

ಹಗರಿಬೊಮ್ಮನಹಳ್ಳಿ: ಜಾನುವಾರುಗಳಿಗೆ ಮೇವು ಕೊರತೆಯಾಗದಂತೆ ಪಶು ಇಲಾಖೆ ಹಾಗೂ ತಾಲೂಕಾಡಳಿತದಿಂದ ಕ್ರಮ ವಹಿಸಲಾಗಿದೆ ಎಂದು ತಹಸೀಲ್ದಾರ್ ಚಂದ್ರಶೇಖರ್ ಶಂಬಣ್ಣ ಗಾಳಿ ಹೇಳಿದರು.
ಪಟ್ಟಣದ ಹಳೇಊರಿನ ಪಶು ಇಲಾಖೆ ಆಸ್ಪತ್ರೆ ಆವರಣದಲ್ಲಿ ಮೇವು ಬ್ಯಾಂಕ್ ಉದ್ಘಾಟಿಸಿ ಮಾತನಾಡಿದರು. ಪ್ರತಿ ಕೆಜಿಗೆ 2 ರೂ.ರಂತೆ ದಿನಕ್ಕೆ 5 ಕೆಜಿ ಮೇವು 15 ದಿನಗಳವರೆಗೆ ವಿತರಿಸಲಾಗುವುದು. ಮುಂದಿನ ನಾಲ್ಕು ವಾರಗಳಿಗಾಗುವಷ್ಟು ಮೇವು ಸಂಗ್ರಹವಿದೆ. ಸರ್ಕಾರದ ಸುತ್ತೋಲೆಯ ಪ್ರಕಾಶ 26 ಟನ್ ಮೇವು ಖರೀದಿ ಮಾಡಲಾಗಿದೆ.
1 ಟನ್‌ಗೆ 5980 ರೂ.ಗಳಿಗೆ ಮೇವು ಖರೀದಿಸಲಾಗಿದೆ. ಕೇವಲ ಜಾನುವಾರುಗಳು ಇದ್ದವರಿಗೆ ಮಾತ್ರ ಮೊದಲ ಆದ್ಯತೆ ನೀಡಿ ಮೇವು ವಿತರಿಸಲಾಗುವುದು. ಈಗಾಗಲೇ ಜಮೀನು ಇದ್ದವರು ಮೇವು ಸಂಗ್ರಹಿಸಿದ್ದಾರೆ. ಹೋಬಳಿವಾರು ಬೇಡಿಕೆ ಅನುಸಾರವಾಗಿ ಖರೀದಿಸಲಾಗುವುದು ಎಂದರು. ಪಶು ಇಲಾಖೆ ಎಡಿ ಡಾ.ಸೂರಪ್ಪ ಇದ್ದರು.