

ಕೊಪ್ಪ: ಇಲ್ಲಿನ ವೆಂಕಟೇಶ್ವರ ವಿದ್ಯಾ ಮಂದಿರದಲ್ಲಿ 23 ರಂದು ಮಧ್ಯಾಹ್ನ 2.30ಕ್ಕೆ ಕನ್ನಡ ಜಾನಪದ ಪರಿಷತ್ ದಶಮಾನೋತ್ಸವ ಸಂಭ್ರಮ ಪ್ರಯುಕ್ತ ಜೀಶಂಪ ರಾಜ್ಯ ಜಾನಪದ ಪ್ರಶಸ್ತಿ ಪ್ರದಾನ, ಶೃಂಗೇರಿ ಕ್ಷೇತ್ರ ಮಟ್ಟದ ಜನಪದ ಗೀತೆ ಮತ್ತು ಭಜನಾ ಸ್ಪರ್ಧಾ ಕಾರ್ಯಕ್ರಮ ಏರ್ಪಡಿಸಿದೆ ಎಂದು ಜಿಲ್ಲಾ ಕನ್ನಡ ಜಾನಪದ ಪರಿಷತ್ ಘಟಕದ ಅಧ್ಯಕ್ಷ ಓಣಿತೋಟ ರತ್ನಾಕರ್ ಹೇಳಿದರು.
ವೆಂಕಟೇಶ್ವರ ವಿದ್ಯಾಮಂದಿರದಲ್ಲಿ ಶನಿವಾರದ ಆಹ್ವಾನ ಪತ್ರಿಕೆ ಬಿಡುಗಡೆಗೊಳಿಸಿ ಮಾತನಾಡಿ, ಆದಿಚುಂಚನಗಿರಿ ಶೃಂಗೇರಿ ಶಾಖಾ ಮಠದ ಗುಣನಾಥ ಸ್ವಾಮೀಜಿ ಉಪಸ್ಥಿತಿಯಲ್ಲಿ ಕಾರ್ಯಕ್ರಮ ನಡೆಯಲಿದೆ. ಶಾಸಕ ಟಿ.ಡಿ.ರಾಜೇಗೌಡ ಅಧ್ಯಕ್ಷತೆ ವಹಿಸಲಿದ್ದಾರೆ. ಕನ್ನಡ ಜಾನಪದ ಪರಿಷತ್ ರಾಜ್ಯ ಘಟಕದ ಅಧ್ಯಕ್ಷ ಜಾನಪದ ಎಸ್.ಬಾಲಾಜಿ ಉದ್ಘಾಟಿಸಲಿದ್ದಾರೆ ಎಂದು ತಿಳಿಸಿದರು.
ಕನ್ನಡ ಜಾನಪದ ಪರಿಷತ್ ಪ್ರಧಾನ ಕಾರ್ಯದರ್ಶಿ ಕೆ.ಎಸ್.ಕೌಜಲಗಿ ಆಶಯ ನುಡಿಗಳನ್ನಾಡಲ್ಲಿದ್ದಾರೆ. ಅಮ್ಮ ೌಂಡೇಶನ್ ಸಂಸ್ಥಾಪಕ ಅಧ್ಯಕ್ಷ ಸುಧಾಕರ ಶೆಟ್ಟಿ ಬಹುಮಾನ ವಿತರಿಸುವರು. ವಕೀಲ ಸುಧೀರ್ ಕುಮಾರ್ ಮುರೊಳ್ಳಿ ಅವರು ಜಾನಪದ ನೂರೊಂದು ಕೃತಿ ಬಿಡುಗಡೆಗೊಳಿಸುವರು ಎಂದು ಹೇಳಿದರು.
ಜೀಶಂಪ ರಾಜ್ಯ ಜಾನಪದ ಪ್ರಶಸ್ತಿ ನನ್ನನ್ನೂ ಒಳಗೊಂಡಂತೆ, ರಾಯಚೂರಿನ ಶರಣಪ್ಪ ಗೋನಾಳ್, ಉಡುಪಿಯ ಗಣೇಶ್ ಗಂಗೊಳ್ಳಿ, ತುಮಕೂರಿನ ಶ್ರೀನಿವಾಸಮೂರ್ತಿ, ಚಿಕ್ಕಮಗಳೂರಿನ ಸೂರಿ ಶ್ರೀನಿವಾಸ್, ಬಾಗಲಕೋಟೆಯ ಡಿ.ಎಂ.ಸಾಹುಕಾರ್, ಕೋಲಾರದ ಮುನಿ ವೆಂಕಟೇಗೌಡ, ಉತ್ತರ ಕನ್ನಡದ ಪ್ರಕಾಶ್ ನಾಯಕ್ ಬೊಮ್ಮಣ್ಣ, ಶಿವಮೊಗ್ಗ ದ ವಿದ್ವಾನ್ ಮಹೇಂದ್ರ ಗೋರೆ, ಬೆಂಗಳೂರಿನ ರಿಯಾಜ್ ಪಾಷ ಅವರಿಗೆ ಪ್ರಶಸ್ತಿ ಪ್ರದಾನ ನಡೆಯಲಿದೆ ಎಂದರು.
ಅಳಸಂಗಿ ಪೆರುಮಾಳ್ ರಾಜ್ಯ ಜಾನಪದ ಪ್ರಶಸ್ತಿಗೆ ಕೊಪ್ಪದ ಕೆ.ಆರ್.ಶ್ರೀನಿವಾಸ್ ಕುಂಚೂರು, ಮಧುರ ಚೆನ್ನ ರಾಜ್ಯ ಜಾನಪದ ಪ್ರಶಸ್ತಿಗೆ ಮೈಸೂರಿನ ಚೆಲುವರಾಜು, ಕರೀಂ ಖಾನ್ ರಾಜ್ಯ ಜಾನಪದ ಪ್ರಶಸ್ತಿಗೆ ಧಾರವಾಡದ ಕೆ.ಎಸ್.ಕೌಜಲಗಿ ಅವರಿಗೆ ಪ್ರಶಸ್ತಿ ಪ್ರದಾನ ನಡೆಯಲಿದೆ ಇಂದು ಮಾಹಿತಿ ನೀಡಿದರು.
ವೆಂಕಟೇಶ್ವರ ವಿದ್ಯಾಮಂದಿರದ ಮುಖ್ಯಶಿಕ್ಷಕ ಮಹಾಬಲೇಶ್, ಜಾನಪದ ಕಲಾವಿದ ಕೆ.ಆರ್.ಶ್ರೀನಿವಾಸ್, ತಾಲೂಕು ಕನ್ನಡ ಜಾನಪದ ಪರಿಷತ್ ಘಟಕದ ನಿಯೋಜಿತ ಅಧ್ಯಕ್ಷ ಹೇಮಂತ್ ಶೆಟ್ಟಿ, ತಾಲೂಕು ಮಹಿಳಾ ಘಟಕದ ನಿಯೋಜಿತ ಅಧ್ಯಕ್ಷೆ ಮೈತ್ರಾ ಗಣೇಶ್ ಇದ್ದರು.