ಬದುಕಿನ ಪಾಠ ಕಲಿಸಿಕೊಟ್ಟ ಜಾನಪದ ಸಾಹಿತ್ಯ

14sgr1
ಕರ್ನಾಟಕ ಜಾನಪದ ಪರಿಷತ್ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಆರ್.ಎಸ್.ಶಂಕರಣ್ಣ ಅವರನ್ನು ಸನ್ಮಾನಿಸಲಾಯಿತು. ಡಿ.ಮಂಜುನಾಥ್, ಡಾ. ರಾಜೇಶ್ವರಿ, ಸತ್ಯನಾರಾಯಣ ಖಂಡಿಕಾ, ಉಮೇಶ್ ಹಿರೇನೆಲ್ಲೂರು, ಕಸ್ತೂರಿ ಸಾಗರ್ ಇತರರಿದ್ದರು.
Published on

ಸಾಗರ: ಜಾನಪದ ಸಾಹಿತ್ಯ ಬದುಕಿನ ಪಾಠ ಕಲಿಸಿಕೊಟ್ಟಿದೆ. ಜೀವನದ ನಿಗೂಢ ಸತ್ಯಗಳು, ಇತಿಹಾಸ, ಪರಂಪರೆ, ಪುರಾಣದ ಕಥಾನಕಗಳನ್ನು ಜನತೆಗೆ ಪರಿಚಯಿಸುವಲ್ಲಿ ಲಾವಣಿಯ ಪಾತ್ರ ದೊಡ್ಡದು ಎಂದು ಕಸಾಪ ಜಿಲ್ಲಾಧ್ಯಕ್ಷ ಡಿ. ಮಂಜುನಾಥ್ ಹೇಳಿದರು.

ನಗರದ ಶ್ರೀಮತಿ ಇಂದಿರಾಗಾAಽ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶುಕ್ರವಾರ ಕರ್ನಾಟಕ ಜಾನಪದ ಪರಿಷತ್‌ನಿಂದ ಹಮ್ಮಿಕೊಳ್ಳಲಾಗಿದ್ದ ಮುಂಗಾರು ಜಾನಪದ ಸಂಭ್ರಮ ಕಾರ್ಯಕ್ರಮದಲ್ಲಿ ಬಿ.ಎಸ್ಸಿ ವಿದ್ಯಾರ್ಥಿಗಳಿಗೆ ಕನ್ನಡ ಪಠ್ಯದಲ್ಲಿ ಅಳವಡಿಸಿರುವ ಮೈಲಾರ ಮಹಾದೇವ ಅವರ ಲಾವಣಿ ಕುರಿತ ವಿಶ್ಲೇಷಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಪ್ರಸ್ತುತ ದಿನಗಳಲ್ಲಿ ವಿದ್ಯಾರ್ಥಿಗಳು ಸಿದ್ಧವಾಗಿರುವ ನೋಟ್ಸ್ಗಳತ್ತ, ಮೊಬೈಲ್ ಮೂಲಕ ಸಿಗುವ ಮಾಹಿತಿಯನ್ನೇ ಪರೀಕ್ಷೆಯಲ್ಲಿ ಉತ್ತರಿಸುತ್ತಿದ್ದಾರೆ. ತರಗತಿಯಲ್ಲಿ ಪ್ರಾಧ್ಯಾಪಕರು ಬೋಽಸುವ ಪಠ್ಯವನ್ನು ಆಸಕ್ತಿಯಿಂದ ಕೇಳುವ ಪರಿಪಾಠದಿಂದ ಹೊರಗೆ ಉಳಿದಿದ್ದಾರೆ. ಇದರಿಂದಾಗಿ ಪಾಠದಲ್ಲಿನ ಒಳತಿರುಳನ್ನು ವಿದ್ಯಾರ್ಥಿಗಳು ಅರ್ಥೈಸಿಕೊಳ್ಳುತ್ತಿಲ್ಲ. ತರಗತಿಯಲ್ಲಿ ಕುಳಿತು ಪಾಠಗಳನ್ನು ಶ್ರದ್ಧೆಯಿಂದ ಕೇಳಿದಾಗ ಪಠ್ಯವನ್ನು ಹೊಸ ಆಯಾಮದಲ್ಲಿ ನೋಡಲು ಸಾಧ್ಯ ಎಂದರು.
ಸ್ವಾತAತ್ರ‍್ಯ ಚಳವಳಿಯಲ್ಲಿ ಪಾಲ್ಗೊಂಡಿದ್ದ ಮೈಲಾರ ಮಹಾದೇವರ ಕುರಿತು ಶಿಕಾರಿಪುರ ತಾಲೂಕಿನ ಸಮದ್ ಸಾಬ್ ಅತ್ಯಂತ ಆಳವಾಗಿ ಲಾವಣಿ ಬರೆದಿದ್ದಾರೆ. ಸ್ವಾತಂತ್ರ‍್ಯ ಸಂಗ್ರಾಮದಲ್ಲಿ ಈ ಲಾವಣಿ ಹಾಡುವ ಮೂಲಕ ಚಳವಳಿಯ ಕಾವು ಹೆಚ್ಚಿಸಿದ್ದರು. ಜತೆಗೆ ಚಳವಳಿಯ ಪ್ರಮುಖರಿಗೆ ಲಾವಣಿ ಮೂಲಕ ಸಂದೇಶ ಕಳಿಸುತ್ತಿದ್ದರು. ಅವರ ಲಾವಣಿಯನ್ನು ಕುವೆಂಪು ವಿಶ್ವವಿದ್ಯಾಲಯದ ಬಿಎಸ್ಸಿ ಕನ್ನಡ ಪಠ್ಯದಲ್ಲಿ ಅಳವಡಿಸಿದ್ದು ಈ ಕುರಿತು ವಿದ್ಯಾರ್ಥಿಗಳಿಗೆ ಸಮಗ್ರ ಮಾಹಿತಿ ನೀಡುವ ಕೆಲಸವನ್ನು ಪರಿಷತ್ ಮಾಡುತ್ತಿದೆ. ಜಾನಪದ ಸಾಹಿತ್ಯವನ್ನು ಹೊಸ ತಲೆಮಾರಿಗೆ ತಲುಪಿಸುವ ಕೆಲಸ ಆಗಬೇಕಿದೆ ಎಂದು ಹೇಳಿದರು.
ಜಾನಪದ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಲಾವಣಿಕಾರ ಆರ್.ಎಸ್.ಶಂಕರಣ್ಣ ಅವರನ್ನು ಸನ್ಮಾನಿಸಲಾಯಿತು. ಪ್ರಾಚಾರ್ಯೆ ಡಾ. ರಾಜೇಶ್ವರಿ ಅಧ್ಯಕ್ಷತೆ ವಹಿಸಿದ್ದರು. ಸತ್ಯನಾರಾಯಣ ಖಂಡಿಕಾ, ಉಮೇಶ್ ಹಿರೇನೆಲ್ಲೂರು, ಕಸ್ತೂರಿ ಸಾಗರ್, ಪ್ರೊ. ಮಹಾಬಲೇಶ್ವರ್, ಎಸ್.ಬಿ.ರಘುನಾಥ್, ಭಾಗೀರಥಿ, ಸರೋಜಮ್ಮ, ವಸಂತ ಕುಗ್ವೆ, ರಾಜು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net