

ಧಾರವಾಡ: ಜಾನಪದ ಸಾಹಿತ್ಯ ಮೌಲ್ಯಯುತವಾಗಿದ್ದು ಇಂದಿನ ಎಷ್ಟೋ ಸಮಸ್ಯೆಗಳಿಗೆ ಪರಿಹಾರವನ್ನು ಒದಗಿಸಿದೆ ಎಂದು ಸಂಶೋಧಕ ಡಾ.ಬಾಳಪ್ಪ ಚಿನಗುಡಿ ಹೇಳಿದರು.
ಜಾನಪದ ಸಂಶೋಧನ ಕೇಂದ್ರದಲ್ಲಿ ನಡೆದ ಜಾನಪದ ಹಬ್ಬದ ಹಾಡುಗಳ ಸ್ಪರ್ಧೆ ಹಾಗೂ ಡಾ. ಬಸವರಾಜೇಶ್ವರಿ ಬಾರಕೇರ ಅವರು ಸಂಪಾದಿಸಿದ 'ಕ್ಯಾದಗಿ ಘಮ' ಪುಸ್ತಕ ಲೋಕಾರ್ಪಣೆ ಮಾಡಿ ಮಾತನಾಡಿದರು.
ಜಾನಪದ ಸರಳ, ಸಹಜ, ಆಡಂಬರವಿಲ್ಲದ ಜನಪದರ ಜೀವನ ಪದ್ಧತಿಯು ಮೌಲ್ಯಗಳ ಖಣಜವಾಗಿದೆ. ಜನಪದರು ಬದುಕನ್ನು ಸ್ವಾನುಭವದಿಂದ ಅರಿತು ಅರುಹಿದರು. ಇಂದಿನ ಕೃತಕ ಬುದ್ಧಿಮತ್ತೆ ಕಾಲದಲ್ಲಿ ಬದುಕಿನ ನಿಜವಾದ ಆನಂದ, ನೆಮ್ಮದಿ ಹಾಗೂ ಸಂತೋಷವನ್ನು ಅನುಭವಿಸಲು ಸಾಧ್ಯವಾಗುತ್ತಿಲ್ಲ. ಈ ಪುಸ್ತಕದಲ್ಲಿ ಅಮೂಲ್ಯ ಜಾನಪದ ಸಾಹಿತ್ಯದ ವಿವಿಧ ಪ್ರಕಾರಗಳನ್ನು ಚೆನ್ನಾಗಿ ವಿವರಿಸಿದ್ದಾರೆ ಎಂದರು.
ಅತಿಥಿಗಳಾಗಿ ಆಗಮಿಸಿದ್ದ ಡಾ.ವೀಣಾ ಬಿರಾದಾರ ಮಾತನಾಡಿದರು.
ಪ್ರೊ.ಮಾಲತಿ ಪಟ್ಟಣಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಕೃತಿ ರಚಿಸಿದ ಡಾ.ಬಸವರಾಜೇಶ್ವರಿ ಬಾರಕೇರ, ನಿರ್ಣಾಯಕರಾದ ಸುನಂದ ನಿಂಬನಗೌಡರ, ಡಾ.ಪ್ರಭಾ ನೀರಲಗಿ, ಅರುಣಾ ನಂದಿಬೇವೂರ ವೇದಿಕೆಯಲ್ಲಿದ್ದರು.
ಹಬ್ಬದ ಹಾಡುಗಳು ಸ್ಪರ್ಧೆಯಲ್ಲಿ 16ಕ್ಕೂ ಹೆಚ್ಚು ಮಹಿಳಾ ಮಂಡಳಗಳು ಭಾಗವಹಿಸಿ ವೈವಿಧ್ಯಮ ಜಾನಪದ ಹಬ್ಬಗಳ ಹಾಡುಗಳನ್ನು ಹೇಳಿದರು. ಗುರು ಕಲ್ಮಠ ಸ್ವಾಗತಿಸಿದರು. ವಿಶ್ವೇಶ್ವರಿ ಹಿರೇಮಠ ಪ್ರಸ್ತಾವಿಕವಾಗಿ ಮಾತನಾಡಿದರು. ಸರಸ್ವತಿ ಪೂಜಾರ ನಿರೂಪಿಸಿದರು. ನಾಗಭೂಷಣ ಹಿರೇಮಠ ವಂದಿಸಿದರು.