

ಕೋ.ಶಿವಾಪುರ: ಜನಪದಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ. ಅದರ ಮೂಲಕ ನಮ್ಮ ಹಿರಿಯರು ಬದುಕು ಕಟ್ಟಿಕೊಂಡಿದ್ದಾರೆ ಎಂದು ಶ್ರೀರೇಣುಕಾ ಯಲ್ಲಮ್ಮ ಪ್ರಾಧಿಕಾರ ಸಮಿತಿ ಮಾಜಿ ಅಧ್ಯ ಬಸಯ್ಯ ಹಿರೇಮಠ ಹೇಳಿದರು.
ಗ್ರಾಮದಲ್ಲಿ ಬಸವೇಶ್ವರ ಜಾತ್ರಾ ಮಹೋತ್ಸವ ಅಂಗವಾಗಿ ಶುಕ್ರವಾರ ಹಮ್ಮಿಕೊಂಡಿದ್ದ ನಾಟಕ ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿದರು. ಗ್ರಾಮೀಣ ಭಾಗದ ಶೈಲಿಯಾದ ಜಾನಪದ, ಹಾಡು, ನಾಟಕ ಕಲೆಯನ್ನು ಉಳಿಸಿ, ಬೆಳಸಬೇಕು ಎಂದರು.
ಸಿದ್ದಸಂಸ್ಥಾನಮಠದ ಚರಂತಯ್ಯ ದೇವರು ಮಾತನಾಡಿ, ಜಾನಪದ ಕಲೆ ಯುವಕರು ತಮ್ಮನ್ನು ತಾವು ತೊಡಗಿಸಿಕೊಂಡು ಸಂಸಾರದ ಚಿತ್ರಣ ತೋರುವಂತ ನಾಟಕದ ಮೂಲಕ ಪ್ರದರ್ಶಿಸುತ್ತಾರೆ ಎಂದರು.
ಶಿವಾನಂದ ಹಾದಿಮನಿ, ಮಲಿಕ್ಸಾಬ್ ಸನದಿ, ರಮೇಶ ಕುಡ್ಲಿಂಗಪ್ಪಗೋಳ, ವಿರೂಪಾ ಕೋಳವಿ, ಕುಮಾರ ಟೋಪನ್ನವರ, ಮಲ್ಲಯ್ಯ ಮಠಪತಿ, ಪತ್ರಯ್ಯ ಪೂಜೇರ, ಬಸವರಾಜ ವಾಲಿ, ಚಿದಾನಂದ ವಸ್ತ್ರದ, ಶಿವಾನಂದ ಕಟ್ಟಿಮನಿ, ಶಿದ್ದಲಿಂಗ ಕುಂದರಗಿ, ತವನಪ್ಪ ಅಂಗಡಿ ಇದ್ದರು.