

ಹುಬ್ಬಳ್ಳಿ: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಶಿವಮೊಗ್ಗದಲ್ಲಿ ಮೇ 18ರಿಂದ 20ರ ವರೆಗೆ ಆಯೋಜಿಸಿದ್ದ ರಾಜ್ಯ ಮಟ್ಟದ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಧಾರವಾಡ ಜಿಲ್ಲೆಯ ಜಾನಪದ ನೃತ್ಯ ತಂಡ ಅದ್ಭುತ ಸಾಧನೆ ಮಾಡಿದೆ.
ಧಾರವಾಡ ಜಿಲ್ಲಾ ಜಾನಪದ ನೃತ್ಯತಂಡವು ದ್ವಿತೀಯ ಬಹುಮಾನ ಪಡೆಯುವ ಮೂಲಕ ಜಿಲ್ಲೆಗೆ ಕೀರ್ತಿ ತಂದಿದೆ.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ ರಾಜ್ ಇಲಾಖೆ, ಶಿಕ್ಷಣ ಇಲಾಖೆಯ ಸಹಯೋಗದೊಂದಿಗೆ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಶಶಿರೇಖಾ ಚಕ್ರಸಾಲಿ ಹಾಗೂ ರಾಜ್ಯ ಪ್ರಶಸ್ತಿ ಪುರಸ್ಕೃತ ಕ್ರಿಯಾಶೀಲ ಶಿಕ್ಷಕ ಮಂಜುನಾಥ ಮಂಗೂಣಿ ಅವರ ನೇತೃತ್ವದಲ್ಲಿ ಪಂಚಾಯತ್ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳಾದ ಲಲಿತಾ ವಡ್ಡರ, ಪೂರ್ಣಿಮಾ ವಿ., ಶೈಲಾ ನೀಲಾಗರ, ರಾಜೇಶ್ವರಿ ಮುದ್ದನಗೌಡರ, ಮಹಾಲಕ್ಷ್ಮೀ ಹಿರೇಗೌಡರ, ಶಿಕ್ಷಕ ಶಿವಾನಂದ ಸೋಮಣ್ಣವರ ಅವರು ಜಾನಪದ ನೃತ್ಯ ಪ್ರದರ್ಶನ ನೀಡಿದ್ದರು.
ಧಾರವಾಡ ಜಿಲ್ಲಾ ನೌಕರರ ಸಂಘದ ಜಿಲ್ಲಾಧ್ಯಕ್ಷ ಎಸ್.ಎಫ್. ಸಿದ್ದನಗೌಡರ ಹಾಗೂ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿ ಸದಸ್ಯರು ಮತ್ತು ತಾಲೂಕು ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ನೌಕರರು ವಿಜೇತ ಸಿಬ್ಬಂದಿಯ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಜಯ ಗಳಿಸಲು ನಮ್ಮ ತಂಡವು ಅತ್ಯಂತ ಶ್ರದ್ಧೆಯಿಂದ ನೃತ್ಯ ಅಭ್ಯಾಸ ಮಾಡಿ ಪ್ರದರ್ಶನ ನೀಡಿತ್ತು. ಅದರಂತೆ ಸಾಧನೆಯಾಗಿದೆ. ಇದು ತಂಡದ ಎಲ್ಲರಿಗೂ ಖುಷಿ ನೀಡಿದೆ ಎಂದು ಕಿರೇಸೂರ ಪಿಡಿಒ ಪೂರ್ಣಿಮಾ ವಿ. ಅವರು ಹೇಳಿದ್ದಾರೆ.