

ಕೋಟೆ ಮುನಿರಾಜು ಟೇಕಲ್:ಟೇಕಲ್ನಿಂದ ಮಾಲೂರು, ಬಂಗಾರಪೇಟೆ ಸೇರಿ ಹಲವು ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ರೈಲ್ವೆ ಗೇಟ್ನಿಂದ ಸಾಕಷ್ಟು ತೊಂದರೆ ಅನುಭವಿಸಿದ್ದ ಜನತೆಗೆ ಈಗ ಸಿಹಿ ಸುದ್ದಿ ಸಿಕ್ಕಿದ್ದು, ಅತಿ ಶ್ರೀವೇ ಸಮಸ್ಯೆಗೆ ಮುಕ್ತಿ ಸಿಗಲಿದೆ. ಈಗಾಗಲೇ ಮೇಲ್ಸೇತುವೆ ನಿರ್ಮಾಣ ಕಾಮಗಾರಿ ಬಹುತೇಕ ಪೂರ್ಣ ಹಂತಕ್ಕೆ ತಲುಪಿದ್ದು, ಕೆಲವೇ ದಿನಗಳಲ್ಲಿ ಸಂಚಾರ ಮುಕ್ತವಾಗಲಿದೆ.
ಟೇಕಲ್ನಲ್ಲಿ ರೈಲ್ವೆ ನಿಲ್ದಾಣವಿದ್ದು, ಕೆಜಿಎ್&ಬಂಗಾರಪೇಟೆ ಮಾರ್ಗವಾಗಿ ಹೋಗುವ ರೈಲುಗಳ ಟೇಕಲ್ನಲ್ಲಿ ನಿಲುಗಡೆಯಾಗುತ್ತವೆ. ನಂತರ ಹೊರಡಲು ಸಾಕಷ್ಟು ಸಮಯ ತೆಗೆದುಕೊಳ್ಳುತ್ತಿದ್ದರಿಂದ ರೈಲ್ವೆ ಗೇಟ್ನಲ್ಲಿ ಸಾಕಷ್ಟು ವಾಹನಗಳು ಸುಮಾರು ಅರ್ಧ ತಾಸಿಗೂ ಅಧಿಕ ಕಾಲ ಮಳೆ, ಬಿಸಿಲು ಎನ್ನದೆ ಕಾಯಬೇಕಾದ ಪರಿಸ್ಥಿತಿ ಇತ್ತು. ಇದರಿಂದ ಕೆಲಸ ಕಾರ್ಯಗಳಿಗೆ ತೆರಳುವವರು ತೊಂದರೆ ಅನುಭವಿಸುವಂತಾಗಿತ್ತು. ಇದಕ್ಕೆ ಮುಕ್ತಿ ದೊರಕಿಸಿಕೊಡುವ ನಿಟ್ಟಿನಲ್ಲಿ ರೈಲ್ವೆ ಮಂಡಳಿಯು ಮೇಲ್ಸೇತುವೆ ನಿರ್ಮಾಣ ಮಾಡಿದ್ದು, ಶ್ರೀ ಸಾರ್ವಜನಿಕರ ಉಪಯೋಗಕ್ಕೆ ದೊರೆಯಲಿದೆ.
ಬಂಗಾರಪೇಟೆ, ಕೆಜಿಎಫ್, ಮಾಸ್ತಿ ಸೇರಿ ನೆರೆಯ ಆಂಧ್ರಪ್ರದೇಶ ಮತ್ತು ತಮಿಳುನಾಡು ರಾಜ್ಯಗಳಿಗೆ ಸಂಚರಿಸುತ್ತಿದ್ದ ಜನರಿಗೆ ರೈಲ್ವೆ ಗೇಟ್ ಬಳಿ ಕಾಯುವ ಕಿರಿಕಿರಿ ತಪ್ಪಲಿದೆ. ಇನ್ನು ಮುಂದೆ ಆರಾಮವಾಗಿ ಸಂಚರಿಸಬಹುದಾಗಿದೆ
ಟೇಕಲ್ ಹೋಬಳಿ ಕೇಂದ್ರವು ವರ್ಷದಿಂದ ವರ್ಷಕ್ಕೆ ಅಭಿವೃದ್ಧಿ ಹೊಂದುತ್ತಿದೆ. ಈಗ ಪಟ್ಟಣದ ಮಾದರಿಯಲ್ಲಿ ಪ್ರಗತಿಯಾಗಿದೆ.
