

ಕೊಪ್ಪ: ಜಾನಪದ ಕಲೆ ನಮ್ಮ ಜೀವನದ ಭಾಗ. ಆಧುನಿಕತೆಯಿಂದ ಜಾನಪದ ಮರೆಯಾಗುತ್ತಿದೆ ಎಂದು ಕರ್ನಾಟಕ ಜಾನಪದ ಪರಿಷತ್ ತಾಲೂಕು ಘಟಕದ ಅಧ್ಯಕ್ಷ ಎಚ್.ಎಲ್.ದೀಪಕ್ ಹೇಳಿದರು.
ತಾಲೂಕು ಕನ್ನಡ ಜಾನಪದ ಪರಿಷತ್, ಮಹಿಳಾ ಘಟಕದಿಂದ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಬುಧವಾರ ಪ್ರಾಥಮಿಕ ಶಾಲಾ ಮಕ್ಕಳಿಗೆ ಏರ್ಪಡಿಸಿದ್ದ ಛದ್ಮವೇಷ ಹಾಗೂ ಭಾರತೀಯ ಸಾಂಪ್ರದಾಯಿಕ ಉಡುಪುಗಳ ಸ್ಪರ್ಧೆಯಲ್ಲಿ ಮಾತನಾಡಿದರು.
ಮಕ್ಕಳಿಗೆ ಜಾನಪದ ಕಲೆ ಮಾಹಿತಿಯನ್ನು ನಾವು ನೀಡಬೇಕು. ಜಾನಪದ ಚಟುವಟಿಕೆಯಲ್ಲಿ ತೊಡಗಿಸಬೇಕು. ಹಾಗಾದರೆ ಮಾತ್ರ ಮುಂದಿನ ತಲೆಮಾರಿಗೆ ಜಾನಪದ ಕಲೆ ತಲುಪಿಸಲು ಸಾಧ್ಯ ಎಂದರು.
ಎಲ್‌ಕೆಜಿಯಿಂದ 7ನೇ ತರಗತಿಯ 100 ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು. ವಿವಿಧ ವೇಷಭೂಷಣಗಳೊಂದಿಗೆ ವಿದ್ಯಾರ್ಥಿಗಳು ಗಮನ ಸೆಳೆದರು. ಎಸ್‌ಡಿಎಂಸಿ ಅಧ್ಯಕ್ಷ ಕೆ.ಎನ್.ಶಿವಾನಂದ, ಜಿಲ್ಲಾ ಕನ್ನಡ ಜಾನಪದ ಪರಿಷತ್ ಅಧ್ಯಕ್ಷ ಓಣಿತೋಟ ರತ್ನಾಕರ್, ಶ್ರುತಿ ಅಶೋಕ್, ಶ್ರುತಿ ಮಿತ್ರ, ಯಶೋದಾ, ಅಶೋಕ್ ನಾರ್ವೆ, ಶ್ರೀನಿಧಿ ದಿನೇಶ್, ಸುಮಿತ್ರಾ ನಾರಾಯಣ, ಅರ್ಚನಾ ಜೀನೇಶ್, ರುದ್ರೇಶ್ ಇದ್ದರು.