ಓದಿನತ್ತ ಗಮನ, ಭವಿಷ್ಯ ಉಜ್ವಲ

VV DIGITAL
Published on

ಹುಬ್ಬಳ್ಳಿ: ಇಲ್ಲಿಯ ಸರ್ಕಾರಿ ಪಾಲಿಟೆಕ್ನಿಕ್‌ನಲ್ಲಿ ಅಂತಾರಾಷ್ಟ್ರೀಯ ಮಾದಕ ದ್ರವ್ಯ ಸೇವನೆ ಹಾಗೂ ಸಾಗಾಟ ವಿರೋಧಿ ದಿನವನ್ನು ಬುಧವಾರ ಏರ್ಪಡಿಸಲಾಗಿತ್ತು. ಎಸಿಪಿ ಶಿವಪ್ರಕಾಶ ನಾಯಕ್, ಪಿಎಸ್‌ಐ ಉಮೇಶಗೌಡ ಪಾಟೀಲ ಮಾತನಾಡಿ, ಡ್ರಗ್ ಪೆಡ್ಲರ್ಸ್ ವಿದ್ಯಾರ್ಥಿಗಳನ್ನು ಪ್ರಚೋದಿಸುತ್ತಾರೆ. ಅವರ ಮಾತಿಗೆ ಕಿವಿಗೊಡಬಾರದು. ನಿಮ್ಮ ಭವಿಷ್ಯ ಉಜ್ವಲವಾಗಬೇಕಾದರೆ ಓದಿನತ್ತ ಗಮನ ಹರಿಸಬೇಕು ಎಂದು ಸಲಹೆ ನೀಡಿದರು. ಪ್ರಾಚಾರ್ಯೆ ಎಂ. ಗೀತಾ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕುಲಸಚಿವೆ ರೂಪಾ ಯಾವಗಲ್, ವಿಭಾಗ ಮುಖ್ಯಸ್ಥರಾದ ಭರತ ಕುಮಾರ ಎಸ್., ಅತಾವುಲ್ಲಾ ಯಲ್ಲಾಪುರ, ಡಾ. ಸಂಜೀವಕುಮಾರ ಚೌಗಲಾ, ಸಿದ್ದನಗೌಡ ಹೊಸಮನಿ, ಸವಿತಾ ಶಿಂಧೆ, ಎನ್‌ಎಸ್‌ಎಸ್ ಕಾರ್ಯಕ್ರಮಾಧಿಕಾರಿ ರುದ್ರಪ್ಪ ಬಡಿಗೇರ, ರೆಡ್ ಕ್ರಾಸ್ ಕಾರ್ಯಕ್ರಮಾಧಿಕಾರಿ ಮಂಜುನಾಥ ಎಸ್. ಹಾಜರಿದ್ದರು. ಉಪನ್ಯಾಸಕಿ ಅಮೃತ ಕುಲಕರ್ಣಿ ಸ್ವಾಗತಿಸಿದರು. ಕಿರಣ ಕುಮಾರ ನಲವಡಿ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net