ವಿಜ್ಞಾನ ಶಿಕ್ಷಣದತ್ತ ಗಮನಹರಿಸಲಿ

26Manju8
ಬೆಳಗಾವಿ ತಾಲೂಕಿನ ಎಲ್ಲಾ ಪ್ರೌಢಶಾಲೆಗಳ ವಿಜ್ಞಾನ ಶಿಕ್ಷಕರಿಗಾಗಿ ಹಮ್ಮಿಕೊಳ್ಳಲಾಗಿದ್ದ ವಿಜ್ಞಾನ ಕಾರ್ಯಾಗಾರವನ್ನು ಬಿಇಒ ಎಸ್.ಪಿ.ದಾಸಪ್ಪನವರ ಉದ್ಘಾಟಿಸಿದರು. ವಿಜಯಲಕ್ಷ್ಮೀ ಪಾಟೀಲ, ಎಸ್.ಎಸ್.ಮಠದ, ಮಹಾಂತೇಶ ಹುಲಗಬಾಳಿ ಇತರರಿದ್ದರು.
Published on

ಬೆಳಗಾವಿ: ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ವಿಜ್ಞಾನದ ಪಾತ್ರ ಅತಿ ಮುಖ್ಯವಾಗಿದೆ. ವಿಜ್ಞಾನವು ನಮ್ಮ ಜೀವನದ ಒಂದು ಭಾಗವೇ ಆಗಿದೆ ಎಂದು ಬೆಳಗಾವಿ ಗ್ರಾಮೀಣ ಬಿಇಒ ಎಸ್.ಪಿ.ದಾಸಪ್ಪನವರ ಹೇಳಿದರು.

ತಾಲೂಕಿನ ಶಿಂದೊಳ್ಳಿ ಗ್ರಾಮದ ಗೋಪಾಲ ಜಿನಗೌಡ ಎಜುಕೇಷನ್ ಟ್ರಸ್ಟ್ ವತಿಯಿಂದ ದೇವೇಂದ್ರ ಜಿನಗೌಡ ಇಂಗ್ಲಿಷ್ ಮಾಧ್ಯಮ ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ಶನಿವಾರ ಪ್ರೌಢಶಾಲೆಗಳ ವಿಜ್ಞಾನ ಶಿಕ್ಷಕರಿಗಾಗಿ ಹಮ್ಮಿಕೊಂಡಿದ್ದ ವಿಜ್ಞಾನ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು. ಚಂದ್ರಯಾನ- 3 ಭಾರತದಿಂದ ವಿಕ್ರಂ ರೋವರ್ ಚಂದ್ರನ ದಕ್ಷಿಣ ಪಥಕ್ಕೆ ಪಾದರ್ಪಣೆ ಮಾಡಿದ್ದು, ಹೆಮ್ಮೆಯ ವಿಷಯ. ಇಂತಹ ಸಾಧನೆಗೈದ ವಿಜ್ಞಾನಿಗಳ ಕಾರ್ಯ ಶ್ಲಾಘನೀಯ. ವಿದ್ಯಾರ್ಥಿಗಳು ವಿಜ್ಞಾನ ಶಿಕ್ಷಣದತ್ತ ಹೆಚ್ಚು ಗಮನ ಹರಿಸಬೇಕು ಎಂದರು.

ಕ್ಷೇತ್ರ ಸಮನ್ವಯ ಅಧಿಕಾರಿ ಎಂ.ಎಸ್.ಮೇದಾರ ಮಾತನಾಡಿ, ಪ್ರಸ್ತುತ ವಿಜ್ಞಾನ ಯುಗವಾಗಿದ್ದು ಇಂದಿನ ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸುವುದು ಅತಿ ಮುಖ್ಯವಾಗಿದೆ ಎಂದರು.

ಉಪನ್ಯಾಸಕ ನಾಗೇಶ ದಂಡಾಪೂರಿ, ಎಸ್.ಎಸ್.ಮಠದ, ಮಹಾಂತೇಶ ಹುಲಗಬಾಳಿ, ನೋಡಲ್ ಅಧಿಕಾರಿ ವಿನಾಯಕ ವನ್ನೂರ, ಡಿ.ಆರ್.ನಾಯ್ಕ, ಶೆಟ್ಟಿ, ನಾಗೇಶ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net