ಆರೋಗ್ಯದ ಕಡೆ ಗಮನ ಹರಿಸಿ

Published on

ಮಾನ್ವಿ: ಮಹಿಳೆಯರು ಆರೋಗ್ಯದ ಕಡೆ ಹೆಚ್ಚು ಗಮನ ಹರಿಸಬೇಕು ಎಂದು ಆಯುರ್ವೇದ ಮೆಡಿಕಲ್ ಕಾಲೇಜಿನ ಪ್ರಾಚಾರ್ಯ ಹಾಗೂ ಎನ್ನೆಸ್ಸೆಸ್ ಘಟಕದ ನಿರ್ದೇಶಕ ಡಾ.ಜೀವನೇಶ್ವರಯ್ಯ ಹೇಳಿದರು.

ಭೋಗಾವತಿ ಗ್ರಾಮದಲ್ಲಿ ಗುರುವಾರ ಬೆಂಗಳೂರಿನ ರಾಜೀವಗಾಂಧಿ ಆರೋಗ್ಯ ವಿಶ್ವವಿದ್ಯಾಲಯ ಮತ್ತು ಕೆಪಿಎಸ್‌ವಿಎಸ್ ಆಯುರ್ವೇದ ಮೆಡಿಕಲ್ ಕಾಲೇಜ್ ಮತ್ತು ಆಸ್ಪತ್ರೆಯಿಂದ 18ನೇ ಎನ್ನೆಸ್ಸೆಸ್ ವಿಶೇಷ ಶಿಬಿರದ ಅಂಗವಾಗಿ ಆರೋಗ್ಯ ತಪಾಸಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಎನ್ನೆಸ್ಸೆಸ್ ಶಿಬಿರಗಳಿಂದ ಗ್ರಾಮೀಣ ಜನತೆಗೆ ಸ್ವಚ್ಛತೆ, ಆರೋಗ್ಯದ ಬಗ್ಗೆ ಸಲಹೆ ನೀಡಲಾಗುತ್ತಿದ್ದು, ಸದುಪಯೋಗ ಪಡೆಯಬೇಕು ಎಂದರು. ಮಾನ್ವಿ ಕಲ್ಮಠದ ಆಯುರ್ವೇದ ಮೆಡಿಕಲ್ ವಿದ್ಯಾರ್ಥಿಗಳು ಭೋಗಾವತಿ ಗ್ರಾಮದ ಪ್ರತಿ ಮನೆಗೆ ಭೇಟಿ ನೀಡಿ ಮಹಿಳೆಯರಿಗೆ ಆರೋಗ್ಯದ ಸಲಹೆ ನೀಡಿದರು. ಸರ್ಕಾರಿ ಹಿಪ್ರಾ ಶಾಲೆ ಮುಖ್ಯಶಿಕ್ಷಕ ಸಬ್ಜಲಿಸಾಬ್, ಡಾ.ಸುಮಂಗಳಾ ಎಚ್.ಎಂ., ಡಾ.ಜ್ಯೋತಿ, ಮಹಾಂತೇಶ್ವರಯ್ಯ ಸ್ವಾಮಿ, ಡಾ.ಸುರೇಶರಾವ್ ದೇಶಪಾಂಡೆ, ಗ್ರಾಪಂ ಅಧ್ಯಕ್ಷ ಶಿವಲಿಂಗ, ಸದಸ್ಯ ರಾಮಣ್ಣ ಭಜಂತ್ರಿ, ಅಮರೇಶ, ಪಂಪನಗೌಡ ವಿಶ್ವಾರಾಧ್ಯ, ಉಮಾಶಂಕರ ಎಚ್.ಎಂ. ಇತರರಿದ್ದರು.

27ಮಾನ್ವಿ03

ಮಾನ್ವಿ ತಾಲೂಕಿನ ಭೋಗಾವತಿ ಗ್ರಾಮದಲ್ಲಿ ಗುರುವಾರ ಎನ್ನೆಸ್ಸೆಸ್ ವಿಶೇಷ ಶಿಬಿರದಲ್ಲಿ ಸರ್ಕಾರಿ ಹಿಪ್ರಾ ಶಾಲೆ ಮುಖ್ಯಶಿಕ್ಷಕ ಸಬ್ಜಲಿಸಾಬ್ ಮಾತನಾಡಿದರು. ಮೆಡಿಕಲ್ ಕಾಲೇಜಿನ ಪ್ರಾಚಾರ್ಯ ಡಾ.ಜೀವನೇಶ್ವರಯ್ಯ, ಡಾ.ಸುಮಂಗಳಾ ಎಚ್.ಎಂ. ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net