ರಸ್ತೆಗೆ ಹೂವು ಸುರಿದು ಅನ್ನದಾತರ ಪ್ರತಿಭಟನೆ, ಸಾಲದ ಮೇಲಿನ ಬಡ್ಡಿ ಹಾಗೂ 6 ತಿಂಗಳ ವಿದ್ಯುತ್ ಬಿಲ್ ಮನ್ನಾ ಮಾಡಿ

10 Rural 1
Published on

ದೊಡ್ಡಬಳ್ಳಾಪುರ ಗ್ರಾಮಾಂತರ: ಹೂವಿಗೆ ಪರ್ಯಾಯ ಮಾರುಕಟ್ಟೆ ಕಲ್ಪಿಸಿ ನಷ್ಟದಲ್ಲಿರುವ ಬೆಳೆಗಾರರಿಗೆ ಸರ್ಕಾರ ಸಹಾಯಧನ ಹೆಚ್ಚಿಸಬೇಕು ಎಂದು ಒತ್ತಾಯಿಸಿ ನಗರದ ಕೊಡಿಗೆಹಳ್ಳಿ ಸಮೀಪ ರಾಷ್ಟ್ರೀಯ ಹೆದ್ದಾರಿಯಲ್ಲಿ ಹೂವು ಸುರಿದು ಪಾಲಿಹೌಸ್ ರೈತರು ಭಾನುವಾರ ಪ್ರತಿಭಟನೆ ನಡೆಸಿದರು.

3 ತಿಂಗಳಿನಿಂದ ವ್ಯಾಪಾರವಿಲ್ಲದೆ ಹೂವು ಬೆಳೆಗಾರರು ಸಂಕಷ್ಟದಲ್ಲಿದ್ದು, ರಾಜ್ಯ ಸರ್ಕಾರ ೋಷಿಸಿರುವ ಹೆಕ್ಟೇರ್‌ಗೆ

25 ಸಾವಿರ ರೂ. ಸಹಾಯಧನ ಕೂಲಿಗಾರರ ತಿಂಗಳ ಸಂಬಳಕ್ಕೂ ಸಾಕಾಗುವುದಿಲ್ಲ ಎಂದು ಹಸಿರುಮನೆ ಹೂವು ಬೆಳೆಗಾರರ ಕ್ಷೇಮಾಭಿವೃದ್ಧಿ ಸಂಘದ ತಾಲೂಕು ಖಜಾಂಚಿ ಪಿ.ವೆಂಕಟೇಶ್ ಕೊಡಿಗೆಹಳ್ಳಿ ಆಕ್ರೋಶ ವ್ಯಕ್ತಪಡಿಸಿದರು.

ಕೂಡಲೇ ಕೇಂದ್ರ ಹಾಗೂ ರಾಜ್ಯ ಸರ್ಕಾರ ಪಾಲಿಹೌಸ್ ರೈತರಿಗೆ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿನ ಸಾಲದ ಮೇಲಿನ ಬಡ್ಡಿ ಹಾಗೂ 6 ತಿಂಗಳ ವಿದ್ಯುತ್ ಬಿಲ್ ಮನ್ನಾ ಮಾಡಿ ಸಹಾಯಧನ ಹೆಚ್ಚಿಸಬೇಕು ಎಂದು ಒತ್ತಾಯಿಸಿದರು.

ಭಾರತ ಸರ್ಕಾರದ ಸಹಾಯಧನ ಸಮಿತಿಯ ನಿರ್ದೇಶಕ ಶ್ರೀಕಾಂತ್ ಮಾತನಾಡಿ, ಪಾಲಿಹೌಸ್‌ನಲ್ಲಿ ಕನಿಷ್ಠ 8 ರಿಂದ 10 ಜನ ಕೆಲಸ ಮಾಡುತ್ತಿದ್ದು, ಅವರಿಗೆ ಪ್ರತಿ ತಿಂಗಳು ಸಂಬಳ ನೀಡಬೇಕಾಗಿದೆ. ಈಗಾಗಲೇ ಚೀನಾ ದೇಶದ ಪ್ಲಾಸ್ಟಿಕ್ ್ಲವರ್ ಹಾವಳಿಯ ನಡುವೆ ವ್ಯಾಪಾರ ಮಾಡುತ್ತಿರುವ ರೈತರ ಬದುಕು ಲಾಕ್‌ಡೌನ್‌ನಿಂದ ಸಾವಿನಂಚಿಗೆ ತಂದಿದೆ ಎಂದರು.

ರಾಷ್ಟ್ರೀಯ ಹೆದ್ದಾರಿಯಲ್ಲಿ ಒಂದು ಕಿಲೋಮೀಟರ್‌ನಷ್ಟು ದೂರ ಹೂವನ್ನು ಸುರಿದು ರೈತರು ಪ್ರತಿಭಟನೆ ಮಾಡಿದರು.

ಹೂವು ಬೆಳೆಗಾರರ ಸಂಘದ ತಾಲೂಕು ಅಧ್ಯಕ್ಷ ಎಸ್.ಚೆನ್ನರಾಮಯ್ಯ, ಉಪಾಧ್ಯಕ್ಷ ಬಿ.ಸತೀಶ್, ಕಾರ್ಯದರ್ಶಿ ಶ್ಯಾಮಸುಂದರ್, ಸಹಕಾರ್ಯದರ್ಶಿ ಜಿ.ಮಲ್ಲೇಶ್, ಹೂಬೆಳೆಗಾರರಾದ ಸಿ.ಡಿ ಸತ್ಯನಾರಾಯಣ, ಟಿ.ವಿ.ಲಕ್ಷ್ಮೀನಾರಾಯಣ, ಪಿ.ಅರವಿಂದ್, ಲಕ್ಷ್ಮೀಕಾಂತ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net