

ಹೆಬ್ರಿ: ಜನಪದ ಕಲೆಗಳನ್ನು ಮುಂದಿನ ತಲೆಮಾರಿಗೆ ಹಸ್ತಾಂತರಿಸುವಲ್ಲಿ ಇಂದಿನ ಯುವಜನರ ಕಾರ್ಯ ಮಹತ್ವದ್ದಾಗಿದೆ ಎಂದು ದೈವ ನರ್ತಕ ನರಸಿಂಹ ಪರವ ಹೇಳಿದರು.
ಹೆಬ್ರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಜಾನಪದ ಹಬ್ಬ ಆಚರಣೆ ಕಾರ್ಯಕ್ರಮ ಉದ್ಘಾಟಿಸಿ ಹಿಂದಿನ ಜನಪದ ಆಚರಣೆ ಮತ್ತು ಇಂದಿನ ವೈಜ್ಞಾನಿಕ ಮನೋಭಾವ-ಜಿಜ್ಞಾಸೆಗಳು ಎಂಬ ವಿಷಯದ ಬಗ್ಗೆ ಮಾತನಾಡಿದರು.
ಪ್ರಾಂಶುಪಾಲ ಡಾ.ವಿದ್ಯಾಧರ ಹೆಗ್ಡೆ ಎಸ್. ಅಧ್ಯಕ್ಷತೆ ವಹಿಸಿದ್ದರು. ರಂಗಕರ್ಮಿ ಸುಮನಸಾ ಕೊಡವೂರು ಕಲಾ ತಂಡದ ಕಲಾವಿದ ದಿವಾಕರ ಕಟೀಲು ಡೋಲು ಭಾರಿಸಿ ಜನಪದ ವಸ್ತುಪ್ರದರ್ಶನ ಹಾಗೂ ಕಲಾಪ್ರದರ್ಶನಕ್ಕೆ ಚಾಲನೆ ನೀಡಿದರು. ಜನಪದ ವಸ್ತು ಪ್ರದರ್ಶನ, ನೃತ್ಯ ಪ್ರದರ್ಶನ, ಗೀತ ಗಾಯನ, ಆಹಾರ ಮೇಳ, ಜನಪದ ಉಡುಗೆ -ತೊಡುಗೆ ಪ್ರದರ್ಶನ ಹಾಗೂ ಜನಪದ ಆಟೋಟ ಸ್ಪರ್ಧೆ ನಡೆಯಿತು. ಚೈತ್ರಾ ಸ್ವಾಗತಿಸಿ, ಭೂಮಿಕಾ ವಂದಿಸಿದರು. ಕೃತಿಕ್ ಅತಿಥಿಗಳನ್ನು ಪರಿಚಯಿಸಿದರು. ಸ್ನೇಹಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
ಜಾನಪದ ಕಲೆಗಳು ನಮ್ಮ ಸಂಸ್ಕೃತಿ ಮೂಲಾಧಾರ. ಅವುಗಳ ವಿನಾಶಕ್ಕೆ ನಾವು ಎಡೆ ಮಾಡಿಕೊಡಬಾರದು. ತುಳುನಾಡಿನ ಪ್ರಸಿದ್ಧ ಜಾನಪದ ಕ್ರೀಡೆ ಹಾಗೂ ಕಲೆಗಳ ಮಹತ್ವ ವಿದ್ಯಾರ್ಥಿಗಳು ಅರಿಯಬೇಕು. -ಡಾ.ವಿದ್ಯಾಧರ ಹೆಗ್ಡೆ ಎಸ್. ಪ್ರಾಂಶುಪಾಲ https://www.vijayavani.net/karkala-taluk-in-fear-of-artificial-flooding https://www.vijayavani.net/installation-of-god-in-the-balalaya