ದೊಡ್ಡ ಗುರಿಯತ್ತ ಇರಲಿ ಚಿತ್ತ

HLK GANAPATHI 22
Published on

ಹೊಳಲ್ಕೆರೆ: ಜೀವನದಲ್ಲಿ ಬಹದೊಡ್ಡ ಗುರಿ ಇಟ್ಟುಕೊಂಡು ಹೊರಟರೆ ಸಾಧನೆ ಮಾಡಬಹುದು. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಗಮನಹರಿಸಬೇಕು ಎಂದು ಯುವ ಕಾಂಗ್ರೆಸ್ ರಾಜ್ಯ ಕಾರ್ಯದರ್ಶಿ ಗಗನ್ ಯಾದವ್ ಹೇಳಿದರು.

ಗಣೇಶೋತ್ಸವ ಹಿನ್ನೆಲೆಯಲ್ಲಿ ತಾಲೂಕಿನ ಎಮ್ಮೆಹಟ್ಟಿ ತಿರುಮಲಾಪುರದಲ್ಲಿ ಗಜಾನನ ಯುವಕರ ಸಂಘ ಶುಕ್ರವಾರ ಆಯೋಜಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ವಿದ್ಯಾರ್ಥಿಗಳು ಒಳ್ಳಯೆ ಗುರಿಗಳ ಜತೆ ಅವುಗಳನ್ನು ಸಾಧಿಸುವ ಛಲ ಹೊಂದಬೇಕು. ನಿರಂತರ ಅಧ್ಯಯನ, ಕಠಿಣ ಪರಿಶ್ರಮದಿಂದ ಜೀವನದಲ್ಲಿ ಉನ್ನತ ಸ್ಥಾನಮಾನ ಗಳಿಸಬಹುದು ಎಂದರು.

ಅಧಿಕಾರಿ, ರಾಜಕಾರಣಿ, ಸಮಾಜ ಸೇವಕರಾಗುವ ಮೂಲಕ ಹುಟ್ಟೂರಿಗೆ ಕೀರ್ತಿ ತರುವ ಜತೆಗೆ ಗ್ರಾಮದ ಅಭಿವೃದ್ಧಿಗೆ ಕೊಡುಗೆ ನೀಡಬೇಕು ಎಂದು ಹೇಳಿದರು.

ರಾಷ್ಟ್ರಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಟಿ.ಪಿ.ಉಮೇಶ್ ಮಾತನಾಡಿ, ಮೇಲು-ಕೀಳು, ಜಾತಿ-ಧರ್ಮ ಭೇದವಿಲ್ಲದೆ ಎಲ್ಲರೂ ಒಗ್ಗೂಡಿ ಜೀವನ ನಡೆಸಬೇಕು ಎಂಬ ಸಂದೇಶ ಎಲ್ಲ ಧರ್ಮಗಳಲ್ಲಿ ಅಡಗಿದೆ ಎಂದರು.

ಗಣೇಶೋತ್ಸವ ಕೇವಲ ಆಚರಣೆ ಅಷ್ಟೇ ಅಲ್ಲದೆ, ಸಾಂಸ್ಕೃತಿಕ ಅನಾವರಣಗೊಳಿಸುವ ಹಬ್ಬವಾಗಿದೆ. ವಿದ್ಯೆ, ಜ್ಞಾನ, ಸಂಕಷ್ಟ ಕಾಲಕ್ಕೆ ಉತ್ತರ ಪಡೆದುಕೊಳ್ಳುವುದು ಹೇಗೆ ಎಂಬುದನ್ನು ಗಣೇಶನ ಮೂಲಕ ಕಂಡುಕೊಳ್ಳಬಹುದು ಎಂದು ಹೇಳಿದರು.

ಕನ್ನಡ ಸಾಹಿತ್ಯ ಪರಿಷತ್ ತಾಲೂಕಾಧ್ಯಕ್ಷ ಎನ್.ಶಿವಮೂರ್ತಿ ಮಾತನಾಡಿ, ಪರಸ್ಪರ ಸಹಕಾರ ಮನೋಭಾವದಿಂದ ಧಾರ್ಮಿಕ ಉತ್ಸವಗಳನ್ನು ಆಯೋಜಿಸಬೇಕು. ಆ ಮೂಲಕ ಗ್ರಾಮದಲ್ಲಿ ಶಿಕ್ಷಣ, ಪರಿಸರ ಜಾಗೃತಿ ಕೈಗೊಳ್ಳಬೇಕು ಎಂದು ಸಲಹೆ ನೀಡಿದರು.

ಯುವ ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷ ಕಿರಣ್ ಯಾದವ್, ಕಾರ್ಯದರ್ಶಿ ಜಗದೀಶ್, ಯಾದವ ಮಹಾಸೇನೆ ಅಧ್ಯಕ್ಷ ಅಣ್ಣಪ್ಪ, ಶಾಲಾ ಸಮಿತಿ ಮಾಜಿ ಅಧ್ಯಕ್ಷ ವೀರನಾಗಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net