ಧಾರವಾಡ ಮಾರುಕಟ್ಟೆ ಭರ್ತಿ; ಹೂವು- ಹಣ್ಣು ಖರೀದಿ ಜೋರು

10 Dwd 5A
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ದಸರಾ ಹಬ್ಬದ ಅಂಗವಾಗಿ ನಗರದ ಮಾರುಕಟ್ಟೆಗಳು ಗುರುವಾರ ಜನರಿಂದ ಭರ್ತಿಯಾಗಿದ್ದವು. ಹಬ್ಬಕ್ಕೆ ಅಗತ್ಯ ವಸ್ತುಗಳ ಖರೀದಿಗಾಗಿ ಜನ ಸುಭಾಸ ಮಾರುಕಟ್ಟೆಗೆ ಮುಗಿಬಿದ್ದಿದ್ದರು.
ಶುಕ್ರವಾರ ನವರಾತ್ರಿ ಮತ್ತು ಶನಿವಾರ ವಿಜಯ ದಶಮಿ ಆಚರಣೆ ಇದೆ. ಹಬ್ಬಕ್ಕೆ ಅಗತ್ಯವಾದ ಹೂವು- ಹಣ್ಣು ಮತ್ತು ಪೂಜಾ ಸಾಮಗ್ರಿಗಳನ್ನು ಜನ ಗುರುವಾರವೇ ಖರೀದಿಸಿದರು.
ಹಬ್ಬಕ್ಕೆ ಪ್ರಮುಖವಾಗಿ ಫಲಪುಷ್ಪ ಬೇಕು. ಅವುಗಳಿಗೆ ಹೆಚ್ಚಿನ ಬೇಡಿಕೆ ಇದ್ದುದರಿಂದ ದರ ಕೊಂಚ ಏರಿಕೆಯಾಗಿತ್ತು. ಸೇರು ಕೆಜಿಗೆ 160 ರೂಪಾಯಿ, ಸೀತಾಫಲ 160 ರೂಪಾಯಿ, ಚಿಕ್ಕು 100 ರೂಪಾಯಿ, ದಾಳಿಂಬೆ 160 ರೂಪಾಯಿ, ಮೊಸಂಬಿ ಕೆಜಿಗೆ 100 ರೂಪಾಯಿಗೆ ಮಾರಾಟವಾದವು.
ಇನ್ನು ಹಬ್ಬದ ಹಿನ್ನೆಲೆಯಲ್ಲಿ ಥರಹೇವಾರಿ ಹೂವು, ಮಾಲೆಗಳ ಖರೀದಿ ಕಂಡುಬ0ತು. ಮಾರುದ್ದ ಚೆಂಡು ಹೂವು 60 ರೂಪಾಯಿ ಹಾಗೂ ಮಾರು ಸೇವಂತಿ ಹೂವು 30 ರೂಪಾಯಿಗೆ ಮಾರಾಟವಾದವು. ಮನೆ, ದೇವಸ್ಥಾನ, ವಾಹನಗಳಿಗೆ ಅಗತ್ಯ ಮಾಲೆಗಳಿಗೂ ಭಾರಿ ಡಿಮ್ಯಾಂಡ್ ಕಂಡುಬAತು. ಚೆಂಡು, ಸೇವಂತಿ ಮಾಲೆಗಳು 50ರಿಂದ 80 ರೂಪಾಯಿ ದರವಿತ್ತು. ಇನ್ನು ದೊಡ್ಡ ಗುಲಾಬಿ ಹೂವಿನ ಮಾಲೆಗಳು 400- 500 ರೂ. ದರಕ್ಕೆ ಮಾರಾಟವಾದವು. ಕೆಲ ದಿನಗಳಿಂದ ಮಂಕಾಗಿದ್ದ ಹೂವು- ಹಣ್ಣಿನ ವ್ಯಾಪಾರ ಹಬ್ಬದ ಮುನ್ನಾದಿನ ಗರಿಗೆದರಿದ್ದರಿಂದ ವ್ಯಾಪಾರಸ್ಥರು ಖುಷಿಯಾಗಿದ್ದರು.
ರೈತರು ತಮ್ಮ ಹೊಲದಲ್ಲಿ ಬೆಳೆದಿದ್ದ ಜೋಳದ ದಂಟುಗಳು, ಬಾಳೆ ದಿಂಡುಗಳನ್ನು ಮಾರುಕಟ್ಟೆಗೆ ತಂದು ಮಾರಾಟ ಮಾಡಿದರು. ಇನ್ನು ಸ್ವೀಟ್ ಅಂಗಡಿಗಳಲ್ಲೂ ಖರೀದಿ ಜೋರಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net