ಅ.೧೯ಕ್ಕೆ ಜಾನಪದ ದಸರಾ

Folk Dasara at 19 Octobar
Published on

ಮಡಿಕೇರಿ:

ಮಡಿಕೇರಿ ದಸರಾ ಸಾಂಸ್ಕೃತಿಕ ಸಮಿತಿ ಮತ್ತು ಕರ್ನಾಟಕ ಜಾನಪದ ಪರಿಷತ್ ಕೊಡಗು ಜಿಲ್ಲಾ ಘಟಕದ ವತಿಯಿಂದ ಅ. ೧೯ ರಂದು ನಗರದ ಗಾಂಧಿ ಮೈದಾನದಲ್ಲಿ ೩ ನೇ ವರ್ಷದ ಜಾನಪದ ದಸರಾ ಆಯೋಜಿಸಲಾಗಿದೆ ಎಂದು ಜಾನಪದ ಪರಿಷತ್ ಜಿಲ್ಲಾಧ್ಯಕ್ಷ ಬಿ.ಜಿ. ಅನಂತಶಯನ ಮತ್ತು ದಸರಾ ಸಾಂಸ್ಕೃತಿಕ ಸಮಿತಿ ಅಧ್ಯಕ್ಷ ಅನಿಲ್ ಎಚ್.ಟಿ. ತಿಳಿಸಿದ್ದಾರೆ. ಅ.೧೯ ರಂದು ಗುರುವಾರ ಬೆಳಗ್ಗೆ ೧೦ ಗಂಟೆಗೆ ಗಾಂಧಿ ಮಂಟಪದಿಂದ ಕಲಾಸಂಭ್ರಮ ವೇದಿಕೆಯವರೆಗೆ ಕೊಡಗಿನ ವಿವಿಧ ಕಲಾತಂಡಗಳಿಂದ ಕಲಾಜಾಥಾ ಆಯೋಜಿಸಲಾಗಿದೆ. ಜಾನಪದ ದಸರಾ ಅಂಗವಾಗಿ ಜಿಲ್ಲೆಯ ಜಾನಪದ ಕಲಾವಿದರು, ಕಲಾತಂಡಗಳಿಗೆ ಬೆಳಗ್ಗೆ ಕಲಾಸಂಭ್ರಮ ವೇದಿಕೆಯಲ್ಲಿ ವಿವಿಧ ಜಾನಪದ ಕಾರ್ಯಕ್ರಮ ನೀಡಲು ಅರ್ಜಿ ಆಹ್ವಾನಿಸಲಾಗಿದೆ.

ಪ್ರೌಡಶಾಲಾ ವಿದ್ಯಾರ್ಥಿಗಳಿಗೆ ಜಾನಪದ ಧಿರಿಸು ತೊಡುವ ಸ್ಪರ್ಧೆ ಆಯೋಜಿಸಲಾಗಿದೆ. ಜಾನಪದ ದಸರಾ ಅಂಗವಾಗಿ ಒಗಟು ಸ್ಪರ್ಧೆ, ಜಾನಪದ ಪರಿಕರಗಳ ಪ್ರದರ್ಶನವನ್ನೂ ಆಯೋಜಿಸಲಾಗಿದೆ.

ಬೆಳಗ್ಗೆ ೧೧ ಗಂಟೆಯಿಂದ ಮಧ್ಯಾಹ್ನ ೨ ಗಂಟೆಯವರೆಗೆ ಜಾನಪದ ವೈವಿಧ್ಯತೆಗಳ ಮೂಲಕ ಜಾನಪದ ದಸರಾ ಆಯೋಜಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕಾರ್ಯಕ್ರಮ ನೀಡಲು ಇಚ್ಚಿಸುವ ಕಲಾವಿದರು ಮತ್ತು ಜಾನಪದ ಉಡುಗೆ ಸ್ಪರ್ಧೆಗೆ ವಿದ್ಯಾರ್ಥಿಗಳು ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆಗಳು ಕೆ.ಜಯಲಕ್ಷ್ಮಿ ೯೬೬೩೧೧೯೬೭೦ (ಮಡಿಕೇರಿ ವ್ಯಾಪ್ತಿ) , ರುಬಿನಾ ೯೦೭೧೧೯೪೦ ೮೭ (ಸೋಮವಾರಪೇಟೆ ವ್ಯಾಪ್ತಿ) , ರೆಜಿತಾ ಕಾರ್ಯಪ್ಪ - ೯೪೮೧೭೭೧೮೫೧ (ವಿರಾಜಪೇಟೆ ಮತ್ತು ಗೋಣಿಕೊಪ್ಪ ವ್ಯಾಪ್ತಿ) , ಸುಜಲಾದೇವಿ ೯೧೪೧೬೯೨೫೫೬ (ಶನಿವಾರಸಂತೆ ವ್ಯಾಪ್ತಿ) , ಚಂದ್ರಮೋಹನ್ ೯೪೪೮೨೭೪೪೮೨. (ಕುಶಾಲನಗರ ವ್ಯಾಪ್ತಿ) ಜಾನಪದ ದಸರಾಕ್ಕೆ ಅರ್ಜಿ ಸಲ್ಲಿಸಲು ಕೊನೇ ದಿನಾಂಕ ಅ. ೧೨

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net