ಮೊಬೈಲ್ ಸಂಸ್ಕೃತಿಯಿಂದ ಮರೆಯಾಗುತ್ತಿದೆ ಜಾನಪದ

05bhr 2
Published on

ಬಾಳೆಹೊನ್ನೂರು: ಸಮಾಜದ ಸ್ವಾಸ್ಥ್ಯ ಕಾಪಾಡಲು ಜಾನಪದ ಕಲೆ, ಸಂಸ್ಕೃತಿಗಳು ಪೂರಕ ಎಂದು ಕರ್ನಾಟಕ ಜಾನಪದ ಪರಿಷತ್‌ನ ಜಿಲ್ಲಾಧ್ಯಕ್ಷ ಜಿ.ಬಿ.ಸುರೇಶ್ ಹೇಳಿದರು.

ಪಟ್ಟಣದ ಸರ್ಕಾರಿ ಪ್ರೌಢಶಾಲೆಯಲ್ಲಿ ಸೋಮವಾರ ನಡೆದ ಎನ್.ಆರ್.ಪುರ ತಾಲೂಕು ಕರ್ನಾಟಕ ಜಾನಪದ ಪರಿಷತ್‌ನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿ, ವಿಶ್ವಸಂಸ್ಥೆಯ ಮಾನ್ಯತೆ ಪಡೆದ ಕಜಾಪ ಜಾನಪದ ಕಲೆ, ಸಂಸ್ಕೃತಿ, ಸಾಹಿತ್ಯ ಉಳಿಸುವ ನಿಟ್ಟಿನಲ್ಲಿ ಶ್ರಮಿಸುತ್ತಿದ್ದು, ಜಿಲ್ಲೆಯ 9 ತಾಲೂಕುಗಳಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತ ಜಾನಪದ ಪಸರಿಸುವ ಕೆಲಸ ಮಾಡುತ್ತಿದೆ ಎಂದರು.

ಮೊಬೈಲ್ ಸಂಸ್ಕೃತಿಯಿಂದಾಗಿ ಜಾನಪದ ಮರೆಯಾಗುತ್ತಿದೆ. ಜಾನಪದವನ್ನು ನಮ್ಮ ಹಿರಿಯರು ನಮಗೆ ಬಳುವಳಿಯಾಗಿ ನೀಡಿದ್ದು, ಮುಂದಿನ ಪೀಳಿಗೆಗೆ ಅದನ್ನು ನೀಡಬೇಕಾದ ಅಗತ್ಯವಿದೆ. ಜಾನಪದದಲ್ಲಿ 250ಕ್ಕೂ ಅಧಿಕ ಕಲೆಗಳಿದ್ದು, ಇವುಗಳನ್ನು ಅಳವಡಿಸಿಕೊಂಡಲ್ಲಿ ನಮ್ಮ ಜೀವನದಲ್ಲಿ ಸಾರ್ಥಕತೆ ಕಾಣಲು ಸಾಧ್ಯವಿದೆ. ಈ ಕಲೆಯನ್ನು ಮುಂದಿನ ಪೀಳಿಗೆಗೆ ಹಸ್ತಾಂತರಿಸಲು ಕವಿ ಎಚ್.ಎಲ್.ನಾಗೇಗೌಡರ ನೇತೃತ್ವದಲ್ಲಿ ರಾಮನಗರ-ಬಿಡದಿ ಸಮೀಪ ಜಾನಪದ ಲೋಕ ಆರಂಭಿಸಲಾಗಿದೆ ಎಂದು ತಿಳಿಸಿದರು.

ಎನ್.ಆರ್.ಪುರ ತಾಲೂಕು ಕಜಾಪ ನೂತನ ಅಧ್ಯಕ್ಷರಾಗಿ ಸತೀಶ್ ಅರಳೀಕೊಪ್ಪ, ಪ್ರಧಾನ ಕಾರ್ಯದರ್ಶಿಯಾಗಿ ತಮನ್ನಾ ಮುನಾವರ್ ಪದಗ್ರಹಣ ಸ್ವೀಕರಿಸಿದರು. ಪ್ರಮುಖರಾದ ಎನ್.ಎಂ.ಕಾಂತರಾಜ್, ಎಸ್.ಎಚ್.ಪೂರ್ಣೇಶ್, ಯಜ್ಞ ಪುರುಷ ಭಟ್, ಚೈತನ್ಯವೆಂಕಿ, ಕೊಟ್ರೇಶಪ್ಪ, ಶೇಖರ್ ಇಟ್ಟಿಗೆ, ಎ.ಆರ್.ಲತಾ, ಎಂ.ಜೆ.ಮಹೇಶ್ ಆಚಾರ್ಯ, ಪಿಎಸಿಎಸ್ ಅಧ್ಯಕ್ಷ ಟಿ.ಎಂ.ಉಮೇಶ್ ಕಲ್ಮಕ್ಕಿ ,ಕಾರ್ತಿಕ್ ಕಾರ್‌ಗದ್ದೆ, ಇಬ್ರಾಹಿಂ ಶಾಫಿ, ಡಿ.ರಾಜೇಂದ್ರ, ಮಂಜು, ರವೀಂದ್ರ, ಕೆ.ಎಂ.ರಾಕೇಶ್, ಎಚ್.ಎನ್.ವಿಶ್ವನಾಥ್, ಶ್ರೀಕೃಷ್ಣಭಟ್, ಪ್ರಶಾಂತ್‌ಕುಮಾರ್, ಹಾಲಪ್ಪ ಮತ್ತಿತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net