ಮಹಾವೀರ ಶಾಲೆಯಲ್ಲಿ ಪ್ಲೈಯಿಂಗ್ ಆಫೀಸರ್ ಗೆ ಸನ್ಮಾನ

IMG_20250620_210527_731.jpg
Published on

ಹುಬ್ಬಳ್ಳಿ: ಇಲ್ಲಿಯ ಮಹಾವೀರ ಶಿಣ ಸಂಸ್ಥೆಯ ಹಳೇ ವಿದ್ಯಾರ್ಥಿ ಪ್ಲೈಯಿಂಗ್ ಆಫೀಸರ್ ಆಗಿ ಸೇವೆ ಸಲ್ಲಿಸುತ್ತಿರುವ ಹಿನ್ನೆಲೆಯಲ್ಲಿ ಶುಕ್ರವಾರ ಸಂಸ್ಥೆಯಲ್ಲಿ ಅವರನ್ನು ಸನ್ಮಾನಿಸಲಾಯಿತು.

ಕೇಂದ್ರ ಲೋಕಸೇವಾ ಆಯೋಗದ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿದ ಸಂಸ್ಥೆಯ ವಿದ್ಯಾರ್ಥಿ ಶಶಾಂಕ ಎಸ್. ಅವಲಕ್ಕಿ ಇವರು ಕೇಂದ್ರ ಸರ್ಕಾರ ಸ್ವಾಮ್ಯದ ವಿಮಾನಯಾನ ಸಂಸ್ಥೆಯಲ್ಲಿ ಪ್ಲೈಯಿಂಗ್ ಆಫೀಸರ್ ಆಗಿ ಕಳೆದ 7 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ.

ಇವರು ಮುಂದಿನ ದಿನಗಳಲ್ಲಿ ಫೈಟರ್ ಜೆಟ್ ಯುದ್ಧ ವಿಮಾನ ತರಬೇತಿಗೆ ತೆರಳುವ ನಿರೀಕ್ಷೆ ಇದೆ. ಸಾಮಾನ್ಯ ವಿದ್ಯಾರ್ಥಿಯಾಗಿದ್ದ ಶಶಾಂಕ ಅವರು, ಸಂಸ್ಥೆ ಹಾಗೂ ತಂದೆ ತಾಯಿಯ ಪ್ರೋತ್ಸಾಹದಿಂದ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳನ್ನು ಪಡೆದು ಆಯ್ಕೆಯಾಗಿದ್ದಾರೆ. ಅವರನ್ನು ಸಂಸ್ಥೆಯಲ್ಲಿ ಆತ್ಮೀಯವಾಗಿ ಸನ್ಮಾನಿಸಲಾಯಿತು.

ಮಹಾವೀರ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಆರ್.ಟಿ. ತವನಪ್ಪನವರ, ಉಪಾಧ್ಯಕ್ಷ ಆರ್.ಟಿ. ಅಣ್ಣಿಗೇರಿ, ಕಾರ್ಯದರ್ಶಿ ವಿಮಲಕೀರ್ತಿ ತಾಳಿಕೋಟಿ, ಸಹ ಕಾರ್ಯದರ್ಶಿ ಅಶೋಕ ಶೆಟ್ಟೆಪ್ಪನವರ, ಖಜಾಂಚಿ ವಿಜಯ ಧರಣೆಪ್ಪನವರ, ನಿಕಟಪೂರ್ವ ಅಧ್ಯಕ್ಷ ಪ್ರೊ. ಎಸ್.ಕೆ. ಆದಪ್ಪನವರ ಉಪಸ್ಥಿತರಿದ್ದರು.

ಸಿಬ್ಬಂದಿ ಶೋಭಾ ಯಾವಗಲ್ಲ, ಕಾಂಚನ ನಾಗರಹಳ್ಳಿ, ರಾಜೇಶ್ವರಿ, ಭಾಗ್ಯವತಿ, ವಿಶ್ವ ವಿನಾಯಕ, ಮುಂತಾದವರು ಹಾಜರಿದ್ದರು.
ಅರ್ಚನಾ ಕಲಾಲ ಸ್ವಾಗತಿಸಿದರು. ರಾಜಶ್ರೀ ವೇರ್ಣೆಕರ, ಸುಮಾ ನೇಗಿನಾಳ ಕಾರ್ಯಕ್ರಮ ನಿರೂಪಿಸಿದರು. ದೀಪಾ ಪತ್ರಾವಳಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net