ಜನಪದ ಸಾಹಿತ್ಯ ಪಠ್ಯದಲ್ಲಿ ಸೇರಿಸಬೇಕು

CTD JANAPADA 23 (1)
Published on

ಚಿತ್ರದುರ್ಗ: ಅಧುನಿಕ ಕಾಲಘಟ್ಟದ ಶಾಲಾ ಮಕ್ಕಳಿಗೆ ಜಪನದ ಸಾಹಿತ್ಯ, ಕಲೆಗಳ ಕುರಿತು ಸರ್ಕಾರ ಪಠ್ಯದಲ್ಲಿ ಸೇರ್ಪಡೆಗೊಳಿಸಿ ಮಾರ್ಗದರ್ಶಿಸಿದರೆ ಜನಪದ ಸಾಹಿತ್ಯ, ಕಲೆ ಉಳಿಯುತ್ತವೆ ಎಂದು ಜನಪದ ಕಲಾವಿದ ಆಯಿತೋಳು ಪಾಂಡುರಂಗಪ್ಪ ಹೇಳಿದರು.

ಜೋಡಿಚಿಕ್ಕೇನಹಳ್ಳಿ ಗೊಲ್ಲರಹಟ್ಟಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ಆಯೋಜಿಸಿದ್ದ ಜನಪದ ಗೀತಗಾಯನ ಕಾರ್ಯಕ್ರಮದಲ್ಲಿ ಮಾತನಾಡಿದರು.

ಶಾಲಾ ಕಾಲೇಜುಗಳಿಗೆ ಸ್ಥಳೀಯ ಜನಪದ ಕಲಾವಿದರು, ಹಾಡುಗಾರರು, ಸೋಬಾನೆ ಪದಗಾರರನ್ನು ಶಾಲಾವಧಿಯಲ್ಲಿ ಕರೆಯಿಸಿ ಅವರಲ್ಲಿನ ಜನಪದ ಹಾಡು, ನೃತ್ಯಗಳನ್ನು ಪರಿಚಯಿಸಬೇಕು ಎಂದರು.

ಕಲಾವಿದ ರಾಜು ಮಾತನಾಡಿ, ಇಂದಿನ ಮಕ್ಕಳಿಗೆ ಜನಪದ ವಾದ್ಯಗಳು, ಹಾಡು, ಒಗಟು, ಗಾದೆ, ಸೋಬಾನೆ ಪದ ದೇವರ ಹಾಡುಗಳನ್ನು ಕಲಿಸಿದರೆ ನಮ್ಮ ಸಂಪ್ರದಾಯ ಸಂಸ್ಕೃತಿ ಉಳಿಯುತ್ತದೆ ಎಂದು ಹೇಳಿದರು.

ಬಿಸಿಯೂಟ ಕಾರ್ಯಕರ್ತೆ ಸರೋಜಾ ಮಾತನಾಡಿ, ಅನಾದಿ ಕಾಲದಿಂದಲೂ ನಮ್ಮ ಪೂರ್ವಜರು ತಮ್ಮ ಹೊಲ-ಮನೆಗಳಲ್ಲಿ ಕೃಷಿ ಬದುಕಿನ ನಡುವೆ ಜನಪದ ಗೀತೆಗಳನ್ನು ಹಾಡಿಕೊಂಡು ನೂರಾರು ಕಾಲ ಬದುಕಿ ಬಾಳಿದ್ದಾರೆ. ಇದನ್ನು ನಮ್ಮ ಮಕ್ಕಳಿಗೂ ಕಲಿಸಬೇಕಿದೆ ಎಂದರು.

ಶಿಕ್ಷಕರಾದ ಚಿತ್ತಯ್ಯ, ಅತಿಥಿ ಶಿಕ್ಷಕಿ ಮೇಘಾ, ಗ್ರಾಮದ ಶಿಕ್ಷಕ ರಾಜು, ಅಡುಗೆ ಸಿಬ್ಬಂದಿ ಸರೋಜಾ, ತಿಪ್ಪಮ್ಮ, ಶಾಲಾ ಮುಖ್ಯಮಂತ್ರಿ ತ್ರಿವೇಣಿ, ಸಿದ್ದೇಶ, ಚಂದನಾ, ಸ್ಫೂರ್ತಿ, ಸ್ವಾಮಿ, ದೀಕ್ಷಾ, ಕಿರಣ್, ಸಿದ್ದು ಯಾದವ್, ಶಿಲ್ಪಾ, ಸುಚಿತ್ರಾ ಇದ್ದರು.

ತತ್ವಪದ, ಭಕ್ತಿಗೀತೆ, ದೇಶಭಕ್ತಿಗೀತೆ, ನಾಡು ನುಡಿಯ ಕುರಿತು ಆಯಿತೋಳು ಪಾಂಡುರಂಗಪ್ಪ ಹಾಡಿ ಮಕ್ಕಳನ್ನು ರಂಜಿಸಿದರು. ಶಾಲಾ ಶಿಕ್ಷಣ ಇಲಾಖೆ, ಶಾಲಾ ಸಮಿತಿ ಹಾಗೂ ಸಹಿಪ್ರಾ ಶಾಲೆ ವತಿಯಿಂದ ಆಯೋಜಿಸಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net