ವೈಯಕ್ತಿಕ ಸ್ವಚ್ಛತೆ ಕಡೆಗೆ ಗಮನ ಹರಿಸಿ

ಕುಕನೂರು ತಾಲೂಕಿನ ಗಾವರಾಳದಲ್ಲಿ ನರೇಗಾ ಕೂಲಿಕಾರರಿಗೆ ಹಮ್ಮಿಕೊಂಡಿದ್ದ ಆರೋಗ್ಯ ತಪಾಸಣೆ ಶಿಬಿರದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಪ್ರಕಾಶ ಮಾತನಾಡಿದರು. ಗ್ರಾಪಂ ಅಧ್ಯಕ್ಷ ಹನುಮಂತ ಬನ್ನಿಕೊಪ್ಪ, ಸದಸ್ಯ ಮಹೇಶ ಗಾವರಾಳ, ಮಾಜಿ ಉಪಾಧ್ಯಕ್ಷ ಗಾಳೆಪ್ಪ ದೊಡ್ಮನಿ, ಪಿಡಿಒ ವೈಜನಾಥ ಸಾರಂಗಮಠ ಇದ್ದರು.
ಕುಕನೂರು ತಾಲೂಕಿನ ಗಾವರಾಳದಲ್ಲಿ ನರೇಗಾ ಕೂಲಿಕಾರರಿಗೆ ಹಮ್ಮಿಕೊಂಡಿದ್ದ ಆರೋಗ್ಯ ತಪಾಸಣೆ ಶಿಬಿರದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಪ್ರಕಾಶ ಮಾತನಾಡಿದರು. ಗ್ರಾಪಂ ಅಧ್ಯಕ್ಷ ಹನುಮಂತ ಬನ್ನಿಕೊಪ್ಪ, ಸದಸ್ಯ ಮಹೇಶ ಗಾವರಾಳ, ಮಾಜಿ ಉಪಾಧ್ಯಕ್ಷ ಗಾಳೆಪ್ಪ ದೊಡ್ಮನಿ, ಪಿಡಿಒ ವೈಜನಾಥ ಸಾರಂಗಮಠ ಇದ್ದರು.
Published on

ಕುಕನೂರು: ಪ್ರತಿಯೊಬ್ಬರು ಮನೆಯ ಸುತ್ತ ಹಾಗೂ ವೈಯಕ್ತಿಕ ಸ್ವಚ್ಛತೆ ಕಡೆ ಗಮನ ಹರಿಸುವ ಮೂಲಕ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಪ್ರಕಾಶ ಹೇಳಿದರು.

ತಾಲೂಕಿನ ಮಸಬ ಹಂಚಿನಾಳ ಗ್ರಾಪಂ ವ್ಯಾಪ್ತಿಯ ಗಾವರಾಳದ ನರೇಗಾ ಕಾಮಗಾರಿ ಸ್ಥಳದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಕೂಲಿಕಾರರಿಗೆ ಆರೋಗ್ಯ ತಪಾಸಣೆ ಉಚಿತ ಶಿಬಿರ, ರೋಜಗಾರ ದಿನಾಚರಣೆ, ಸ್ತ್ರೀ ಚೇತನ-ದುಡಿಯೋಣ ಬಾ ಅಭಿಯಾನ, ತ್ಯಾಜ್ಯ ಶುಲ್ಕ ಸಂಗ್ರಹಣಾ ಅಭಿಯಾನ ಕಾರ್ಯಕ್ರಮದಲ್ಲಿ ಮಾತನಾಡಿದರು.

ಡೆಂೆ ರೋಗ ಸೊಳ್ಳೆ ಕಡಿತದಿಂದ ಹರಡುತ್ತದೆ. ಆದ್ದರಿಂದ ಕಾರ್ಮಿಕರು ವೈಯಕ್ತಿಕ ಶುಚಿತ್ವದ ಕಡೆ ಗಮನ ಹರಿಸಬೇಕು. ನೀರು ಸಂಗ್ರಹ ಸಲಕರಣೆಗಳನ್ನು ಮುಚ್ಚಿಡಬೇಕು. ಮಲಗುವಾಗ ಸೊಳ್ಳೆ ಪರದೆ ಬಳಸಬೇಕು. ನಿರಂತರ ಜ್ವರ ಬಂದರೆ ವೈದ್ಯರ ಸಲಹೆ ಪಡೆಯಬೇಕು. ಸ್ವತಃ ಮಾತ್ರೆಗಳನ್ನು ಸೇವಿಸಬಾರದು. ಹಾವು ಕಡಿದಾಗ ಮುಂಜಾಗ್ರತಾ ಕ್ರಮ, ತಂಬಾಕು ಸೇವನೆಯಿಂದ ಉಂಟಾಗುವ ದುಷ್ಪರಿಣಾಮ, ಹೃದಯ ಸಂಬಂಧಿ ಕಾಯಿಲೆ, ಕಿವಿ ಸುರಕ್ಷತೆ ಬಗ್ಗೆ ಜಾಗ್ರತೆ ವಹಿಸುವಂತೆ ಸಲಹೆ ನೀಡಿದರು.

ಗ್ರಾಪಂ ಅಧ್ಯಕ್ಷ ಹನುಮಂತ ಬನ್ನಿಕೊಪ್ಪ ಮಾತನಾಡಿ, ಗ್ರಾಪಂನಿಂದ ಸ್ವ-ಸಹಾಯ ಸಂಘದ ಮಹಿಳೆಯರಿಗೆ ಹಲವಾರು ಸೌಲಭ್ಯಗಳನ್ನು ಜಾರಿಗೊಳಿಸಲಾಗಿದೆ. ಕಡಿಮೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯ ಸಿಗಲಿವೆ. ಸಣ್ಣ ಉದ್ಯೋಗಗಳಿಂದ ಆರ್ಥಿಕವಾಗಿ ಸದೃಢರಾಗಬೇಕು ಎಂದರು.

ಗ್ರಾಪಂ ಸದಸ್ಯ ಮಹೇಶ ಗಾವರಾಳ, ಮಾಜಿ ಉಪಾಧ್ಯಕ್ಷ ಗಾಳೆಪ್ಪ ದೊಡ್ಮನಿ, ಪಿಡಿಒ ವೈಜನಾಥ ಸಾರಂಗಮಠ, ತಾಲೂಕು ಐಇಸಿ ಸಂಯೋಜಕ ಲಕ್ಷ್ಮಣ ಕೆರಳ್ಳಿ, ಆರೋಗ್ಯ ಕೇಂದ್ರದ ಸಿಬ್ಬಂದಿ ಪವಿತ್ರಾ, ಕ್ಲಸ್ಟರ್ ಸೂಪರ್ ವೈಜರ್ ಪೂಜಾ ನಾಯಕ, ಕರವಸೂಲಿಗಾರ ಮಂಜುನಾಥ ಉಳ್ಳಾಗಡ್ಡಿ, ಕಾಯಕ ಮಿತ್ರರಾದ ಗೀತಾ ಈಳಿಗೇರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net