

ವಿಜಯವಾಣಿ ಸುದ್ದಿಜಾಲ ಧಾರವಾಡ
ನಗರದ ಪ್ರಜ್ವಲ ಹವ್ಯಾಸಿ ಕನ್ನಡ ಹಾಗೂ ಕೊಂಕಣಿ ಕಲಾ ಸಂಘ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಫೆ. 15ರಂದು ಸಂಜೆ 6 ಗಂಟೆಗೆ ಇಲ್ಲಿನ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಜಾನಪದ ಸಂಭ್ರಮ ಹಾಗೂ ಶಹನಾಯಿ ವಾದನ ಕಾರ್ಯಕ್ರಮ ಏರ್ಪಡಿಸಲಾಗಿದೆ.
ಹಿರಿಯ ಜಾನಪದ ಕಲಾವಿದ ಇಮಾಮಸಾಬ್ ವಲ್ಲೆಪ್ಪನವರ ಕಾರ್ಯಕ್ರಮ ಉದ್ಘಾಟಿಸುವರು. ಅತಿಥಿಗಳಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕುಮಾರ ಬೆಕ್ಕೇರಿ, ಶಹಜಹಾನ ಮುದಕವಿ, ಡಾ. ಪ್ರಕಾಶ ಮಲ್ಲಿಗವಾಡ ಆಗಮಿಸುವರು. ಡಾ. ರಾಮು ಮೂಲಗಿ ಅಧ್ಯಕ್ಷತೆ ವಹಿಸುವರು. ಪ್ರಜ್ವಲ ಹವ್ಯಾಸಿ ಕನ್ನಡ ಹಾಗೂ ಕೊಂಕಣಿ ಕಲಾ ಸಂಘದ ಉಪಾಧ್ಯಕ್ಷೆ ಅಪೂರ್ವ ಮಹಾಲೆ, ಅಧ್ಯಕ್ಷ ಕಿರಣ ಮಹಾಲೆ ಉಪಸ್ಥಿತರಿರುವರು.
ನಂತರ ಇಮಾಮಸಾಬ್ ವಲ್ಲೆಪ್ಪನವರ ಸಂಗಡಿಗರಿಂದ ಜಾನಪದ ಹಾಡುಗಳು, ಯುವ ಕಲಾವಿದ ಶ್ರೀಧರ ಭಜಂತ್ರಿ ಸಂಗಡಿಗರಿಂದ ಶಹನಾಯಿ ವಾದನ ನಡೆಯಲಿದೆ ಎಂದು ಕಾರ್ಯದರ್ಶಿ ಸಂತೋಷ ಗಜಾನನ ಮಹಾಲೆ ತಿಳಿಸಿದ್ದಾರೆ.