ಆರೋಗ್ಯದ ಬಗ್ಗೆ ಇರಲಿ ಗಮನ, ಕ್ಷಯಮುಕ್ತ ಭಾರತ ಅಭಿಯಾನ’

07BTP01
ಕಣಗಾಲು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಆಯೋಜಿಸಿದ ‘ಆರೋಗ್ಯದ ಬಗ್ಗೆ ಇರಲಿ ಗಮನ, ಕ್ಷಯಮುಕ್ತ ಭಾರತ ಅಭಿಯಾನ’ ಕಾರ್ಯಕ್ರಮದಲ್ಲಿ ಆರೋಗ್ಯ ನಿರೀಕ್ಷಣಾಧಿಕಾರಿ ವಿಶ್ವನಾಥ್ ಮಾತನಾಡಿದರು. ಮೈಮುನ್ನೀಸಾ, ಸವಿತಾ, ದಿವ್ಯರಾಣಿ, ಲಾವಣ್ಯ ಇತರರು ಇದ್ದರು.
Published on

 ಬೆಟ್ಟದಪುರ: ಪ್ರತಿಯೊಬ್ಬರೂ ಸಕಾಲದಲ್ಲಿ ಆರೋಗ್ಯ ಪರೀಕ್ಷೆ ಮಾಡಿಸಿಕೊಳ್ಳುವ ಮೂಲಕ ಕ್ಷಯ ಮುಕ್ತ ಭಾರತ ನಿರ್ಮಾಣಕ್ಕೆ ಮುಂದಾಗಬೇಕು ಎಂದು ಆರೋಗ್ಯ ನಿರೀಕ್ಷಣಾಧಿಕಾರಿ ವಿಶ್ವನಾಥ್ ಹೇಳಿದರು.

ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರ ಸಮೀಪದ ಕಣಗಾಲು ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಶನಿವಾರ ಆಯೋಜಿಸಿದ ‘ಆರೋಗ್ಯದ ಬಗ್ಗೆ ಇರಲಿ ಗಮನ, ಕ್ಷಯಮುಕ್ತ ಭಾರತ ಅಭಿಯಾನ’ ಕಾರ್ಯಕ್ರಮದಲ್ಲಿ ಮಾತನಾಡಿದರು.

100 ದಿನದ ಕ್ಷಯ ರೋಗ ಪತ್ತೆ ಸಮೀಕ್ಷೆಯಲ್ಲಿ ಗ್ರಾಮದಲ್ಲಿ ಮಧುಮೇಹಿ, ಧೂಮಪಾನ, ಮದ್ಯಪಾನ, ಕ್ಷಯರೋಗ ಲಕ್ಷಣ ಇರುವವರು, ಅಪೌಷ್ಟಿಕತೆ ಒಳಗಾಗಿರುವವರು, ಕ್ಷಯ ಸೋಂಕಿತ ರೋಗಿಯ ಸಂಪರ್ಕಿತ ವ್ಯಕ್ತಿಗಳಿಗೆ ಕಫ ಹಾಗೂ ಎಕ್ಷರೇ ಪರೀಕ್ಷೆ ಮಾಡಿಸುವ ಮೂಲಕ ರೋಗ ಪತ್ತೆ ಹಚ್ಚಿ ಚಿಕಿತ್ಸೆ ನೀಡಲಾಗುತ್ತಿದೆ. ಆರೋಗ್ಯದ ಯಾವುದೇ ಸಮಸ್ಯೆ ಇದ್ದರೂ ನಿರ್ಲಕ್ಷ್ಯ ಮಾಡದೆ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಚಿಕಿತ್ಸೆ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.

ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮೈಮುನ್ನೀಸಾ, ಸಿಬ್ಬಂದಿ ಸವಿತಾ, ದಿವ್ಯರಾಣಿ, ಲಾವಣ್ಯ ಸೇರಿದಂತೆ ಆಶಾ ಕಾರ್ಯಕರ್ತೆಯರು ಹಾಗೂ ಗ್ರಾಮಸ್ಥರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net