ಸಂಸ್ಕೃತಿ ಉಳಿಸಿದ ಜನಪದ ಸಾಹಿತ್ಯ

Folk literature that preserved culture
ತಾಳಿಕೋಟೆ ಪಟ್ಟಣದ ಶ್ರೀ ಸಂಗಮೇಶ್ವರ ಸಭಾಭವನದಲ್ಲಿ ಆಯೋಜಿಸಿದ್ದ ಲೋಕ : ವಿಭಿನ್ನ ಧ್ವನಿಗಳು ಉಪನ್ಯಾಸ ಮತ್ತು ಲಾವಣಿ ಜಾನಪದ ಕಲಾ ಪ್ರದರ್ಶನ ಕಾರ್ಯಕ್ರಮವನ್ನು ಸಾಹಿತಿ ಪ್ರೊ.ಬಿ.ಆರ್ ಪೊಲೀಸ ಪಾಟೀಲ ಉದ್ಘಾಟಿಸಿದರು. ಎಚ್.ಎಸ್.ಪಾಟೀಲ, ಆರ್.ಎಲ್ ಕೊಪ್ಪದ, ಶ್ರೀಕಾಂತ ಪತ್ತಾರ ಮತ್ತಿತರರಿದ್ದರು.
Published on

ತಾಳಿಕೋಟೆ: ಜನಪದ ಸಾಹಿತ್ಯದಿಂದ ಕನ್ನಡ ಭಾಷೆ ಹಾಗೂ ದೇಶದ ಸಂಸ್ಕೃತಿ, ಪರಂಪರೆ ಉಳಿಯಲು ಸಾಧ್ಯವಾಗಿದೆ ಎಂದು ಸಾಹಿತಿ, ಲಾವಣಿ ತತ್ವಪದಕಾರರಾದ ಪ್ರೊ.ಬಿ.ಆರ್. ಪೊಲೀಸ ಪಾಟೀಲ ಹೇಳಿದರು.

ಪಟ್ಟಣದ ಶ್ರೀ ಸಂಗಮೇಶ್ವರ ಸಭಾಭವನದಲ್ಲಿ ಸಾಹಿತ್ಯ ಅಕಾಡೆಮಿ ಮತ್ತು ಎಸ್.ಎಸ್.ವಿದ್ಯಾ ಸಂಸ್ಥೆ ತಾಳಿಕೋಟೆ ಸಂಯುಕ್ತ ಆಶ್ರಯದಲ್ಲಿ ಗುರುವಾರ ಆಯೋಜಿಸಿದ್ದ ಲೋಕ:ವಿಭಿನ್ನ ಧ್ವನಿಗಳು ಉಪನ್ಯಾಸ ಮತ್ತು ಲಾವಣಿ ಜಾನಪದ ಕಲಾ ಪ್ರದರ್ಶನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಜನಪದದಲ್ಲಿ ವಿಭಿನ್ನವಾದ ಶೈಲಿ ಮತ್ತು ಪರಂಪರೆ ಅಡಗಿದೆ. ಈ ಪರಂಪರೆ ಉಳಿಸುವ ನಿಟ್ಟಿನಲ್ಲಿ ನಾವೆಲ್ಲರೂ ಸಾಗಬೇಕಿದೆ. ಸಮಾಜದಲ್ಲಿ ನೈತಿಕ ಮೌಲ್ಯ ಕುಸಿಯುತ್ತಿದ್ದು, ಜನಪದ ಸಂಪ್ರದಾಯಗಳು ಜನರ ಮನಸ್ಸಿನಿಂದ ಮಸುಕಾಗುತ್ತಿವೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಶ್ರೀ ಶಿವಯೋಗಿ ಸಂಗಮಾರ್ಯ ವಿದ್ಯಾ ಸಂಸ್ಥೆ ಅಧ್ಯಕ್ಷ ಎಚ್.ಎಸ್.ಪಾಟೀಲ ಮಾತನಾಡಿ, ಜನಪದ ಸಾಹಿತ್ಯ ಕನ್ನಡ ಭಾಷೆ ತಾಯಿಬೇರು ಇದ್ದಂತೆ. ಇದನ್ನು ವಿದ್ಯಾರ್ಥಿಗಳಿಗೆ ಪರಿಚಯಿಸುವ ಅಗತ್ಯವಿದೆ. ಲಾವಣಿ ಹಾಡುಗಳನ್ನು ಕಲಿಯುವವರಿಗೆ ತರಬೇತಿ ಕೊಡಿಸುವ ಕೆಲಸವನ್ನು ನಮ್ಮ ವಿದ್ಯಾಸಂಸ್ಥೆಯಿಂದ ಮಾಡಲಾಗುವುದು ಎಂದರು.

ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಆರ್.ಎಲ್ ಕೊಪ್ಪದ ಹಾಗೂ ಜೆಎಸ್‌ಜಿ ೌಂಡೇಷನ್ ನಿರ್ದೇಶಕ ಶ್ರೀಕಾಂತ ಪತ್ತಾರ ಮಾತನಾಡಿದರು. ಎಸ್.ಎಸ್.ವಿದ್ಯಾ ಸಂಸ್ಥೆ ಕಾರ್ಯದರ್ಶಿ ಸಚಿನ್ ಪಾಟೀಲ, ಆಡಳಿತಾಧಿಕಾರಿ ಕಿರಣ ಪಾಟೀಲ, ರವಿ ಪಾಟೀಲ ಮತ್ತಿತರರಿದ್ದರು. ಶಿಕ್ಷಕ ಎಸ್.ಸಿ.ಗುಡಗುಂಟಿ ಸ್ವಾಗತಿಸಿದರು, ಶಿಕ್ಷಕ ಬಿ.ಐ.ಹಿರೇಹೊಳಿ ನಿರೂಪಿಸಿದರು. ಎಸ್.ವಿ. ಜಾಮಗೊಂಡಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net