯಬೇಕಾದರೆ ಜನಪದ ಸಂಸ್ಕೃತಿಯನ್ನು ಯುವ ಪೀಳಿಗೆ ತಿಳಿದುಕೊಳ್ಳಬೇಕು ಎಂದು ಹೇಳಿದರು. ಪ್ರಾಧ್ಯಾಪಕ ಇ.ಮಹಾಲಿಂಗಪ್ಪ ಮಾತನಾಡಿ, ಜನಪದ ಸಂಸ್ಕೃತಿ, ಕಲೆ, ಸಾಹಿತ್ಯದ ಪ್ರಮುಖ ರೂವಾರಿಗಳೇ ಮಹಿಳೆಯರು. ಕುಟುಂಬ, ತವರು, ಸಮಾಜದ ಜತೆ ಇಟ್ಟುಕೊಂಡಿರುವ ಪ್ರೀತಿ, ಮಮತೆ, ಜವಾಬ್ದಾರಿ ಅವಿನಾಭಾವ ಸಂಬಂಧಗಳೇ ಕಾರಣಗಳಾಗಿವೆ ಎಂದರು.ತರೀಕೆರೆ ತಾಲೂಕು ಅಧ್ಯಕ್ಷ ಎ.ಆರ್.ನಾಗೇಶ್, ಶಕುಂತಲಮ್ಮ ಮತ್ತು ತಂಡ ಜಾನಪದ ಗೀತೆಗಳನ್ನು ಹಾಡಿದರು. ತಾಲೂಕಿನ ವಿವಿಧ ಜಾನಪದ ತಂಡಗಳು, ವೀರಗಾಸೆ ತಂಡಗಳು ಮೆರವಣಿಗೆಯೊಂದಿಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟವು. ರಂಗ ಸಂಘಟಕ ಎ.ಸಿ.ಚಂದ್ರಪ್ಪ, ಡಾ. ಮಾಳೇನಹಳ್ಳಿ ಬಸಪ್ಪ, ಪರಿಷತ್ತಿನ ಉಪಾಧ್ಯಕ್ಷ ಜಿ.ಎಸ್.ತಿಪ್ಪೇಶ್, ಗ್ರಾಪಂ ಸದಸ್ಯರಾದ ನಟರಾಜು, ನವೀನ, ಜಯಶೀಲ, ಜ್ಞಾನಮೂರ್ತಿ, ಬೆಣಕುಣಸೆ ಮರುಳಸಿದ್ದಪ್ಪ, ಗೌರಮ್ಮ, ಎಚ್.ಆರ್.ಚಂದ್ರಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net