ಅಪೂರ್ವ ಸ್ನೇಹ ಬಳಗದಿಂದ ಗೋವುಗಳಿಗೆ ಮೇವು

18
Published on

ಮೈಸೂರು: ಸ್ವಾಮಿ ಚಿನ್ಮಯಾನಂದ ಅವರ ಜಯಂತಿ ಅಂಗವಾಗಿ ನಗರದಲ್ಲಿ ಬುಧವಾರ ಗೋವುಗಳಿಗೆ ಮೇವು ನೀಡಲಾಯಿತು.
ನಗರದ ನಂಜುಮಳಿಗೆ ಸುತ್ತಮುತ್ತ ಗೋವುಗಳಿಗೆ ಮೇವು ನೀಡುವ ಮೂಲಕ ಅಪೂರ್ವ ಸ್ನೇಹ ಬಳಗದಿಂದ ಶ್ರೀಗುರುದೇವ ಸ್ವಾಮಿ ಚಿನ್ಮಯಾನಂದರ 108ನೇ ಜನ್ಮದಿನವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.
ಬಳಗದ ಅಧ್ಯಕ್ಷ ಅಪೂರ್ವ ಸುರೇಶ್ ಮಾತನಾಡಿ, ಸ್ವಾಮಿ ಚಿನ್ಮಯಾನಂದ ಅವರು ಲಕ್ಷಗಟ್ಟಲೇ ಜನರನ್ನು ಪ್ರೇರೇಪಿಸಿದ ಮತ್ತು ಭಾರತ ಮತ್ತು ವಿದೇಶಗಳಲ್ಲಿ ಉಪನಿಷತ್ತುಗಳಲ್ಲಿನ ಜ್ಞಾನವನ್ನು ಪ್ರಚಾರ ಮಾಡುವ ಚಿನ್ಮಯ ಮಿಷನ್ ಅನ್ನು ಸ್ಥಾಪಿಸಿದ ಶ್ರೇಷ್ಠ ಆಧ್ಯಾತ್ಮಿಕ ವ್ಯಕ್ತಿತ್ವ ಎಂದು ಬಣ್ಣಿಸಿದರು.
ಚಿನ್ಮಯ ಮಿಷನ್‌ನ ಧ್ಯೇಯವಾಕ್ಯ ಗರಿಷ್ಠ ಜನರಿಗೆ ಗರಿಷ್ಠ ಸಮಯಕ್ಕೆ ಗರಿಷ್ಠ ಸಂತೋಷವನ್ನು ನೀಡುವುದು ಎಂಬ ಚಿಂತನೆಯೊಂದಿಗೆ ಲಕ್ಷಾಂತರ ಭಕ್ತಾದಿಗಳನ್ನು ವಿಶ್ವಾದ್ಯಂತ ಹೊಂದಿರುವ ಮಹಾ ಜ್ಞಾನಿಯಾಗಿದ್ದರು. ಇಂದಿಗೂ ನಮ್ಮಂತಹ ಲಕ್ಷಾಂತರ ಭಕ್ತರಿಗೆ ಅವರ ತತ್ವ-ಸಿದ್ಧಾಂತಗಳು ಪ್ರೇರಣೆ ಎಂದು ಹೇಳಿದರು
ಸ್ವಾಮಿ ಚಿನ್ಮಯ ಮಿಷನ್ ಭಕ್ತಾದಿಗಳಾದ ದಯಾನಂದ್, ಬೈರತಿ ಲಿಂಗರಾಜು, ಆನಂದ್, ಮಂಜುನಾಥ್, ನಟರಾಜ್, ಶಿವು, ದರ್ಶನ್, ದುರ್ಗಾ ಪ್ರಸಾದ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net