

ನೆಲಮಂಗಲ : ಮನೆಯ ಜವಾಬ್ದಾರಿ ಹೊರುವ ಮಹಿಳೆಯರು ಆರೋಗ್ಯವಾಗಿದ್ದರೆ ಕುಟುಂಬವೇ ಎಲ್ಲ ರೀತಿಯಿಂದ ಸದೃಢವಾಗಿರುತ್ತದೆ. ಹೀಗಾಗಿ ಆರೋಗ್ಯಕ್ಕೆ ಆದ್ಯತೆ ನೀಡಬೇಕು ಎಂದು ನಗರಸಭೆ ಅಧ್ಯಕ್ಷ ಎನ್.ಗಣೇಶ್ ಹೇಳಿದರು. ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಸಾರ್ವಜನಿಕ ಆಸ್ಪತ್ರೆ ಸಹಯೋಗದಲ್ಲಿ ಆಯೋಜಿಸಿದ್ದ ಸ್ವಸ್ಥ ನಾರಿ ಸಶಕ್ತ ಪರಿವಾರ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು. ಕುಟುಂಬವನ್ನು ಮುನ್ನಡೆಸುವ ಜವಾಬ್ದಾರಿ ಹೊತ್ತ ಮಹಿಳೆಯರ ದೈಹಿಕ ಮತ್ತು ಮಾನಸಿಕ ಆರೋಗ್ಯ ಕಾಪಾಡಿಕೊಳ್ಳುವುದರಿಂದ ಕೇವಲ ಕುಟುಂಬ ಅಲ್ಲದೆ ದೇಶವನ್ನು ಸಶಕ್ತಗೊಳಿಸಬಹುದು. ಹೀಗಾಗಿ ಮಹಿಳೆಯರು, ಗರ್ಭಿಣಿಯರು, ಹಿರಿಯ ನಾಗರಿಕರಿಗಾಗಿ ಈ ಅಭಿಯಾನ ಸಹಕಾರಿಯಾಗಿದೆ. ಅಧುನಿಕ ಸಮಾಜದಲ್ಲಿ ಮಹಿಳೆಯರು ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದು, ಧೈರ್ಯದಿಂದ ಸಮಸ್ಯೆಯನ್ನು ನಿವಾರಣೆ ಮಾಡುವ ಕೌಶಲವನ್ನು ರೂಡಿಸಿಕೊಳ್ಳಬೇಕು. ಆರೋಗ್ಯದಕಡೆ ಹೆಚ್ಚಿನ ಗಮನ ಹರಿಸಬೇಕು. ಅರೋಗ್ಯವಾಗಿದ್ದರೆ ಸಮಾಜದಲ್ಲಿ ಏನಾದರೂ ಮಾಡಲು ಸಾಧ್ಯ ಎಂದರು.
ಸಾರ್ವಜನಿಕ ಆಸ್ಪತ್ರೆ ವೈದ್ಯಾಧಿಕಾರಿ ಡಾ.ಸೋನಿಯಾ ಮಾತನಾಡಿ, ಈ ಅಭಿಯಾನದಲ್ಲಿ ಮಹಿಳೆಯರಿಗಾಗಿ ವೈದ್ಯಕಿಯ ಪರೀೆ, ಕಿವಿ, ಕಣ್ಣು, ಮೂಗು, ಗಂಟಲು, ರಕ್ತದೊತ್ತಡ, ಮಧುಮೇಹ ಮತ್ತು ದಂತ ಪರೀೆ, ಕ್ಯಾನ್ಸರ್, ಗರ್ಭಾಶಯದ ಪರೀೆ, ಗರ್ಭಿಣಿ ಮಹಿಳೆಯರಿಗಾಗಿ ಪ್ರಸವಪೂರ್ವ ಪರೀೆ, ಲಸಿಕಾ ಸೇವೆಗಳು, ರಕ್ತ ಹೀನತೆಯ ಮಟ್ಟದ ಪರೀೆ, ಕ್ಷಯ ರೋಗ ಪರೀೆ, ಸಿಕಲ್ ಸೇಲ್, ರಕ್ತಹಿನತೆ ಹಾಗೂ ವಿಶೇಷ ಸಲಹೆಗಳನ್ನು ನೀಡಲಾಗುವುದು. ಹೀಗಾಗಿ ಎಲ್ಲ ಮಹಿಳೆಯರು ವೈದ್ಯಕಿಯ ಪರೀೆ ಮತ್ತು ಆರೋಗ್ಯ ಸೇವೆಗಳನ್ನು ಪಡೆಯುವುದು ಅಗತ್ಯವಾಗಿದೆ ಎಂದರು. ಅಭಿಯಾನವು ಮಹಿಳೆಯರು ಮತ್ತು ಮಕ್ಕಳ ಆರೋಗ್ಯವನ್ನು ಬಲಪಡಿಸುವ ಮಹತ್ವಾಕಾಂ ಹೆಜ್ಜೆಯಾಗಿದೆ. ಈ ಅಭಿಯಾನವು ಸೆ.17 ರಿಂದ ಅ.2ರವರೆಗೆ ನಡೆಯಲಿದೆ ಎಂದರು. ಮಹಿಳಾ ಸಮಾಜ ಚಾರಿಟಬಲ್ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಮಂಜುಳಾಗಣೇಶ್, ಸಾರ್ವಜನಿಕ ಆಸ್ಪತ್ರೆ ವೈದ್ಯರಾದ ಡಾ.ರಾಜು, ಡಾ.ಮಂಜುಳಾದೇವಿ, ಡಾ.ನಿರ್ಮಾಲಾ, ಡಾ.ನಾಗೇಶ್, ಡಾ.ವಿನಯ್, ಡಾ.ಅಮಿತಾ, ಡಾ.ವೀಣಾ, ಡಾ.ಅರುಂಧತಿ, ಶುಶ್ರೂಷಾಧಿಕಾರಿ ದೇವಿರಮ್ಮ, ಸಿಬ್ಬಂದಿ ಜಯಲಕ್ಷಿ$್ಮ, ಗಾಯತ್ರಿ, ನರಸಿಂಹಮೂರ್ತಿ ಉಪಸ್ಥಿತರಿದ್ದರು.