

ಮುದಗಲ್: ಸಮೀಪದ ಜಾಂತಾಪುರ ಗ್ರಾಮದ ಸರ್ಕಾರಿ ಹಿಪ್ರಾ ಶಾಲೆಯಲ್ಲಿ ಶನಿವಾರ ಮಕ್ಕಳ ಪಾಲಕರ ಸಭೆ ನಡೆಯಿತು.
ಶಿಕ್ಷಕ ಮೌನೇಶ್ವರಾಚಾರಿ ಮಾತನಾಡಿ, ಮಕ್ಕಳ ಶೈಕ್ಷಣಿಕ ಪ್ರಗತಿಯಲ್ಲಿ ಶಿಕ್ಷಕರ ಜತೆ ಪಾಲಕರ ಪಾತ್ರವೂ ಮಹತ್ವದ್ದಾಗಿದೆ. ಸಾರ್ವಜನಿಕ ಇಲಾಖೆ ಆಧುನಿಕತೆಗೆ ತಕ್ಕಂತೆ ಶಿಕ್ಷಣ ನೀಡಲು ಹಲವು ಯೋಜನೆಗಳನ್ನು ಅನುಷ್ಠಾನಗೊಳಿಸಿದ್ದು, ಮಕ್ಕಳು ಸದುಪಯೋಗ ಪಡೆದುಕೊಳ್ಳಬೇಕು. ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬಂತೆ ಬಾಲ್ಯದಿಂದಲೇ ಶಿಕ್ಷಣದ ಬಗ್ಗೆ ಒತ್ತು ನೀಡಬೇಕು. ಶಿಕ್ಷಕರ ಪಾಠ-ಪ್ರವಚನ ಆಸಕ್ತಿಯಿಂದ ಆಲಿಸಬೇಕು ಎಂದು ಸಲಹೆ ನೀಡಿದರು.
ಬನ್ನಿಗೋಳ ಗ್ರಾಪಂ ಅಧ್ಯಕ್ಷೆ ಲಚಮಮ್ಮ ಚವಡಿ, ಪಿಡಿಒ ವೀರೇಶ ಶಿವನಗುತ್ತಿ, ಎಸ್ಡಿಎಂಸಿ ಅಧ್ಯಕ್ಷ ಅಮರೇಗೌಡ ಪಾಟೀಲ್, ಮುಖ್ಯಶಿಕ್ಷಕ ಗುರುಬಸಪ್ಪ, ಜ್ಯೋತಿ ಹುಡೇದ್ ಇತರರಿದ್ದರು.