ಜಾನಪದ ಕಲೆ ನಮ್ಮ ಸಂಸ್ಕೃತಿಯ ಪ್ರತೀಕ

22M.D.R.11
Published on

ಮದ್ದೂರು : ಜಾನಪದ ಕಲೆಗಳು ನಮ್ಮ ಸಂಸ್ಕೃತಿಕ ಪ್ರತೀಕವಾಗಿದ್ದು, ಇವುಗಳನ್ನು ಉಳಿಸಲು ಪ್ರತಿಯೊಬ್ಬರು ಮುಂದಾಗಬೇಕೆಂದು ಗ್ರಾಮ ಪಂಚಾಯಿತಿ ಅಧ್ಯಕ್ಷೆ ರಾಕಾಪ್ರಸಾದ್ ತಿಳಿಸಿದರು.

ತಾಲೂಕಿನ ಬೆಸಗರಹಳ್ಳಿಯಲ್ಲಿ ಏಕದಂತ ನಾಟ್ಯಾಲಯ ವತಿಯಿಂದ ಇತ್ತೀಚೆಗೆ ಹಮ್ಮಿಕೊಂಡಿದ್ದ ದಸರಾ ಕಲೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಪ್ರಸ್ತುತ ಯುವ ಜನಾಂಗ ಜಾನಪದ ಕಲೆಗಳನ್ನು ಉಳಿಸಲು ಮುಂದಾಗಬೇಕು. ಇವುಗಳ ಮಹತ್ವವನ್ನು ತಿಳಿದುಕೊಳ್ಳಬೇಕು. ಜಾನಪದ ಕಲೆ ನಮ್ಮ ಜೀವನದ ಅವಿಭಾಗ್ಯ ಅಂಗವಾಗಬೇಕು ಎಂಂದರು.

ಕಾರ್ಯಕ್ರಮದಲ್ಲಿ ಕಲಾವಿದರು ನಡೆಸಿಕೊಟ್ಟ ಜಾನಪದ ನೃತ್ಯ, ಭರತನಾಟ್ಯ, ವೀರಗಾಸೆ, ದೇವರ ಕುಣಿತ, ಡೊಳ್ಳು ಕುಣಿತ ಹಾಗೂ ಇನ್ನಿತರ ಕಲಾಪ್ರಕಾರಗಳು ನೋಡುಗರ ಗಮನ ಸೆಳೆಯಿತು.

ಸೊಸೈಟಿ ಅಧ್ಯಕ್ಷ ಲಿಂಗರಾಜು, ಪೊಲೀಸ್ ಇನ್‌ಸ್ಪೆಕ್ಟರ್ ಸತೀಶ್, ಡಾ.ಕಿರಣ್ ಕುಮಾರ್, ಮುಖಂಡರಾದ ಸೀತಾರಾಮು, ತಾಯಮ್ಮ, ರಾಮಕೃಷ್ಣ, ವೆಂಕಟೇಶ್, ಯದುಶೈಲ ಸಂಪತ್, ಜಿ.ಎಂ.ಸತ್ಯಾ, ಚೈತ್ರಾವತಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net