

ಬ್ರಹ್ಮಾವರ: ಹಳೆಗನ್ನಡದಲ್ಲಿ ರಾವಾಯಣ ಮಹಾಭಾರತ ಸೇರಿದಂತೆ ಜನಪದ ಮತ್ತು ಜನಜೀವನ ಸಂಸ್ಕೃತಿ ಅಡಗಿದೆ ಎಂದು ಕೋಟ ಪಡುಕೆರೆ ಸರ್ಕಾರಿ ಪ್ರಥಮದರ್ಜೆ ಕಾಲೇಜು ಕನ್ನಡ ಪ್ರಾಧ್ಯಾಪಕ ಡಾ.ರಮೇಶ್ ಆಚಾರ್ ಹೇಳಿದರು. ಕರ್ನಾಟಕ ಸಾಹಿತ್ಯ ಅಕಾಡೆಮಿ ಬೆಂಗಳೂರು, ಚಕೋರ ಸಾಹಿತ್ಯ ವಿಚಾರ ವೇದಿಕೆ ಉಡುಪಿ, ಬ್ರಹ್ಮಾವರ ಎಸ್‌ಎಂಎಸ್ ಕಾಲೇಜು ಸಹಭಾಗಿತ್ವದಲ್ಲಿ ಜರುಗಿದ ಕಬ್ಬದುಳುಮೆ ಪ್ರಾಚೀನ ಕನ್ನಡ ಕಾವ್ಯದೋದು ಕಮ್ಮಟ ಕಾರ್ಯಕ್ರಮ ಉದ್ಘಾಟಿಸಿ ವಾತನಾಡಿದರು. ಕಾಲೇಜು ಪ್ರಾಂಶುಪಾಲ ರಾಬರ್ಟ್ ರೋಡ್ರಿಗಸ್ ಅಧ್ಯಕ್ಷತೆ ವಹಿಸಿದ್ದರು. ಕನ್ನಡ ಸಾಹಿತ್ಯ ಅಕಾಡಮಿ ಸದಸ್ಯ ಡಾ.ಜಯಪ್ರಕಾಶ್ ಶೆಟ್ಟಿ, ಚಕೋರ ಜಿಲ್ಲಾ ಸಂಚಾಲಕಿ ಶಾಲಿನಿ ಯು.ಬಿ. ಉಪಸ್ಥಿತರಿದ್ದರು. ಕಾಲೇಜಿನ ಬಿಕಾಂ ವಿದ್ಯಾರ್ಥಿನಿ ಚಂದನಾ ಸಿ.ಎಂ. ಭಾವಗೀತೆ ಹಾಡಿದರು. ಕಾಲೇಜಿನ ಕನ್ನಡ ವಿಭಾಗ ಮುಖ್ಯಸ್ಥೆ ಡಾ.ವಿದ್ಯಾಲತಾ ಸ್ವಾಗತಿಸಿದರು. ಚಕೋರ ಜಿಲ್ಲಾ ಸಂಚಾಲಕ ರಾವಾಂಜಿ ಕಾರ್ಯಕ್ರಮ ನಿರೂಪಿಸಿದರು. ಕಾಲೇಜು ಕನ್ನಡ ಉಪನ್ಯಾಸಕ ರಮೇಶ್ ದೇಸಾಯಿ ವಂದಿಸಿದರು.