

ತರೀಕೆರೆ: ಜಾನಪದ ಮಹಿಳಾ ಪ್ರಧಾನವಾಗಿದೆ ಎಂದು ಕನ್ನಡ ಜಾನಪದ ಪರಿಷತ್ ರಾಜ್ಯಾಧ್ಯಕ್ಷ ಡಾ.ಎಸ್.ಬಾಲಾಜಿ ಹೇಳಿದರು.
ಅಜ್ಜಂಪುರ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಕನ್ನಡ ಜಾನಪದ ಪರಿಷತ್ ತಾಲೂಕು ಮಹಿಳಾ ಘಟಕ ಶುಕ್ರವಾರ ಏರ್ಪಡಿಸಿದ್ದ ಪದ ಪ್ರಧಾನ ಸಮಾರಂಭ ಉದ್ಘಾಟಿಸಿ ಮಾತನಾಡಿ, ಮಹಿಳೆಯರಿಗೆ ಜಾನಪದದ ಎಲ್ಲ ಆಯಾಮಗಳಲ್ಲಿ ಮುಖ್ಯ ಪಾತ್ರ ಲಭಿಸಿದೆ. ಭೌತಿಕ ಪರಂಪರೆ ಹುಟ್ಟಿದ್ದು, ಮಹಿಳೆಯರಿಂದ ಅದನ್ನು ಅವರೇ ಪೋಷಿಸುತ್ತಿದ್ದಾರೆ. ಶಿಶು ಪ್ರಾಸ ಗೀತೆ, ದೂರಿ ಸೇರಿ ತೊಟ್ಟಿಲು ಪದಗಳು ಅಳುವಿನಂಚಿನಲ್ಲಿವೆ. ಇವುಗಳನ್ನು ತರಬೇತಿ ಮೂಲಕ ಮುಂದಿನ ಪೀಳಿಗೆಗೆ ಕೊಂಡೊಯ್ಯುವ ಕೆಲಸವಾಗಬೇಕಿದೆ ಎಂದರು.
ತಾಪಂ ಇಒ ಕೆ.ಎಂ.ವಿಜಯಕುಮಾರ್ ಮಾತನಾಡಿ, ಜಾನಪದ ಸಾಹಿತ್ಯವನ್ನು ದಾಖಲೀಕರಣದ ಮೂಲಕ ಉಳಿಸುವ ಅನಿವಾರ್ಯತೆ ಎದುರಾಗಿದೆ. ಗ್ರಂಥ ರೂಪದಲ್ಲಿ ತರುವುದು ಬಹು ಮುಖ್ಯವಾಗಿದೆ ಎಂದರು.
ಕೇಂದ್ರ ಜಾನಪದ ಅಕಾಡೆಮಿ ಪ್ರಶಸ್ತಿ ಪುರಸ್ಕೃತೆ ಮುಗುಳಿ ಲಕ್ಷ್ಮೀದೇವಮ್ಮ, ಜಿಲ್ಲಾ ಗೌರವಾಧ್ಯಕ್ಷೆ ಸವಿತಾ, ತಾಲೂಕು ಅಧ್ಯಕ್ಷೆ ಪುಷ್ಪಾ ನಿಕಟಪೂರ್ವ ಅಧ್ಯಕ್ಷೆ ಕೆ.ಸಿ.ವಿಜಯಕುಮಾರಿ, ತಾಪಂ ಮಾಜಿ ಅಧ್ಯಕ್ಷೆ ಪ್ರತಿಮಾ, ಪ್ರಮುಖರಾದ ಆಶಾ, ರಂಜಿತಾ ಮತ್ತಿತರರಿದ್ದರು.