

ಹುಬ್ಬಳ್ಳಿ: ನಮ್ಮ ಪೂರ್ವಜರಿಂದ ಬಳುವಳಿಯಾಗಿ ಬಂದ ಜನಪದ ಸಾಹಿತ್ಯವು ಯುಗಯುಗಗಳಲ್ಲಿಯೂ ತನ್ನ ಅಸ್ತಿತ್ವ ಉಳಿಸಿಕೊಂಡಿದೆ ಎಂದು ಪಾಲಿಕೆ ಸದಸ್ಯ ರಾಜಣ್ಣ ಕೊರವಿ ಹೇಳಿದರು.
ಕರ್ನಾಟಕ ಜಾನಪದ ಜಗತ್ತು ಟ್ರಸ್ಟ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಜಾನಪದ ಪರಿಷತ್ ಜಿಲ್ಲಾ ಘಟಕ, ಶ್ರೀಸಾಯಿ ಮಹಿಳಾ ಮಂಡಳ ವತಿಯಿಂದ ಜಾನಪದ ತಜ್ಞ ಡಾ. ರಾಮು ಮೂಲಗಿ ನೇತೃತ್ವದಲ್ಲಿ ಇಲ್ಲಿಯ ಉಣಕಲ್ ಮಾರುತಿ ದೇವಸ್ಥಾನದಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಮೂಲ ಜನಪದ ಹಾಡುಗಾರಿಕೆ ತರಬೇತಿ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ಜನಪದಕ್ಕೆ ನಿರ್ದಿಷ್ಟ ಕಲಿಕಾವರಣ ಇರಲಿಲ್ಲ. ಈಗ ಅಗತ್ಯವಿದೆ. ಹಿಂದಿನ ಜನಪದ ಕಲೆ ಮತ್ತು ಸಾಹಿತ್ಯವನ್ನು ಮುಂದಿನ ಪೀಳಿಗೆಗೆ ತಿಳಿಸಿಕೊಡುವ ಅವಶ್ಯಕತೆ ಇದೆ ಎಂದರು.
ಸುಮಿತ್ರಾ ಕುಂಬಾರ ಅಧ್ಯಕ್ಷತೆ ವಹಿಸಿದ್ದರು. ವಾಯವ್ಯ ಸಾರಿಗೆ ಸಂಸ್ಥೆ ಮಾಜಿ ಅಧ್ಯಕ್ಷ ಸದಾನಂದ ಡಂಗನವರ, ಅಖಿಲ ಕರ್ನಾಟಕ ಮಹಿಳಾ ಕನ್ನಡ ಸಾಹಿತ್ಯ ಪರಿಷತ್ ಸಂಸ್ಥಾಪಕ ಗಂಗಾಧರ ದೊಡವಾಡ, ಸಾಹಿತಿ ಸಿ.ಎಂ. ಚನ್ನಬಸಪ್ಪ, ಚನ್ನಬಸಪ್ಪ ಧಾರವಾಡ ಶೆಟ್ಟರ, ವಿ.ಜಿ. ಪಾಟೀಲ, ಎಸ್.ಐ. ನೇಕಾರ, ಅಶೋಕ ಈರಗಾರ, ಗೀತಾ ಅಂಗಡಿ, ಗೀತಾ ಮುಳ್ಳಳ್ಳಿ, ಜಯಶ್ರೀ ಮಂಗಳೂರು ಇತರರು ಇದ್ದರು.