ನಿತ್ಯ ಸಾವಿರಾರು ಜನರು ತಮ್ಮ ವ್ಯಾಪಾರಕ್ಕಾಗಿ ಟೇಕಲ್ಗೆ ಆಗಮಿಸುತ್ತಾರೆ. ಹೋಬಳಿ ಕೇಂದ್ರವಾಗಿರುವುದರಿಂದ ನಾಡಕಚೇರಿ, ಸರ್ಕಾರಿ ಪದವಿಪೂರ್ವ ಕಾಲೇಜು, ಐಟಿಐ ಕಾಲೇಜು, ರೈತ ಸಂಪರ್ಕ ಕೇಂದ್ರ ಸೇರಿ ಹಲವು ಸರ್ಕಾರಿ ಕಚೇರಿಗಳು ಸಹ ಕಾರ್ಯನಿರ್ವಹಿಸುತ್ತಿವೆ. ಮುಖ್ಯವಾಗಿ ಟೇಕಲ್ ಸುತ್ತ ಮುತ್ತಲು ಕಲ್ಲುಗಣಿಗಾರಿಕೆ ನಡೆಯುವುದರಿಂದ ನೂರಾರು ಸಂಖ್ಯೆಯಲ್ಲಿ ಲಾರಿಗಳು ಸಂಚಾರ ಮಾಡುತ್ತವೆ. ಟೇಕಲ್ನಲ್ಲಿ ರೈಲ್ವೆ ನಿಲ್ದಾಣ ಇದ್ದು, ಅರ್ಧ ಗಂಟೆಗೊಮ್ಮೆ ರೈಲುಗಳು ಸಂಚಾರ ಮಾಡುವುದರಿಂದ ಕಾಯುವ ಪರಿಸ್ಥಿತಿ ನಿಮಾರ್ಣವಾಗಿತ್ತು.
ರೈಲ್ವೆ ಕ್ರಾಸಿಂಗ್ಗೆ ಮುಕ್ತಿ ಕಾಣಿಸಬೇಕು ಎಂಬುದು ಬಹುದಿನಗಳ ಬೇಡಿಕೆಯಾಗಿತ್ತು. ಹಿಂದಿನ ಸಂಸದರ ಮೂಲಕ ರೈಲ್ವೆ ಇಲಾಖೆ ಅಧಿಕಾರಿಗಳ ಮೇಲೆ ಒತ್ತಡ ತಂದು ಸೇತುವೆ ಮಂಜೂರು ಮಾಡಿಸಿದರು. ಇದೀಗ ಬಹುತೇಕ ಕಾಮಗಾರಿ ಮುಗಿದಿದ್ದು, ಶ್ರೀದಲ್ಲೇ ಸಾರ್ವಜನಿಕರ ಉಪಯೋಗಕ್ಕೆ ಕಲ್ಪಿಸಲಾಗುವುದು. ಕೆ.ವೈ.ನಂಜೇಗೌಡಶಾಸಕ, ಮಾಲೂರುಜನ ಅನುಭವಿಸುತ್ತಿದ್ದ ಸಮಸ್ಯೆ ಬಗ್ಗೆ ಗಮನಕ್ಕೆ ತಂದರು. ಸರ್ಕಾರದ ಮೇಲೆ ಒತ್ತಡ ಹೇರಿದ ಕಾರಣ ಸ್ಪಂದನೆ ಸಿಕ್ಕಿತು. ಕಾಮಗಾರಿಯು ಕೆಲವೇ ವರ್ಷಗಳಲ್ಲಿ ಪೂರ್ಣಗೊಂಡಿದೆ. ಜಿಲ್ಲೆ, ಹೊರ ರಾಜ್ಯದ ಜನತೆಗೂ ಅನುಕೂಲವಾಗಲಿದೆ. ಎಸ್.ಮುನಿಸ್ವಾಮಿಮಾಜಿ ಸಂಸದ, ಕೋಲಾರಟೇಕಲ್ ಭಾಗದಲ್ಲಿ ರೈಲು ಸಂಚಾರ ಹೆಚ್ಚಾಗಿರುವುದರಿಂದ ರಸ್ತೆ ದಾಟಲು ಸಮಸ್ಯೆ ಎದುರಾಗಿತ್ತು, ಇದೀಗ ಸೇತುವೆ ಕಾಮಗಾರಿ ಮುಗಿಯುವ ಹಂತಕ್ಕೆ ಬಂದಿದ್ದು, ಬಾಕಿ ಕೆಲಸ ಮುಗಿಸಿ ಸಾರ್ವಜನಿಕರ ಅನುಕೂಲಕ್ಕೆ ಅನುವು ಮಾಡಿಕೊಡಬೇಕು.ಕದಿರಪ್ಪತೊರಲಕ್ಕಿ