

ಮೈಸೂರು: ಆಧುನಿಕ ಕಾಲದಲ್ಲಿ ಜಾನಪದ ಕಲೆ ನಶಿಸುವ ಹಂತಕ್ಕೆ ತಲುಪಿದೆ ಎಂದು ಕಸಾಪ ಜಿಲ್ಲಾಧ್ಯಕ್ಷ ಮಡ್ಡೀಕೆರೆ ಗೋಪಾಲ್ ಕಳವಳ ವ್ಯಕ್ತಪಡಿಸಿದರು
.
ಜಾನಪದ ಕಲಾವಿದರ ಒಕ್ಕೂಟದ ವತಿಯಿಂದ ಪುರಭವನದಲ್ಲಿ ಆಯೋಜಿಸಿದ್ದ ರಾಜ್ಯಮಟ್ಟದ ಜಾನಪದ ಸೇವಾರತ್ನ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಜಾನಪದ ಕಲೆಯನ್ನು ಉಳಿಸಿ, ಬೆಳೆಸುವ ಅನಿವಾರ್ಯತೆ ಇದೆ. ಈ ನಿಟ್ಟಿನಲ್ಲಿ ಪ್ರಯತ್ನಗಳು ನಡೆಯಬೇಕು. ಜಾನಪದ ಕಲೆಗೆ ತನ್ನದೇ ಆದ ಮಹತ್ವವಿದೆ. ಇದು ಜನಸಾಮಾನ್ಯರ ಕಲೆಯಾಗಿದ್ದು, ಸಮಾಜಕ್ಕೆ ಸಂದೇಶ ನೀಡುವ ಕಲೆಯಾಗಿದೆ. ಜನಸಮೂಹದ ಸಂವಹನದ ಮೂಲಕ ಕಲೆ ಬೆಳೆದು ಬಂದಿದೆ ಎಂದರು.
ಹಿರಿಯ ಕಲಾವಿದರಾದ ಎಚ್.ಸಿ.ಮಹೇಶ್‌ಕುಮಾರ್, ಬಸವಣ್ಣ, ಮಹದೇವಸ್ವಾಮಿ, ಯು.ಎನ್.ಕುಲದೀಪ್, ಕೆ.ರವಿ, ಅಮಿತ್ ಕುಮಾರ್, ಅರುಣ್ ಕುಮಾರ್ ನಾಯಕ್, ಜಿ.ಡಿ.ಪುನೀತ್ ಕುಮಾರ್, ಚಿನ್ನಾಪುರ ಸಿ.ಎ.ದೇವರಾಜ, ಎನ್.ನಾರಾಯಣಸ್ವಾಮಿ, ಶ್ರೀನಿವಾಸ್, ನಾರಾಯಣಪ್ಪ, ನಳಿನಮ್ಮ, ಪಿ.ಜಯಣ್ಣ, ಎನ್.ನಾರಾಯಣಸ್ವಾಮಿ, ಅನಸೂಯಮ್ಮ, ಎಸ್.ಎನ್.ಶ್ರೀನಿವಾಸ್, ಮುನಿವೆಂಕಟಪ್ಪ, ರತ್ನಮ್ಮ, ಶ್ರೀನಿವಾಸ್, ನಾರಾಯಣಮ್ಮ, ಎಂ.ನಾರಾಯಣಸ್ವಾಮಿ, ಎಸ್.ಎನ್.ಕೆಂಪರೆಡ್ಡಿ ಅವರಿಗೆ ಜಾನಪದ ಸೇವಾ ರತ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಕರ್ನಾಟಕ ಜಾನಪದ ಪರಿಷತ್ ಅಧ್ಯಕ್ಷ ಡಾ.ಎಚ್.ಆರ್.ತಿಮ್ಮೇಗೌಡ, ಜಾನಪದ ಕಲಾವಿದರ ಒಕ್ಕೂಟದ ಅಧ್ಯಕ್ಷ ಆರ್.ಕೆ.ಸ್ವಾಮಿ, ಸಾಹಿತಿ ಕಟ್ಟೆ ಕೃಷ್ಣಸ್ವಾಮಿ ಮತ್ತಿತರರಿದ್ದರು.