ಜಾನಪದ ಗಾರುಡಿಗ ಕಾ.ಹು.ಬಿಜಾಪುರ : ಕಸಾಪ ಸಭಾಭವನದಲ್ಲಿ ನುಡಿನಮನ

WhatsApp Image 2022-09-10 at 3.02.50 PM
ವಿಜಯಪುರ ನಗರದಲ್ಲಿರುವ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನ ಸಭಾಭವನದಲ್ಲಿ ಶನಿವಾರ ಕಾ.ಹು.ಬಿಜಾಪುರ ಅವರಿಗೆ ನುಡಿನಮನ ಸಲ್ಲಿಸಲಾಯಿತು. ಶಿವಬಸವ ಆಶ್ರಮ ಶಂಭುಲಿಂಗ ಸ್ವಾಮೀಜಿ ಸಾನ್ನಿಧ್ಯವಹಿಸಿದ್ದರು. ಶರಣ ಸಾಹಿತ್ಯ ಪರಿಷತ್‌ನ ಜಿಲ್ಲಾಧ್ಯಕ್ಷ ಜಂಬುನಾಥ ಕಂಚ್ಯಾಣಿ, ಕಸಾಪ ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲಿಕಾರ, ಶೇಖರ್ ದಳವಾಯಿ, ಪ್ರಾಚಾರ್ಯ ಕೆ.ಜೆ.ಲಮಾಣಿ, ಶಕುಂತಲಾ ಹಿರೇಮಠ, ಜಯಶ್ರೀ ಹಿರೇಮಠ ಮತ್ತಿತರರಿದ್ದರು.
Published on

ವಿಜಯಪುರ : ಹಿರಿಯ ಸಾಹಿತಿ, ನಾಟಕಕಾರ, ಕೃಷಿಕ, ಸರಳ ಸಜ್ಜನಿಕೆಯ ಸಾಕಾರಮೂರ್ತಿ, ಜಾನಪದ ಗಾರುಡಿಗ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕಾ.ಹು.ಬಿಜಾಪುರ ಅವರ ಜೀವನ ಇತರರಿಗೆ ಮಾದರಿ ಎಂದು ಶರಣ ಸಾಹಿತ್ಯ ಪರಿಷತ್‌ನ ಜಿಲ್ಲಾಧ್ಯಕ್ಷ ಜಂಬುನಾಥ ಕಂಚ್ಯಾಣಿ ಅಭಿಪ್ರಾಯ ವ್ಯಕ್ತಪಡಿಸಿದರು.

ಇಲ್ಲಿನ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನ ಸಭಾಭವನದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಕಾ.ಹು.ಬಿಜಾಪುರ ಅವರಿಗೆ ನುಡಿನಮನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬೆವರಿನ ಸಂಸ್ಕೃತಿಯಿಂದ ಬೇಸಾಯ ಸಂಸ್ಕೃತಿಗೆ ಬಂದವರು . ಕೋಟಿ ವಿದ್ಯೆಗಳಲ್ಲಿ ಮೇಟಿ ವಿದ್ಯೆ ಲೇಸು ಎನ್ನುವ ಬದುಕು ಅವರದು. ಐತಿಹಾಸಿಕ ಹಾಗೂ ಸಾಮಾಜಿಕ ನಾಟಕಗಳನ್ನು ಬರೆದರು. ಮಾನವೀಯ ಮೌಲ್ಯಗಳ ಆರಾಧಕರಾಗಿದ್ದರು. ಮಕ್ಕಳ ಸಾಹಿತ್ಯ ಸಂಗಮದ ಸಂಸ್ಥಾಪಕರಾದರು. ಗ್ರಾಮೀಣ ಪ್ರದೇಶಕ್ಕೆ ಅವರ ಚಿಂತನೆಗಳು ಪ್ರೇರಕವಾಗಿದ್ದವು ಎಂದರು.

ಸಾನ್ನಿಧ್ಯವಹಿಸಿದ್ದ ಶಿವಬಸವ ಆಶ್ರಮ ಶಂಭುಲಿಂಗ ಸ್ವಾಮೀಜಿ ಮಾತನಾಡಿ, ಈ ನಾಡಿನ ಭಾವೈಕ್ಯತೆಯ ಹರಿಕಾರರಾಗಿದ್ದರು. ಬ.ಬಾಗೇವಾಡಿ ತಾಲೂಕು ಅವರ ಸಾಹಿತ್ಯ ಹಾಗೂ ಕೃಷಿ ಕ್ಷೇತ್ರವಾಗಿತ್ತು. ಸಮಾಜಮುಖಿ ಚಿಂತನೆ ಶ್ರೇಷ್ಠವಾಗಿದ್ದವು ಎಂದು ತಿಳಿಸಿದರು.

ಕಸಾಪ ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲಿಕಾರ ಅಧ್ಯಕ್ಷತೆಯನ್ನು ವಹಿಸಿದ್ದರು. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ನಿರ್ದೇಶಕ ಶೇಖರ್ ದಳವಾಯಿ, ಪ್ರಾಚಾರ್ಯ ಕೆ.ಜೆ.ಲಮಾಣಿ ಮಾತನಾಡಿದರು.

ಸಾಹಿತಿ ಶಕುಂತಲಾ ಹಿರೇಮಠ, ಸಾಹಿತಿ ಜಯಶ್ರೀ ಹಿರೇಮಠ, ಅಶೋಕ ಗುಡದಿನ್ನಿ, ಪ್ರೊ.ಮಹಾದೇವ ರೇಬಿನಾಳ, ಕೆ. ಸುನಂದಾ, ಡಾ.ಸಂಗಮೇಶ ಮೇತ್ರಿ, ವಿದ್ಯಾವತಿ ಅಂಕಲಗಿ, ಪ್ರೊ. ಶಿವಾನಂದ ಸಿಂಹಾಸನಮಠ, ಪ್ರೊ.ಬಸವರಾಜ ಕುಂಬಾರ, ಸಂಗೀತಾ ಮಠಪತಿ, ಸುಖದೇವಿ ಅಲಬಾಳಿ, ಬಂದೇನವಾಜ ಬಿಜಾಪುರ, ಅಂಬಾದಾಸ ಜೋಶಿ, ವಿಜಯಾ ಬಿರಾದಾರ, ವಿಶ್ವನಾಥ ಅರಬಿ, ಯುವರಾಜ್ ಚೋಳಕೆ, ಮಹಿಬೂಬ ಕೊಲ್ಹಾರ, ಸಲೀಮ ಬಾಗವಾನ, ಶಿವಾಜಿ ಮೋರೆ, ಬಂದೇನವಾಜ ದೋಲಚಿ, ರವಿ ಬೆನಕಟ್ಟಿ , ಡಿ. ಬಿ.ನಾಯಕ, ಶಬ್ಬಿರ ನದಾ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net