ಜನಪದರ ಸಾಹಿತ್ಯವೇ ಜಾನಪದ ಸಾಹಿತ್ಯ

26 vikram 9
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಜನಪದರ ಸಾಹಿತ್ಯವೇ ಜಾನಪದ ಸಾಹಿತ್ಯ. ಅದು ಹಳ್ಳಿಯ ಜನರ ಜೀವನಾನುಭವದ ಅಭಿವ್ಯಕ್ತಿ ಎಂದು ಕರ್ನಾಟಕ ಕಾಲೇಜಿನ ಸಂಗೀತ ವಿಭಾಗದ ನಿವೃತ್ತ ಪ್ರಾಚಾರ್ಯ ಡಾ. ಮಲ್ಲಿಕಾರ್ಜುನ ತರ್ಲಘಟ್ಟ ಅಭಿಪ್ರಾಯಪಟ್ಟರು.
ನಗರದ ಕರ್ನಾಟಕ ವಿದ್ಯಾವರ್ಧಕ ಸಂಘವು ಜಯಶ್ರೀ ಗುತ್ತಲ ದತ್ತಿ ನಿಮಿತ್ತ ನಾಡೋಜ ಡಾ. ಪಾಟೀಲ ಪುಟ್ಟಪ್ಪ ಸಭಾಭವನದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಮೂಲ ಜಾನಪದ ಹಾಡುಗಳ ಸ್ಪರ್ಧೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಜಾನಪದ ಸಾಹಿತ್ಯದಲ್ಲಿ ಮಹಿಳೆಯರದೇ ಪ್ರಧಾನ ಪಾತ್ರ. ನಮ್ಮ ಜನಪದರು ಅಕ್ಷರ ಕಲಿಯದಿದ್ದರೂ ಜನರ ಬಾಯಿಂದ ಬಾಯಿಗೆ ಹರಿದು ಬಂದ ಮನಮೋಹಕ ಸಾಹಿತ್ಯವಾಗಿದೆ. ಕುಟ್ಟುವಾಗ, ಬೀಸುವಾಗ, ಮದುವೆ ಸಮಯದಲ್ಲಿ ಹಾಡು ಮನಸ್ಸಿನ ಬೇಸರ ಕಳೆದುಕೊಳ್ಳುವ ಸಾಹಿತ್ಯವಾಗಿದೆ. ಇಂದು ಮೂಲ ಜಾನಪದಕ್ಕೆ ಧಕ್ಕೆಯಾಗದಂತೆ ಜಾನಪದ ಹಾಡುಗಾರಿಕೆ ತನ್ನ ವೈಭವ ಉಳಿಸಿಕೊಳ್ಳಬೇಕಿದೆ ಎಂದರು.
ನಿರ್ಣಾಯಕರಾಗಿ ಡಾ. ಶ್ರೀಧರ ಕುಲಕರ್ಣಿ ಹಾಗೂ ಡಾ. ಪ್ರಕಾಶ ಮಲ್ಲಿಗವಾಡ ಆಗಮಿಸಿದ್ದರು. 30ಕ್ಕೂ ಹೆಚ್ಚು ವಿವಿಧ ಮಹಿಳಾ ಮಂಡಳದ ಸದಸ್ಯರು ಜಾನಪದ ಹಾಡುಗಳನ್ನು ಪ್ರಸ್ತುತಪಡಿಸಿದರು.
ದತ್ತಿ ದಾನಿ ಎಸ್​.ಬಿ. ಗುತ್ತಲ, ಇತರರು ಇದ್ದರು. ಸರೋಜಾ ರಾವ್​ ಸ್ವಾಗತಿಸಿದರು. ವೀರಣ್ಣ ಒಡ್ಡೀನ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿಶ್ವೇಶ್ವರಿ ಹಿರೇಮಠ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net