ಮೇವಿನ ಬಣವೆಗೆ ಬೆಂಕಿ ತಗುಲಿ ಹಾನಿ

Crop on Fire
Published on

ಹಿರೇಕೆರೂರ: ಪಟ್ಟಣದ ದುರ್ಗಾನಗರದಲ್ಲಿ ಮನೆಯ ಹಿಂಭಾಗದಲ್ಲಿ ಇರಿಸಿದ್ದ ಮೇವಿನ ಬಣವೆಗೆ ಬೆಂಕಿ ತಗುಲಿ ಬೆಲೆ ಬಾಳುವ ಬಣವೆ ಸಂಪೂರ್ಣವಾಗಿ ಸುಟ್ಟು ಕರಕಲಾದ ಘಟನೆ ಶನಿವಾರ ಮಧ್ಯರಾತ್ರಿ 12 ಗಂಟೆಯ ಸುಮಾರಿಗೆ ನಡೆದಿದೆ.

ಪಟ್ಟಣದ ಶಶಿಧರ ಚಂದ್ರಗೌಡ ಪಾಟೀಲ ಎಂಬುವವರ ಮೇವಿನ ಬಣವೆ ಇದಾಗಿದ್ದು, ಮನೆಯ ಹಿತ್ತಲಿನಲ್ಲಿರಿಸಿದ್ದ 5 ಎಕರೆಯ ಮೇವಿನ ಬಣವೆಗೆ ಶನಿವಾರ ಮಧ್ಯರಾತ್ರಿ 12 ಗಂಟೆಗೆ ಬೆಂಕಿ ತಗುಲಿದೆ. ಸ್ಥಳೀಯರ ನೆರವಿನಿಂದ ಬೆಂಕಿ ನಂದಿಸಲು ಹರಸಾಹಸಪಟ್ಟರೂ ಸಾಧ್ಯವಾಗಿಲ್ಲ. ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳದವರು ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾದರು.

ಈ ಸಂಬಂಧ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net