ಮಾಯವಾಗುತ್ತಿವೆ ಜನಪದ ಕಲೆಗಳು

09 RON 1
Published on

ರೋಣ: ಕಾಲಿಗೆ ಗೆಜ್ಜೆ, ತಾಳಕ್ಕೆ ತಕ್ಕಂತೆ ಹೆಜ್ಜೆ. ರಿವಾಯಿತಿ ಪದಗಳು, ಫಕೀರ, ಹುಲಿವೇಷದಂತಹ ಹಲವು ಜನಪದ ಕಲೆಗಳು ಮೊಹರಂ ಹಬ್ಬದಲ್ಲಿ ಕಣ್ಮರೆಯಾಗುತ್ತಿವೆ ಎಂದು ಕೆಪಿಸಿಸಿ ಸದಸ್ಯ ಸಂಜಯ್ ದೊಡ್ಡಮನಿ ಕಳವಳ ವ್ಯಕ್ತಪಡಿಸಿದರು.

ತಾಲೂಕಿನ ಮುಗಳಿ ಗ್ರಾಮದಲ್ಲಿ ಹಸೇನ ಹುಸೇನ. ರಿವಾಯತ್ ಮೇಳ ಹಾಗೂ ರಿವಾಯತ್ ಪದಗಳ ಸ್ಪರ್ಧೆ ಉದ್ಘಾಟಿಸಿ ಮಾತನಾಡಿ, ದಶಕಗಳ ಹಿಂದೆ ಮೊಹರಂ ಬಂತೆಂದರೆ 15- 20 ದಿನಗಳ ಮೊದಲೇ ಓಣಿಗೊಂದು ಹೆಜ್ಜೆ ಮೇಳಗಳು ರಾತ್ರಿಯಿಡೀ ಕಾಲಿಗೆ ಗೆಜ್ಜೆ ಕಟ್ಟಿಕೊಂಡು ಚರ್ಮದ ಹಲಗೆಯ ತಾಳಕ್ಕೆ ತಕ್ಕಂತೆ ಹೆಜ್ಜೆ ಹಾಕುತ್ತ ತಯಾರಿ ನಡೆಸುವ ಮೂಲಕ ರಿವಾಯತ್ ಪದಗಳ ತಯಾರಿ ನಡೆಯುತ್ತಿತ್ತು. ಆದರೆ, ಯುವಜನತೆ ಆಧುನಿಕತೆಯ ಪ್ರಭಾವಕ್ಕೆ ಒಳಗಾಗಿ ಇಂತಹ ಚರಿತ್ರೆ ಸಾರುವ ಕಲೆಗಳಿಂದ ದೂರ ಉಳಿಯುತ್ತಿದ್ದಾರೆ ಎಂದರು. ರಾಮಪ್ಪ ತಳ್ಳಿಹಾಳ, ರಾಮಪ್ಪ ವಾಲೀಕಾರ, ಕರಿಯಪ್ಪ ತಳವಾರ, ಕಳಕಮಲ್ಲಪ್ಪ ಉಪ್ಪಾರ, ರಾಜಪ್ಪ ಐಹೊಳಿ, ದೇವಪ್ಪ ಯರಗೇರ, ಈರಣ್ಣ ಐಹೊಳಿ, ಮತ್ತಣ್ಣ ಪತ್ತಾರ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net