ಉತ್ತಮ ಫಲಿತಾಂಶದ ಕಡೆ ಗಮನಹರಿಸಿ

ಸಿಂಧನೂರು ತಾಲೂಕಿನ ತುರ್ವಿಹಾಳದ ರಾಘವೇಂದ್ರಕ್ಯಾಂಪ್‌ನಲ್ಲಿ ಬಸ್ ಶೆಲ್ಟರನ್ನು ಶಾಸಕ ಆರ್.ಬಸನಗೌಡ ತುರ್ವಿಹಾಳ ಉದ್ಘಾಟಿಸಿದರು. ಪಪಂ ಅಧ್ಯಕ್ಷ ಶಾಮೀದ್‌ಸಾಬ್ ಚೌಧರಿ, ಸದಸ್ಯ ಶರಣಪ್ಪ ಹೊಸಗೌಡ್ರ, ಪ್ರಮುಖರಾದ ಮಲ್ಲನಗೌಡ ದೇವರಮನಿ, ಮೌಲಪ್ಪಯ್ಯ ಗುತ್ತೇದಾರ, ವೀರಭದ್ರಗೌಡ, ಎಂ.ಡಿ.ಫಾರೂಕ್‌ಸಾಬ್ ಖಾಜಿ, ಅಬೂತ್‌ರಾಬ್ ಇತರರಿದ್ದರು.

Published on

ಸಿಂಧನೂರು: ಸರ್ಕಾರಿ ಶಾಲೆಗಳಿಗೆ ಕೊಠಡಿ ಹಾಗೂ ಮೂಲಸೌಲಭ್ಯ ಒದಗಿಸಿ ಶೈಕ್ಷಣಿಕ ಅಭಿವೃದ್ಧಿಗೆ ಶ್ರಮಿಸಲಾಗುವುದು ಎಂದು ಮಸ್ಕಿ ಶಾಸಕ ಆರ್.ಬಸನಗೌಡ ತುರ್ವಿಹಾಳ ಹೇಳಿದರು.

ತುರ್ವಿಹಾಳದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ, ಉರ್ದು ಶಾಲೆ ಮತ್ತು ಕೋಟೆ ಶಾಲೆಯ 98 ಲಕ್ಷ ರೂ. ವೆಚ್ಚದ ಹೆಚ್ಚುವರಿ ಕೊಠಡಿಗಳನ್ನು ಮಂಗಳವಾರ ಉದ್ಘಾಟಿಸಿ ಮಾತನಾಡಿದರು. ಕ್ಷೇತ್ರ ವ್ಯಾಪ್ತಿಯಲ್ಲಿ ಸರ್ಕಾರಿ ಶಾಲೆಗಳ ಕೊಠಡಿ ಸಮಸ್ಯೆ ಪರಿಹರಿಸಲು ಆದ್ಯತೆ ನೀಡಿದ್ದು, ಹಂತ ಹಂತವಾಗಿ ನಿರ್ಮಿಸಲಾಗುತ್ತದೆ. ಈಗಾಗಲೇ ಪದವಿ ಮಹಾವಿದ್ಯಾಲಯಕ್ಕೆ ಸುಸಜ್ಜಿತ ಕಟ್ಟಡ ಒದಗಿಸಲಾಗಿದೆ. ಅರಳಹಳ್ಳಿ, ಬಸವಣ್ಣಕ್ಯಾಂಪ್‌ಗಳಲ್ಲಿಯೂ ಶಾಲಾ ಕೊಠಡಿಗಳನ್ನು ನಿರ್ಮಿಸಲಾಗಿದೆ. ಸರ್ಕಾರಿ ಶಾಲೆಗಳಲ್ಲಿ ಖಾಲಿ ಇರುವ ಶಿಕ್ಷಕರ ಹುದ್ದೆಗಳಿಗೆ ಅತಿಥಿ ಶಿಕ್ಷಕರನ್ನು ನೇಮಕ ಮಾಡಲಾಗಿದೆ. ಸರ್ಕಾರಿ ಶಾಲೆಗಳಲ್ಲಿ ಫಲಿತಾಂಶ ಕುಸಿತಗೊಂಡಿದೆ. ಶಿಕ್ಷಕರು ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಿ, ಉತ್ತಮ ಫಲಿತಾಂಶದ ಕಡೆ ಗಮನ ಹರಿಸಬೇಕು ಎಂದರು.

ಬಳಿಕ ತಾಲೂಕಿನ ಅರಳಹಳ್ಳಿಯಲ್ಲಿ 56 ಲಕ್ಷ ರೂ. ವೆಚ್ಚದ ಸಹಿಪ್ರಾ ಶಾಲೆಯ ನಾಲ್ಕು ಹೆಚ್ಚುವರಿ ಕೊಠಡಿಗಳು, ರಾಘವೇಂದ್ರಕ್ಯಾಂಪ್‌ನಲ್ಲಿ 15 ಲಕ್ಷ ರೂ. ವೆಚ್ಚದ ಬಸ್ ಶೆಲ್ಟರ್ ಹಾಗೂ ಬಸವಣ್ಣಕ್ಯಾಂಪ್‌ನಲ್ಲಿ 28 ಲಕ್ಷ ರೂ. ವೆಚ್ಚದ ಸಹಿಪ್ರಾ ಶಾಲೆಯ ಹೆಚ್ಚುವರಿ ಕೊಠಡಿಗಳನ್ನು ಉದ್ಘಾಟಿಸಿದರು.

ಕೆಪಿಸಿಸಿ ಸದಸ್ಯ ನಲ್ಲಾ ವೆಂಕಟೇಶ್ವರಾವ, ಪ್ರಮುಖರಾದ ಶಾಮೀದ್‌ಸಾಬ್ ಅರಬ್, ಶರಣಬಸವ ಗಡೇದ್, ಶಂಕರಗೌಡ ಉಮಲೂಟಿ, ಸಿದ್ದನಗೌಡ ವಿರೂಪಾಪುರ, ಸಿರಾಜ್‌ಪಾಷಾ ದಳಪತಿ, ಪಂಪನಗೌಡ ಕಲ್ಮಂಗಿ, ಭೀಮಣ್ಣ, ಹುಲಗಪ್ಪ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net