ಮಕ್ಕಳನ್ನು ಸಮಾಜದ ಆಸ್ತಿಯಾಗಿ ಮಾಡುವ ಕಡೆ ಗಮನಹರಿಸಿ

7bhr 1
Published on

ಬಾಳೆಹೊನ್ನೂರು: ಬಂಟರ ಸಮುದಾಯಕ್ಕೆ ತನ್ನದೇ ಆದ ಘನತೆ ಇದ್ದು ,ಈ ಸಮುದಾಯ ನಾಯಕತ್ವಕ್ಕೆ ಹೆಸರು ವಾಸಿಯಾಗಿದೆ ಎಂದು ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಸುಧಾಕರ್ ಎಸ್.ಶೆಟ್ಟಿ ಹೇಳಿದರು.

ಪಟ್ಟಣದ ಬಂಟರ ಯುವ ವೇದಿಕೆ ಭಾನುವಾರ ಸಂಘದ ಮಾಜಿ ಅಧ್ಯಕ್ಷ ದಿ.ಮಹೇಶ್‌ಶೆಟ್ಟಿ ಸ್ಮರಣಾರ್ಥ ಆಯೋಜಿಸಿದ್ದ ವಾರ್ಷಿಕ ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಸಂಜೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಯಾವುದೇ ಜಾತಿ, ಜನಾಂಗಕ್ಕೆ ಅದರದ್ದೇ ಆದ ಚೌಕಟ್ಟು ಇದ್ದು, ಆ ಸಮುದಾಯದ ಮಕ್ಕಳಿಗೆ ವ್ಯವಸ್ಥೆ, ನೀತಿ ನಿಯಮಗಳನ್ನು ಮನೆಯ ಹಿರಿಯರು ಕಲಿಸಬೇಕು. ಸಂಘಟನೆಗಳು ಬಲಗೊಂಡಲ್ಲಿ ಮಾತ್ರ ಸಮಾಜದ ಯುವಕ, ಯುವತಿಯರಿಗೆ ಸಹಕಾರ ದೊರೆಯಲಿದೆ.

ಇಂದಿನ ಪಾಲಕರು ತಮ್ಮ ಮಕ್ಕಳನ್ನು ಡಾಕ್ಟರ್, ಇಂಜಿನಿಯರ್ ಆಗಬೇಕು ಎಂದು ಬಯಸುತ್ತಿದ್ದಾರೆ ಹೊರತು ತಮ್ಮ ಮಕ್ಕಳನ್ನು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಜ್ಜು ಮಾಡುವ ಕಡೆ ಗಮನಹರಿಸುತ್ತಿಲ್ಲ. ಒಬ್ಬ ಅಧಿಕಾರಿ ಸೃಷ್ಟಿಯಾದರೆ ತಾಲೂಕು, ಜಿಲ್ಲೆ, ರಾಜ್ಯ, ದೇಶವನ್ನು ಬದಲಾವಣೆ ಮಾಡಬಹುದು. ನಾವು ಕೇವಲ ಹಣದ ಹಿಂದೆ ಹೋದರೆ ಯಾವುದೇ ಪ್ರಯೋಜನವಿಲ್ಲ. ನಮ್ಮ ಮಕ್ಕಳನ್ನು ಸಮಾಜದ ಆಸ್ತಿಯಾಗಿ ಮಾಡುವ ಕಡೆ ಗಮನಹರಿಸಬೇಕು ಎಂದರು.

ಜಿಲ್ಲಾ ಮಟ್ಟದ ಕ್ರಿಕೆಟ್ ಪಂದ್ಯಾವಳಿಯಲ್ಲಿ ಬಾಳೆಹೊನ್ನೂರಿನ ಮಹೇಶ್ ಇಲೆವೆನ್ ತಂಡ ಪ್ರಥಮ, ಕೊಪ್ಪ ಯೂತ್ ಬಂಟ್ಸ್ ತಂಡ ದ್ವಿತೀಯ, ಶೃಂಗೇರಿ ಯೂತ್ ಬಂಟ್ಸ್ ತಂಡ ತೃತೀಯ ಸ್ಥಾನ ಪಡೆಯಿತು. ಬಂಟರ ಯುವ ವೇದಿಕೆ ಅಧ್ಯಕ್ಷ ಚಂದ್ರಶೇಖರ್ ರೈ, ಬಂಟರ ಸಂಘದ ಅಧ್ಯಕ್ಷ ರಾ.ವೆಂಕಟೇಶ್, ನೃತ್ಯ ಕಲಾವಿದ ಶಶಿಕುಮಾರ್ ಶೆಟ್ಟಿ, ಪ್ರಮುಖರಾದ ಸನಂತ್‌ಶೆಟ್ಟಿ, ಮಂಜುನಾಥ್ ಶೆಟ್ಟಿ, ಸುರೇಂದ್ರ ಶೆಟ್ಟಿ, ರಾಘವೇಂದ್ರ ಶೆಟ್ಟಿ, ಸಂತೋಷ್‌ಶೆಟ್ಟಿ, ಸುದರ್ಶನ್, ಕಷ್ಣಮೂರ್ತಿ ಮತ್ತಿತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net