

ರಾವಂದೂರು: ತಂಬಾಕು ಬೆಳೆಯ ಜತೆಗೆ ರೇಷ್ಮೆ ಮತ್ತು ಹೈನುಗಾರಿಕೆಗೂ ಹೆಚ್ಚಿನ ಆದ್ಯತೆಯನ್ನು ನೀಡಬೇಕೆಂದು ಸಚಿವ ಕೆ ವೆಂಕಟೇಶ್ ಹೇಳಿದರು.
ಪಿರಿಯಾಪಟ್ಟಣ ತಾಲೂಕು ತಮ್ಮಡಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಕಟ್ಟಡಕ್ಕೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿ, ತಾಲೂಕಿನಲ್ಲಿ ರೈತರು ಹೆಚ್ಚಾಗಿ ತಂಬಾಕು ಬೆಳೆಯನ್ನೇ ಆಧರಿಸಿ ಬಂದಿದ್ದಾರೆ. ಕೆಲವು ವೇಳೆ ಸೂಕ್ತ ಬೆಲೆ ಸಿಗದೆ ತೊಂದರೆ ಅನುಭವಿಸುತ್ತಿದ್ದರು. ಅಂತಹ ಸಂದರ್ಭದಲ್ಲಿ ಉಪಕಸುಬುಗಳನ್ನಾಗಿ ರೇಷ್ಮೆ ಹೈನುಗಾರಿಕೆಗು ಸಹ ಆದ್ಯತೆ ನೀಡುವ ಮೂಲಕ ತಮ್ಮ ಬದುಕನ್ನು ಉತ್ತಮಗೊಳಿಸಿಕೊಳ್ಳಬೇಕೆಂದರು.
ತಾಲೂಕಿನಲ್ಲಿ ಹೆಚ್ಚು ಜನರು ಹೈನುಗಾರಿಕೆಗೆ ಆಸಕ್ತಿ ತೋರುತ್ತಿದ್ದು, ಇದರಿಂದ ಜನರು ಆರ್ಥಿಕ ಸ್ವಾವಲಂಬಿಯಾಗಿ ಉತ್ತಮ ಬದುಕು ನಡೆಸಲು ಸಹಕಾರಿಯಾಗಿದೆ. ಹಾಲು ಉತ್ಪಾದಕರ ಸಹಕಾರ ಸಂಘಗಳಲ್ಲಿ ಪಕ್ಷ ಭೇದ ಮರೆತು ಸಂಘದ ಅಭಿವೃದ್ಧಿ ಹಾಗೂ ಉತ್ತಮ ಗುಣಮಟ್ಟದ ಹಾಲನ್ನು ಹಾಕುವುದರ ಮೂಲಕ ಸಂಘದ ಅಭಿವೃದ್ಧಿಗೆ ಎಲ್ಲರೂ ಸಹಕಾರ ನೀಡಬೇಕು ಎಂದು ತಿಳಿಸಿದರು.
ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷ ನಿತಿನ್ ವೆಂಕಟೇಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಿ.ಟಿ. ಸ್ವಾಮಿ, ರಾಮತ್ ಜಾನ್ ಬಾಬು, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗೌರಮ್ಮ, ಸಹಕಾರ ಸಂಘದ ಅಧ್ಯಕ್ಷ ಕರಿಗೌಡ, ಉಪಾಧ್ಯಕ್ಷ ಸಿದ್ದಯ್ಯ, ಮಾಜಿ ತಾಪಂ ಅಧ್ಯಕ್ಷ ಚಿಕ್ಕೆಗೌಡ, ಗ್ರಾಪಂ ಸದಸ್ಯರಾದ ಶೀಲಾ ರವಿ, ಜಗದೀಶ್, ವಿಜಿ ಕೊಪ್ಪಲು ಲೋಕೇಶ್, ಮಾದೇಶ್, ಹಾಲು ಉತ್ಪಾದಕರ ಸಂಘದ ವಿಸ್ತರಣಾಧಿಕಾರಿ ನಿಶ್ಚಿತ್, ತಾಲೂಕು ದಂಡಾಧಿಕಾರಿ ನಿಸರ್ಗಪ್ರಿಯ, ಇಒ ಸುನಿಲ್, ಕಾರ್ಯದರ್ಶಿ ಕುಮಾರ್, ಪಿಡಿಒ ಅನಿಲ್ ಕುಮಾರ್ ಇತರರು ಇದ್ದರು.