5 ಸಾವಿರ ರೂ. ನೀಡದ್ದಕ್ಕೆ ಜಾನಪದ ಗಾಯಕನ ಕೊಲೆ

13BGV_maruti latte1
Published on

ಚಿಕ್ಕೋಡಿ: ಐದು ಸಾವಿರ ರೂ.ಮರಳಿ ನೀಡದ ಕಾರಣಕ್ಕೆ ಬೂದಿಹಾಳ ಗ್ರಾಮದ ಯುವ ಜಾನಪದ ಗಾಯಕ ಮಾರುತಿ ಅಡಿವೆಪ್ಪ ಲಠ್ಠೆ(22)ನನ್ನು ಕಾರು ಹಾಯಿಸಿ ಕೊಲೆ ಮಾಡಲಾಗಿದ್ದು, ಈ ಕುರಿತು 11 ಜನರ ವಿರುದ್ಧ ರಾಯಬಾಗ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಇಬ್ಬರನ್ನು ಬಂಧಿಸಲಾಗಿದೆ.

ಸಿದ್ದರಾಮ ದೇವಪ್ಪ ಒಡೆಯರ, ಆಕಾಶ ಪೂಜೇರಿ ಇವರನ್ನು ಬಂಧಿಸಲಾಗಿದೆ. ಉಳಿದ ಈರಪ್ಪ ವಸಂತ ಅಕ್ಕಿವಾಟೆ, ಹಾಲಪ್ಪ ಅಕ್ಕಿವಾಟೆ, ಮಾರುತಿ ಅಕ್ಕಿವಾಟೆ, ವಸಂತ ಅಕ್ಕಿವಾಟೆ, ರಾಮಾ ಅಕ್ಕಿವಾಟೆ, ವಿಜಯ ಅಕ್ಕಿವಾಟೆ, ವಿಠ್ಠಲ ಅಕ್ಕಿವಾಟೆ, ಮಲ್ಲಪ್ಪ ಅಕ್ಕಿವಾಟೆ ಮತ್ತು ಹಾಲಪ್ಪ ಅಕ್ಕಿವಾಟೆ ತಲೆ ಮರೆಸಿಕೊಂಡಿದ್ದಾರೆ.

ವಿವರ: ಕೊಲೆಯಾದ ಯುವಕ ಮಾರುತಿ ಲಠ್ಠೆ ಆರೋಪಿ ಈರಪ್ಪ ಅಕ್ಕಿವಾಟೆ ಬಳಿ ಕಬ್ಬಿನ ಗ್ಯಾಂಗ್​ನಲ್ಲಿ ಕೂಲಿ ಕೆಲಸಕ್ಕೆ ಬರುತ್ತೇನೆ ಎಂದು ಮುಂಗಡ 50 ಸಾವಿರ ರೂ. ಪಡೆದಿದ್ದ. ಬಳಿಕ ಕೆಲಸಕ್ಕೆ ಹೋಗಲಾಗದೆ ಅದರಲ್ಲಿನ 45 ಸಾವಿರ ರೂ.ಮರಳಿ ನೀಡಿದ್ದನು. ಉಳಿದ 5 ಸಾವಿರ ರೂ. ಮರಳಿ ನೀಡದಿರುವುದಕ್ಕೆ ಕುಪಿತಗೊಂಡ ಆರೋಪಿತರು ಜು.10ರಂದು ಮಾರುತಿ ತನ್ನ ಸ್ನೇಹಿತನೊಂದಿಗೆ ಬೈಕ್​ ಮೇಲೆ ಹೋಗುವಾಗ ಬೈಕ್​ ಅಡ್ಡಗಟ್ಟಿ ಕಾರು ಹಾಯಿಸಿ ಕೊಲೆ ಮಾಡಿದ್ದಾರೆ. ಈ ಕುರುತಿ ಜು.11ರಂದು ಪ್ರಕರಣ ದಾಖಲಾಗಿದೆ. ಅಪಘಾತದಲ್ಲಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವ ಮೃತ ಮಾರುತಿ ಸ್ನೇಹಿತ ಮಾರುತಿ ಂಟೆ ನೀಡಿದ ಮಾಹಿತಿ ಆಧಾರದ ಮೇಲೆ 11 ಜನರ ವಿರುದ್ಧ ಪ್ರಕರಣ ದಾಖಲು ಮಾಡಿ, ಇಬ್ಬರನ್ನು ಬಂಧಿಸಲಾಗಿದೆ ಎಂದು ಪ್ರಕರಣ ದಾಖಲಿಸಿಕೊಂಡ ರಾಯಬಾಗ ಪೊಲೀಸರು ಮಾಹಿತಿ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net