ಜನಪದರ ಸೊಗಡು ಅನನ್ಯ

janapada
ರಾಜಾಂಗಣದಲ್ಲಿ ಕನ್ನಡ ಜಾನಪದ ಪರಿಷತ್ ವತಿಯಿಂದ ಜಿಲ್ಲಾ ಜಾನಪದ ಸಮ್ಮೇಳನ ಸಾಧಕರನ್ನು ಸನ್ಮಾನಿಸಲಾಯಿತು.
Published on

ವಿಜಯವಾಣಿ ಸುದ್ದಿಜಾಲ ಉಡುಪಿ
ಕಬಡ್ಡಿ, ಲಗೋರಿ, ಸೊಪ್ಪಿನಾಟ ಮೊದಲಾದ ಜಾನಪದ ಕ್ರೀಡೆಗಳಲ್ಲಿರುವ ಸೊಬಗು ಮತ್ತು ಆತ್ಮೀಯತೆ ಬೇರೆ ಕ್ರೀಡೆಗಳಲ್ಲಿ ಇಲ್ಲ. ಜಾನಪದೀಯ ಸೊಗಡು ಶಾಶ್ವತವಾಗಿದ್ದು, ಈ ಪರಂಪರೆಯನ್ನು ಉಳಿಸಿ ಬೆಳೆಸಬೇಕು ಎಂದು ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ ಹೇಳಿದರು.

ರಾಜಾಂಗಣದಲ್ಲಿ ಕನ್ನಡ ಜಾನಪದ ಪರಿಷತ್ ವತಿಯಿಂದ ಜಿಲ್ಲಾ ಜಾನಪದ ಸಮ್ಮೇಳನವನ್ನು ಮಂಗಳವಾರ ಉದ್ಘಾಟಿಸಿ ಮಾತನಾಡಿದರು.
ಗೊಲ್ಲರ ಮಧ್ಯೆಯೇ ಕೃಷ್ಣ ಅವತರಿಸಿದ್ದರಿಂದ ಜಾನಪದಕ್ಕೆ ಪ್ರೋತ್ಸಾಹ ನೀಡುವುದು ಅರ್ಥಪೂರ್ಣ ಕೆಲಸ ಎಂದು ಹೇಳಿದರು.ಸಮ್ಮೇಳನಾಧ್ಯಕ್ಷ ಡಾ.ಗಣನಾಥ ಎಕ್ಕಾರು ಮಾತನಾಡಿ, ತುಳು ಭಾಷೆ ಮತ್ತು ಸಂಸ್ಕೃತಿ, ಜಾನಪದದ ಬಗ್ಗೆ ಸಾಕಷ್ಟು ಅಧ್ಯಯನ ನಡೆದಿದೆ. ಅದೇ ರೀತಿ ಕುಂದಗನ್ನಡ ಬಗ್ಗೆ ಹೆಚ್ಚಿನ ಅಧ್ಯಯನ ನಡೆಯಬೇಕು. ಸಂವೇದನೆಗಳನ್ನು ಕಳೆದುಕೊಳ್ಳುತ್ತಿರುವುದು ಇಂದಿನ ಎಲ್ಲ ಸಮಸ್ಯೆಗಳಿಗೆ ಕಾರಣ. ಸೂಕ್ಷ್ಮ ಸಂವೇದನೆ ಉಳಿಸಿಕೊಳ್ಳಲು ಜಾನಪದ ಪ್ರಧಾನ ಆಕರ. ಎಲ್ಲರೂ ಸಮಾನರು ಎಂಬ ಜಾನಪದೀಯ ಚಿಂತನೆ ಸಂವಿಧಾನಕ್ಕೆ ಮೂಲ ಪ್ರೇರಣೆ. ಜಾನಪದದ ತತ್ವಗಳನ್ನು ಬದುಕಿಗೆ ಅನ್ವಯಿಸುವುದು ಬಹಳ ಮುಖ್ಯ ಎಂದರು.

ಪರಿಷತ್ತಿನ ಅಧ್ಯಕ್ಷ ಡಾ.ಜಾನಪದ ಎಸ್.ಬಾಲಾಜಿ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಶಾಸಕ ಕೆ. ರಘುಪತಿ ಭಟ್, ಜಿಲ್ಲಾ ಸ್ಕೌಟ್ಸ್ ಆ್ಯಂಡ್ ಗೈಡ್ಸ್ ಆಯುಕ್ತ ಜಯಕರ ಶೆಟ್ಟಿ ಇಂದ್ರಾಳಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಪೂರ್ಣಿಮಾ, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಸುರೇಂದ್ರ ಅಡಿಗ, ತುಳು ಪಾಡ್ದನ ಕಲಾವಿದ ಕೃಷ್ಣ ಪಾಣ, ಪಾಣರಾಟ ಕಲಾವಿದ ನಾಗರಾಜ್ ಪಾಣ, ಜನಪದ ಕಲಾವಿದ ಶಂಕರ್‌ದಾಸ್, ಸಂಪ್ರದಾಯ ಹಾಡುಗಳ ಗಾಯಕಿ ಜಾಹ್ನವಿ ಹೇರ್ಳೆ, ಹೌಂದರಾಯನ ವಾಲ್ಗ ಕಲಾವಿದ ಸತೀಶ್ ಕಾಂಚನ್, ಯಕ್ಷಗಾನ ಕಲಾವಿದೆ ಜ್ಯೋತಿ ಮಾಧವ ಪ್ರಭು, ಪರಿಷತ್ ತಾಲೂಕು ಅಧ್ಯಕ್ಷೆ ಮಾಯಾ ಕಾಮತ್, ಜಂಟಿ ಕಾರ್ಯದರ್ಶಿ ಮೊಹಮ್ಮದ್ ಫಾರೂಕ್, ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಸುವರ್ಣ ಕಟಪಾಡಿ, ಖಜಾಂಚಿ ಚಂದ್ರ ಹಂಗಾರಕಟ್ಟೆ ಮತ್ತಿತರರು ಉಪಸ್ಥಿತರಿದ್ದರು.

ಸಂಘಟನಾ ಕಾರ್ಯದರ್ಶಿ ರಾಘವೇಂದ್ರ ಪ್ರಭು ಕರ್ವಾಲು ಸ್ವಾಗತಿಸಿ, ಪರಿಷತ್ ಜಿಲ್ಲಾಧ್ಯಕ್ಷ ಡಾ. ಗಣೇಶ್ ಗಂಗೊಳ್ಳಿ ಪ್ರಸ್ತಾವನೆಗೈದರು. ಎನ್.ಆರ್.ದಾಮೋದರ ಶರ್ಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net