ಮೇವು ತರಲು ಹೋದಾಗ ಹಾವು ಕಚ್ಚಿ ಸಾವು

Crime Logo
Published on

ಬಂಕಾಪುರ: ಕುರಿಗಳಿಗೆ ಮೇವು ತರಲು ಹೋದಾಗ ಹಾವು ಕಚ್ಚಿ ವ್ಯಕ್ತಿಯೊಬ್ಬ ಮೃತಪಟ್ಟ ಘಟನೆ ಇಲ್ಲಿಗೆ ಸಮೀಪದ ಹುನಗುಂದ ಗ್ರಾಮದಲ್ಲಿ ಸೋಮವಾರ ನಡೆದಿದೆ.
ಗ್ರಾಮದ ಮುಕ್ತುಮಬೇಗ ಗೌಸಬೇಗ್​ ಶಿಗ್ಗಾಂವಿ (50) ಮೃತ ವ್ಯಕ್ತಿ.
ಇವರು ಕುರಿಗಳಿಗೆ ಮೇವು ತರುವ ಸಲುವಾಗಿ ಜಮೀನಿಗೆ ಹೋದಾಗ ಹಾವು ಕಚ್ಚಿ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಈ ಕುರಿತು ಬಂಕಾಪುರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net