ಫ್ಲೋರೈಡ್ ಹೆಚ್ಚಳದಿಂದ ಆರೋಗ್ಯ ಸಮಸ್ಯೆ

07 Arakera Photo 01
Published on

ಅರಕೇರಾ: ಫ್ಲೋರೈಡ್ ನಮ್ಮ ದೇಹಕ್ಕೆ ಬೇಕಾದ ಖನಿಜಾಂಶ ಆಗಿದೆ. ಆದರೆ ಸೇವಿಸುವ ಆಹಾರ ಮತ್ತು ಕುಡಿಯುವ ನೀರಿನಲ್ಲಿ ಅವಶ್ಯಕ್ಕಿಂತ ಹೆಚ್ಚು ಫ್ಲೋರೈಡ್ ಇದ್ದರೆ ಫ್ಲೋರೋಸಿಸ್ ಉಂಟಾಗಲಿದೆ ಎಂದು ಜಿಲ್ಲಾ ಫ್ಲೋರೋಸಿಸ್ ವಿಭಾಗದ ಸಲಹೆಗಾರ ಗುರುಪ್ರಸಾದ್ ಹೇಳಿದರು.

ಬಿ.ಗಣೇಕಲ್ ಗ್ರಾಮದಲ್ಲಿ ಫ್ಲೋರೋಸಿಸ್ ಜಾಗೃತಿ ಕಾರ್ಯಕ್ರಮದಲ್ಲಿ ಶುಕ್ರವಾರ ಮಾತನಾಡಿದರು. ಬೋರ್‌ವೆಲ್ ನೀರಿನಲ್ಲಿ ಫ್ಲೋರೈಡ್ ಅಂಶ ಹೆಚ್ಚಿರುವ ಕಾರಣ ಎಲ್ಲರೂ ಶುದ್ಧ ನೀರನ್ನೇ ಕುಡಿಯಬೇಕು. ಫ್ಲೋರೈಡ್ ಅಂಶ ಹೆಚ್ಚಿರುವ ನೀರಿನ ಸೇವನೆಯಿಂದ ಹಲ್ಲುಗಳು ಕಂದು ಬಣ್ಣಕ್ಕೆ ತಿರುಗುತ್ತವೆ. ವಯಸ್ಕರಲ್ಲಿ ಮೊಣಕಾಲು ನೋವು ಹಾಗೂ ಮೂಳೆಗಳ ಬಾಗುವಿಕೆ ಉಂಟಾಗಿ ನಡೆದಾಡಲು ಕಷ್ಟವಾಗುತ್ತದೆ ಎಂದರು.

ಬಿಎಚ್‌ಇಒ ಗೀತಮ್ಮ ಮಾತನಾಡಿ, ಫ್ಲೋರೈಡ್ ಮುಕ್ತ ನೀರು ಬಳಸಬೇಕು. ಸಿ ಅನ್ನಾಂಗ ಹೆಚ್ಚಿರುವ ನಿಂಬೆಹಣ್ಣು, ನೆಲ್ಲಿಕಾಯಿ, ಕಿತ್ತಳೆ, ಮೋಸಂಬಿ, ಸೀಬೆ, ಹಣ್ಣುಗಳನ್ನು ಸೇವಿಸಬೇಕು. ಕ್ಯಾಲ್ಸಿಯಂ ಹೆಚ್ಚಿರುವ ಪದಾರ್ಥಗಳಾದ ಹಾಲು, ಬೆಲ್ಲ, ಹಸಿರು ಸೊಪ್ಪು, ತರಕಾರಿಗಳು, ರಾಗಿ ಮುಂತಾದವುಗಳನ್ನು ಸೇವಿಸುವುದರಿಂದ ಫ್ಲೋರೋಸಿಸ್ ನಿಯಂತ್ರಿಸಬಹುದು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net