ಜಾನಪದ ಕಲೆಗಿದೆ ವಿಶ್ವ ಮಾನ್ಯತೆ, ಕೆಂಪಮ್ಮ ದೇವಾಲಯದ ಪ್ರಧಾನ ಅರ್ಚಕ ವೆಂಕಟರಮಣಯ್ಯ ಅಭಿಮತ

14 Nela Ph 01 Udgatane
Published on

ನೆಲಮಂಗಲ: ಗ್ರಾಮೀಣ ಜನರಿಂದ ಹುಟ್ಟಿದ ಜಾನಪದ ಕಲೆ ವಿಶ್ವಮಟ್ಟದಲ್ಲಿ ವಿಶೇಷ ಸ್ಥಾನಮಾನ ಪಡೆದಿದೆ ಎಂದು ಕೆಂಪಮ್ಮ ದೇವಾಲಯದ ಪ್ರಧಾನ ಅರ್ಚಕ ವೆಂಕಟರಮಣಯ್ಯ ತಿಳಿಸಿದರು.

ನಗರದ ಕೆರೆಏರಿ ಹಿಂಭಾಗದ ಶ್ರೀ ಕೆಂಪಮ್ಮದೇವಿ ಸಮುದಾಯ ಭವನದಲ್ಲಿ ರಾಜೀವ್‌ಗಾಂಧಿ ಯುವಕರ ಸಾಂಸ್ಕೃತಿಕ ಕಲಾ ಸಂಘ ಹಾಗೂ ಕನ್ನಡ ಸಂಸ್ಕೃತಿ ಇಲಾಖೆಯಿಂದ ಸೋಮವಾರ ಆಯೋಜಿಸಿದ್ದ ಸಂಸ್ಕೃತಿ ಸಂಭ್ರಮ ಕಾರ್ಯಕ್ರಮದಲ್ಲಿ ಮಾತನಾಡಿದರು.

ಆಧುನಿಕತೆ ಹೆಚ್ಚಾದಂತೆ ಜಾನಪದ ಕಲೆಗಳು, ಗ್ರಾಮೀಣ ವೈಭವ ಕಡಿಮೆಯಾಗುತ್ತಿದೆ. ಗ್ರಾಮೀಣ ಪ್ರದೇಶದ ಜಾತ್ರೆಗಳಿಗೆ ನಗರ ಪ್ರದೇಶದಿಂದ ಜನರು ಆಗಮಿಸಿ ಸಂಸ್ಕೃತಿಯ ರುಚಿ ಸವಿಯುತ್ತಿದ್ದರು. ಆದರೆ ಅನೇಕ ಕಡೆಗಳಲ್ಲಿ ಈ ಸಂಪ್ರದಾಯ ಮರೆಯಾಗುತ್ತಿದೆ. ಇಂತಹ ಸಂದರ್ಭದಲ್ಲಿ ಗ್ರಾಮಗಳಲ್ಲಿ ಜಾನಪದ ಕಲೆಗಳನ್ನು ಮುಂದಿನ ಪೀಳಿಗೆಯ ಜನರಿಗೆ ಕೊಡುಗೆಯಾಗಿ ನೀಡುತ್ತಿರುವ ಕಲಾವಿದರ ಕಾರ್ಯ ಶ್ಲಾಘನೀಯ ಎಂದರು.

ಕೋಡಿರಂಗನಾಥ ಸ್ವಾಮಿ ಕಲಾ ಸಂಘದ ಅಧ್ಯಕ್ಷ ರಾಜಣ್ಣ ಮಾತನಾಡಿ, ಮರೆಯುತ್ತಿರುವ ಕಲೆಗಳನ್ನು ಪರಿಚಯಿಸುವ ನಿಟ್ಟಿನಲ್ಲಿ ಸರ್ಕಾರೇತರ ಸಂಘ-ಸಂಸ್ಥೆಗಳ ಕಾರ್ಯ ಮಹತ್ವವಾದದ್ದು. ಜಾನಪದ ಕಲೆಗಳ ಉಳಿವಿಗಾಗಿ ಸಾಹಿತಿಗಳು, ಕವಿಗಳು ಸೇರಿ ಲಕ್ಷಾಂತರ ಮಂದಿ ಕಲಾವಿದರು ನಿತ್ಯ ಶ್ರಮಿಸುತ್ತಿದ್ದಾರೆ ಎಂದರು.

ದೇಶದಲ್ಲಿ ಕೊರನಾ ಮಹಾಮಾರಿ ಬಡವರು, ಕೂಲಿಕಾರ್ಮಿಕರು ಸೇರಿ ಕಲಾವಿದರು ಸಂಕಷ್ಟಕ್ಕೆ ಒಳಗಾಗಿದ್ದು ಸರ್ಕಾರ ಕಲಾವಿದರ ಕಷ್ಟಕ್ಕೆ ಸ್ಪಂದಿಸದಿರುವುದು ಬೇಸರದ ಸಂಗತಿ ಎಂದರು.

ಸಾಂಸ್ಕೃತಿಕ ಕಲಾ ಸಂಘದಿಂದ ಸಂಸ್ಕೃತಿ ಸಂಭ್ರಮ ಕಾರ್ಯಕ್ರಮದ ಪ್ರಯುಕ್ತ ಬೆಂಗಳೂರಿನ ವೆಂಕಟೇಶ್ ಮತ್ತು ತಂಡವರಿಂದ ಸಾಮಾಜಿಕ ನಾಟಕ ಜಾದು ಹಾಗೂ ಭಾರತಿ ಮತ್ತು ತಂಡದವರಿಂದ ಸಮೂಹ ನೃತ್ಯ ಆಯೋಜಿಸಲಾಗಿತ್ತು ಎಂದು ಸಂಘದ ಅಧ್ಯಕ್ಷ ಗೋವಿಂದರಾಜು ತಿಳಿಸಿದರು.

ಉದಯ ಜಾನಪದ ಕಾಲಸಂಘದ ಅಧ್ಯಕ್ಷ ಎಚ್.ಕೃಷ್ಣಪ್ಪ, ರಾಜೀವ್‌ಗಾಂಧಿ ಯುವಕರ ಸಾಂಸ್ಕೃತಿಕ ಕಲಾ ಸಂಘದ ಕಾರ್ಯದರ್ಶಿ ಭಾರತಿ ಮತ್ತಿತರರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net